ವಿಧಾನಸಭಾಧ್ಯಕ್ಷರಾದ ಯು ಟಿ ಖಾದರ್ ರವರಿಗೆ ಗ್ರೇಟ್ ಸನ್ ಆಫ್ ಇಂಡಿಯಾ ಪ್ರಶಸ್ತಿ, ಬಿ ಎಮ್ ಪಾಟೀಲ್ ಸನ್ಮಾನ

ಬೆಂಗಳೂರು : ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾದ ಯು ಟಿ ಖಾದರ್ ಅವರಿಗೆ ಗ್ರೇಟ್ ಸನ್ ಆಫ್ ಇಂಡಿಯಾ ಪ್ರಶಸ್ತಿಗೆ ಭಾಜನರಾಗಿದ್ದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷದ ವಕ್ತಾರರು ಹಾಗೂ ಮೊಣಕಾಲ್ಮೂರು ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳಾದ ಬಿ ಎಂ ಪಾಟೀಲ್ ರವರು ಯುಟಿ ಖಾದರ್ ಅವರಿಗೆ ಸನ್ಮಾನಿಸಿ ಗೌರವಿಸಿದರು. ವೈಚಾರಿಕ ಚಿಂತಕರಾದ ಖಾದರ್ ಅವರು  ಪ್ರಭುದ್ಧ ಮತ್ತು ಉತ್ತಮ ರಾಜಕಾರಣಿ.ವಿಧಾನಸಭಾ ಕಲಾಪಗಳನ್ನು ಅತ್ಯುತ್ತಮ ಮತ್ತು ಸುಗಮವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಮುಸ್ಲಿಂ ನಾಯಕರೊಬ್ಬರು ರಾಜ್ಯ ವಿಧಾನಸಭಾಧ್ಯಕ್ಷರಾಗಿರುವುದು ಕರ್ನಾಟಕ ರಾಜ್ಯದಲ್ಲಿಯೇ ಮೊದಲ ಬಾರಿ ಎಂದು ಪಾಟೀಲ್ ಹೇಳಿದರು

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಗೋಪಾಲಗೌಡ ರವರ ಅಧ್ಯಕ್ಷತೆಯಲ್ಲಿ ಇಂಡಿಯಾ ಕಾನ್ಫರೆನ್ಸ್ ಆಫ್ ಇಂಟಲೆಕ್ಚುವಲ್ ಸಂಸ್ಥೆಯಿಂದ ಕೊಡಮಾಡುವ ಪ್ರಶಸ್ತಿಯಾಗಿದ್ದು, ಖಾದರ್ ಅವರಿಗೆ ಈ ಪ್ರಶಸ್ತಿ ಲಭಿಸಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಾಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ವಾಹದ್, ಕಾಂಗ್ರೆಸ್ ಮುಖಂಡರಾದ ರೈಲ್ವೆ ವೇಣು, ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಾಯಕ ಶೆಟ್ಟರ್, ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *