ಬಸವರಾಜ ಪಾಟೀಲ ಯತ್ನಾಳ್ ಬೇಗ ಗುಣಮುಖರಾಗಲಿ

ಶಹಪುರ : ಅಧಿವೇಶನದಲ್ಲಿ ಗಟ್ಟಿ ಧ್ವನಿಯಾಗಿ ಮಾತನಾಡಿದ ನಾಯಕರು ಮತ್ತು ಹಿರಿಯರು ಬಿಜೆಪಿ ಶಾಸಕರಾದ ಬಸವರಾಜ ಪಾಟೀಲ ಯತ್ನಾಳ್ ಬೇಗನೆ ಚೇತರಿಸಿಕೊಳ್ಳಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಾಲೂಕು ಬಿಜೆಪಿ ಯುವ ಮುಖಂಡರಾದ ಕರಣ್ ಸುಬೇದಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.

       ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಂತಹ, ವಿರೋಧ ಪಕ್ಷದ ನಾಯಕರಂತೆ ಸರಕಾರದ ವಿರುದ್ಧ ಹರಿಹಾಯುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಏಕಾಏಕಿ ಅಧಿವೇಶನದಿಂದ ಮಾರ್ಷಲ್ಗಳ ಮುಖಾಂತರ ಹೊರಗೆ ಹಾಕಿರುವುದು ಖಂಡನೀಯ. ಬಸವರಾಜ ಪಾಟೀಲ ಯತ್ನಾಳ ಪ್ರಜ್ಞೆ ತಪ್ಪಿರುವುದರಿಂದ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ತಿಳಿಸಿದರು.

Leave a Reply

Your email address will not be published. Required fields are marked *