ದೇವಾಲಯದ ಹುಂಡಿ ಕಳ್ಳತನ

ಯಾದಗಿರಿ : ಜಿಲ್ಲೆಯ ವಡಗೇರಾ ತಾಲೂಕಿನ ಬಸವಂತಪುರ ಗ್ರಾಮದ ಮರೆಮ್ಮ ದೇವಾಲಯದಲ್ಲಿ ಕಾಣಿಕೆ ಹುಂಡಿ ಕಳ್ಳತನವಾಗಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.ಕಳ್ಳರು ದೇವಸ್ಥಾನದ  ಹುಂಡಿಯಲ್ಲಿದ್ದ ನಾಣ್ಯಗಳು ನೋಟುಗಳು ಹಾಗೂ ಒಡವೆಗಳು ಸೇರಿ ಅಂದಾಜು 75 ರಿಂದ 85 ಸಾವಿರ ಹಣವಿರಬಹುದು. ಕಳ್ಳರು ಹುಂಡಿ ಒಡೆದು ಕಳ್ಳತನ ಮಾಡಿದ್ದಾರೆ  ಎಂದು ಮರೆಮ್ಮ ದೇವಿ ದೇವಸ್ಥಾನದ ಪೂಜಾರಿ ಮಾನಪ್ಪ ಬಸವರಾಜಪ್ಪ ವಿಶ್ವಕರ್ಮ  ಅವರು ಪೊಲೀಸರಿಗೆ ನೀಡಿದ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಗ್ರಾಮಸ್ಥರ ಪ್ರಕಾರ ಮರೆಮ್ಮ ದೇವಾಲಯದಲ್ಲಿ ಎಲ್ಲ ಜಾತಿ, ಧರ್ಮದವರು ಈ ದೇವಿಯನ್ನು ಪೂಜಿಸಿ ಆರಾಧಿಸುತ್ತಿದ್ದರು.ಹರಕೆ ಬೇಡಿಕೊಂಡ ಭಕ್ತರು ತಮ್ಮ ಶಕ್ತಿಯಾನುಸಾರ ಹುಂಡಿಯಲ್ಲಿ ಹಣ ಒಡವೆಗಳು ಕಾಣಿಕೆ ರೂಪದಲ್ಲಿ ಹಾಕುತ್ತಿದ್ದರು. ಅಂದಾಜು ಹಣ ಮತ್ತು ಒಡವೆ ಸೇರಿ ರೂ. 1.50 ಲಕ್ಷದಿಂದ 2  ಲಕ್ಷ ಇರಬಹುದು. ಕಳೆದ ಎರಡು ವರ್ಷದಿಂದ ಈ ಹುಂಡಿಯ ಹಣ ತೆಗೆದಿರಿರಲಿಲ್ಲ ಎನ್ನುವ ಸುದ್ದಿ ಗ್ರಾಮದಲ್ಲಿ ಹರಿದಾಡುತ್ತಿದೆ.ಘಟನಾ ಸ್ಥಳಕ್ಕೆ ಪಿಐ ಚನ್ನಯ್ಯ ಹಿರೇಮಠ, ಕ್ರೈಂ ಪಿಎಸ್ಐ ಶ್ಯಾಮ್ ಸುಂದರ್ ನಾಯಕ್ ಶ್ವಾನ ದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

About The Author