ಮಹಾಶೈವ ಧರ್ಮಪೀಠ ವಾರ್ತೆ : ಮಹಾಶೈವ ಧರ್ಮಪೀಠದಲ್ಲಿ 54ನೆಯ’ ಶಿವೋಪಶಮನ ಕಾರ್ಯ’

ರಾಯಚೂರು : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಜುಲೈ 16 ರ ರವಿವಾರದಂದು 54 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ವಿಶ್ವೇಶ್ವರನ ಸನ್ನಿಧಿಯನ್ನರಸಿ ಶ್ರೀಕ್ಷೇತ್ರ ಕೈಲಾಸಕ್ಕೆ ಬಂದಿದ್ದ ಭಕ್ತರುಗಳಿಗೆ ಶಿವಾನುಗ್ರಹವನ್ನು ಕರುಣಿಸಿದರು.

ವಿಶ್ವನಿಯಾಮಕನಾಗಿರುವ ಪರಶಿವನು ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ವಿಶ್ವೇಶ್ವರನಾಗಿ ಪ್ರಕಟಗೊಂಡು ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರ ಮೂಲಕ ಜಗದೋದ್ಧಾರ ಲೀಲೆಯನ್ನಾಡುತ್ತಿರುವನು.ತನ್ನ ಸನ್ನಿಧಿಗೆ ಬಂದ ಭಕ್ತರ ಸರ್ವವಿಧ ಸಂಕಷ್ಟಗಳನ್ನು ಕಳೆದು ಅವರಿಗೆ ಸಕಲ ಸಂಪದಭಿವೃದ್ಧಿಗಳನ್ನಿತ್ತು ಪೊರೆಯುತ್ತಿರುವದರಿಂದ ರಾಜ್ಯದ ದೂರದೂರದ ಊರುಗಳಿಂದಲ್ಲದೆ ಆಂಧ್ರಪ್ರದೇಶ,ತೆಲಂಗಾಣ ಮತ್ತು‌ ಮಹಾರಾಷ್ಟ್ರಗಳಿಂದ ಪ್ರತಿ ರವಿವಾರವೂ ಭಕ್ತರು ಮಹಾಶೈವ ಧರ್ಮಪೀಠವನ್ನರಸಿ ಬರುತ್ತಿದ್ದಾರೆ.ಮಹಾಶೈವ ಧರ್ಮಪೀಠದಲ್ಲಿ ಪ್ರತಿರವಿವಾರ ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನದ ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಿರುವುದರಿಂದ ದೂರದೂರದ ಊರುಗಳಿಂದ ಮಕ್ಕಳು,ಮುದುಕರೊಂದಿಗೆ ಬರುತ್ತಿರುವ ಭಕ್ತರುಗಳಿಗೆ ಯಾವ ತೊಂದರೆಯೂ ಆಗುವುದಿಲ್ಲ. ವೈದ್ಯರುಗಳಲ್ಲಿ ತೋರಿಸಿಕೊಂಡು ಗುಣಮುಖರಾಗದ ಅಸಾಧ್ಯರೋಗಪೀಡಿತರು ಪ್ರತಿವಾರವು ಪರಿಹಾರವನ್ನರಸಿ ವಿಶ್ವೇಶ್ವರ ಶಿವನ ಸನ್ನಿಧಿಗೆ ಬರುತ್ತಿದ್ದಾರೆ.ಮಹಾಶೈವ ಧರ್ಮಪೀಠದ ನಿಕಟವರ್ತಿಗಳಲ್ಲೊಬ್ಬರೂ ಬಾಗಲವಾಡ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ಮಲ್ಲಿಕಾರ್ಜುನ ಬಾಗಲವಾಡ ಅವರು ವೈದ್ಯರ ತಪ್ಪಿನಿಂದಾಗಿ ಹುಟ್ಟಿನಿಂದಲೇ ಎರಡು ಕಾಲುಗಳನ್ನು ಕಳೆದುಕೊಂಡ ಅವರ ಅಳಿಯ ರಾಮಕುಮಾರ ಒಡೆಯರ್ ಅವರನ್ನು ಕರೆದುಕೊಂಡು ಬಂದಿದ್ದು ಇಂದಿನ‌ ವಿಶೇಷವಾಗಿತ್ತು.ರಾಮಕುಮಾರ ಒಡೆಯರ ಅವರ ಮನೆತನವು ಮಹಾರಾಷ್ಟ್ರದ ಅಚ್ಛೇಗಾಂವ್ ಗ್ರಾಮದ ಅಮೋಘಸಿದ್ಧ ಪರಂಪರೆಯ ದೇವಸ್ಥಾನಗಳ ಅರ್ಚಕರು ಮತ್ತು ಗುರುಗಳ ಮನೆತನವಾಗಿದೆ.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಗುರುಬಸವ ಹುರಕಡ್ಲಿ,ಶರಣಗೌಡ ಹೊನ್ನಟಗಿ, ಚನ್ನಪ್ಪ ಗೌಡ ಮಾಲಿಪಾಟೀಲ್,ಉಮೇಶ ಸಾಹುಕಾರ ಅರಷಣಗಿ, ಬೊಮ್ಮನಾಳ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾರೂ ಶಕ್ತಿ ಉಪಾಸಕರು ಮತ್ತು ಗಬ್ಬೂರಿನ ಗಾಯತ್ರಿ ಆಶ್ರಮದ ಮುಖ್ಯಸ್ಥರಾಗಿರುವ ಉದಯಕುಮಾರ ಪಂಚಾಳ,ಸಿದ್ರಾಮಯ್ಯ ಸ್ವಾಮಿ ಹಳ್ಳಿ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ,ಚಿತ್ರಕಲಾವಿದ ಶರಣಪ್ಪ ಬೂದಿನಾಳ, ಯಲ್ಲಪ್ಪ ಕರಿಗಾರ,ಭೀಮಣ್ಣ ಮಸೀದಪುರ,ಜಂಬಣ್ಣ ಸುಲ್ತಾನಪುರ,ಪತ್ರಕರ್ತ ಏಳುಬಾವೆಪ್ಪ ಗೌಡ ಮತ್ತು ಮಹಾಶೈವ ಧರ್ಮಪೀಠದ ಪ್ರಸಾರ ವ್ಯವಸ್ಥಾಪಕ ಉದಯಕುಮಾರ ಮಡಿವಾಳ ಸೇರಿದಂತೆ ಮಹಾಶೈವ ಧರ್ಮಪೀಠದ ಕಾರ್ಯಕರ್ತರುಗಳು,ಭಕ್ತರುಗಳು ಪಾಲ್ಗೊಂಡಿದ್ದರು.

About The Author