ಚೇತನ್ ಗೋನಾಯಕ್ ಮಹಾರಾಷ್ಟ್ರ ಮುಂಬೈ ಉಸ್ತುವಾರಿಯಾಗಿ ನೇಮಕ

ಕಲ್ಬುರ್ಗಿ : ಉತ್ತಮ ವಾಗ್ಮಿ, ಚುನಾವಣಾ ಚತುರ, ಭಾರತೀಯ ಯುವ ಕಾಂಗ್ರೆಸ್ಸಿನ ರಾಷ್ಟ್ರೀಯ ಮಾಧ್ಯಮ ಸಂಯೋಜಕರಾದ ಚೇತನ್ ಗೋನಾಯಕ ರವರಿಗೆ ತೆಲಂಗಣ ಮಹಾರಾಷ್ಟ್ರ ಮುಂಬೈ ಮಾಧ್ಯಮ ಮತ್ತು ಸಂವಹನ ಉಸ್ತುವಾರಿಯಾಗಿ ನೇಮಕ ಮಾಡಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಆದೇಶಿಸಿದೆ.

ಚೇತನ್ ಗೋನಾಯಕರವರು ತೆಲಂಗಾಣ ಉಸ್ತುವಾರಿಯಾಗಿ ರಾಷ್ಟ್ರದ ಗಮನ ಸೆಳೆದಿದ್ದರು. ಪ್ರಸ್ತುತ ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯವರಾದ ಚೇತನ್ ಗೋನಾಯಕ್ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಚುನಾವಣಾ ಕಾರ್ಯ ತಂತ್ರವನ್ನು ರೂಪಿಸಿ ಚುರುಕಿನ ಕಾರ್ಯವೈಖರಿಯಿಂದ ರಾಜ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದರು.ರಾಜ್ಯ ವಿಧಾನಸಭೆಯಲ್ಲಿ ಉತ್ತಮ ಕೆಲಸ ಮಾಡಿದ ಗೋನಾಯಕ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸಂಸದರಾದ ರಾಹುಲ್ ಗಾಂಧಿಯವರ ಮಾರ್ಗದರ್ಶನದಲ್ಲಿ ಹಾಗೂ ಮಾಧ್ಯಮ ಸಲಹೆಗಾರರಾಗಿ  ಕರ್ತವ್ಯ ನಿಭಾಯಿಸಿದ್ದಾರೆ. ಇದನ್ನು ಗುರುತಿಸಿದ ರಾಷ್ಟ್ರ ನಾಯಕರು ಮುಂಬೈ ಮತ್ತು ಮಹಾರಾಷ್ಟ್ರದ ಉಸ್ತುವಾರಿಯನ್ನಾಗಿ ನೇಮಕ ಮಾಡಿರುವುದು ಕಲ್ಯಾಣ ಕರ್ನಾಟಕದ ಎಮ್ಮೆಯ ವಿಚಾರವಾಗಿದೆ

Leave a Reply

Your email address will not be published. Required fields are marked *