ಸಗರ ಸಾಹಿತ್ಯ ಸಮ್ಮೇಳನದಲ್ಲಿ ರಸ್ತಾಪುರ ಭೀಮಕವಿ ಕಡೆಗಣನೆ ಅಸಮಾಧಾನ

ಶಹಾಪುರ : ದಿನಾಂಕ ೨೪/೦೭/೨೦೨೩ರಂದು ಐತಿಹಾಸಿಕ ಭಾವೈಕ್ಯತೆಯ ತಾಣವಾದ ಸಗರನಾಡಿನ ತವರೂರು ಸಗರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಹಾಪೂರ ತಾಲೂಕಿನ ೩ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಸ್ತಾಪುರದ ಭೀಮಕವಿಗಳ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಇಲ್ಲದೆ ಇರುವುದು ಸಗರ ನಾಡಿನ ಕವಿ ಸಾಹಿತಿಗಳಿಗೆ ತೀವ್ರ ಅಸಮಾಧಾನಗೊಂಡಿದ್ದಾರೆ.
 ಆಯೋಜಕರು ಶಹಾಪೂರದ ತಾಲೂಕ ಕನ್ನಡ  ಸಾಹಿತ್ಯ ಪರಿಷತ್ತು ಈ ಹಿಂದೆ ನಡೆದ ಎರಡು  ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ, ಷಟ್ಪದಿಯ ಎಲ್ಲಾ ಪ್ರಕಾರಗಳಲ್ಲಿ ಸಾಹಿತ್ಯವನ್ನು ರಚಿಸಿದ ಅಭಿನವ ಕಾಳಿದಾಸನೆಂದು ಬಿರುದಾಂಕಿತನಾದ ಸುರುಪರ ಅರಸ ಮನಗೆದ್ದ ರಸ್ತಾಪೂರದ ಭೀಮಕವಿಗಳನ್ನು ಸುರುಪುರದ ಕನ್ಡಡ ಸಾಹಿತ್ಯ ಸಂಘವು ಸುರಪುರದ ಬಸ್ ನಿಲ್ದಾಣದ ಎದುರಿಗಿರುವ ತನ್ನ ಕಟ್ಟಡಕ್ಕೆ ರಸ್ತಾಪೂರದ ಭೀಮಕವಿಗಳ ಮಳಿಗೆ ಎಂದು ನಾಮಕರಣ ಮಾಡಿದ್ದಾರೆ.
ಆದರೆ ಸ್ವಂತ ನಮ್ಮ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಆ ಮಹಾ ಕವಿಗಗಳನ್ನು ಕಡೆಗಾಣಿಸುತ್ತಿದೆ ಎಂದು ಸಮ್ಮೇಳನದ ಆಮಂತ್ರಣ ಪತ್ರಿಕೆ ಗಮನಿಸಿದಾಗ ಕಂಡು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭೀಮಕವಿಗಳ ವಿಷಯದಲ್ಲಿ ಸಾಹಿತ್ಯ ಪರಿಷತ್ತು ಯಾಕೆ? ಈ ದೋರಣೆ ಪದೆ ಪದೆ ಅನುಸರಿಸುತ್ತಿದೆ ಎಂದು ಅರ್ಥವಾಗುತ್ತಿಲ್ಲ.ಈ ನಾಡಿನ  ಸಾಹಿತ್ಯಗಳಿಗೂ,ಸಾಹಿತ್ಯ ಪ್ರೇಮಿಗಳು ಹಾಗೂ ಕನ್ನಡ ನಾಡು ನುಡಿಗಾಗಿ ಹಂಬಲಿಸುವ ಮನಗಳಿಗೆ ಏಕೆ  ಅರ್ಥವಾಗುತ್ತಿಲ್ಲ ಎನ್ನುವುದೆ ಕಾಕತಾಳಿಯವಾಗಿದೆ ಎಂದು ಸಾಹಿತ್ಯಾಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

About The Author