ಗ್ರಾಮೀಣ ಭಾಗದ ಸೇವೆ ತೃಪ್ತಿ ತಂದಿದೆ : ಡಾ.ನಿಮ್ರಾ ಶಿರೀನ್ 

ಯಾದಗಿರಿ : ತಾಲೂಕಿನ ಬೆಂಡೆಬೆಂಬಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಿಮ್ರಾ ಶಿರೀನ್ ವರ್ಗಾವಣೆ ನಿಮಿತ್ಯ ಸಿಬ್ಬಂದಿ ವರ್ಗದವರು ಬೀಳ್ಕೊಡುಗೆ  ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಂಡಿದ್ದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಸುಮಾರು ಎರಡು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದು ತುಂಬಾ ತೃಪ್ತಿ ತಂದಿದೆ.
ಗ್ರಾಮೀಣ ಭಾಗದ  ಸಾರ್ವಜನಿಕರ ಸೇವೆ ಮಾಡುವುದು ಅತಿ ಪುಣ್ಯದ ಕೆಲಸ. ಶ್ರದ್ಧಾ ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದೇನೆ. ಕೊರೋನಾದಂತಹ ಕಠಿಣ ಸಂದರ್ಭದಲ್ಲೂ ಕೂಡ ಹಗಲಿರಲು ರೋಗಿಗಳ ಸೇವೆಗೆ ನಾನು ಮತ್ತು ನಮ್ಮ ಸಿಬ್ಬಂದಿ ವರ್ಗ ಶ್ರಮಿಸಿದ್ದೇವೆ.
ನನಗೆ ಮೇಲಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ  ಹಾಗೂ ಅಂಗನವಾಡಿ ಆಶಾ ಕಾರ್ಯಕರ್ತರು ಸಂಪೂರ್ಣ ಸಹಕಾರ ನೀಡಿದ್ದಾರೆ. ಅದನ್ನು ನಾನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.ಸನ್ಮಾನಿಸಿದ ಎಲ್ಲಾ ಸಿಬ್ಬಂದಿ ವರ್ಗದವರಿಗೂ ಅಭಿನಂದನೆಗಳು ತಿಳಿಸಿದರು.
ಈ ಸಂದರ್ಭದಲ್ಲಿ ವಡಗೇರಾ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿ ಡಾ. ಜಗನ್ನಾಥರೆಡ್ಡಿ ತಂಗಡಗಿ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಂಗಣ್ಣ ನಾಯಕ ನುಚ್ಚಿನ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಲ್ಲೇಶಪ್ಪ ಹೊಸಮನಿ ನಿವೇದಿತ ಲಕ್ಷ್ಮಿ ರವಿಕುಮಾರ ಚಂದ್ರಶೇಖರ್ ರೆಡ್ಡಿ ಮಾರುತಿ ಪ್ರಸಾದ್ ದೇವದುರ್ಗ ಮಾಳಿಂಗರಾಯ ಹೂತಪೇಟ ಗುರುರಾಜ ಮಹಾಂತೇಶ ಪೂಜಾರಿ ಸಿದ್ದಯ್ಯ ಸ್ವಾಮಿ ಅರುಣ್ ಕುಮಾರ ಸಬೀನಾ ಸಂಜೀವ ಕಳ್ಳಿ ಅರುಣಾ ಕುಮಾರಿ ಪ್ರತಿಭಾ ಲೂರ್ಧಾ ಮೇರಿ ತಾಯಮ್ಮ ಸಚಿನ್ ಕದಂ ಹೈಯ್ಯಳಪ್ಪ ಗೊಂದೆನೂರ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಸಿಬ್ಬಂದಿ ವರ್ಗದ ಇದ್ದರು.

About The Author