ಜೈನ ಮುನಿ ಹತ್ಯೆ ಖಂಡಿಸಿ,ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿ ಜೈನ ಸಂಘ ಪ್ರತಿಭಟನೆ

ಶಹಾಪುರ : ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕು ಹಿರೇಕೋಡಿಯ ದಿಗಂಬರ ಜೈನಮುನಿ ಆಚಾರ್ಯ 108 ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ತಾಲೂಕ ಜೈನ ಸಮಾಜ ಸಂಘದ ವತಿಯಿಂದ ನಗರದ ಜೈನ್ ಕಲ್ಯಾಣ ಮಂಟಪದಿಂದ ಬಸವೇಶ್ವರ ಸರ್ಕಲ್ ವರೆಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು. ತಹಸಿಲ್ದಾರ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿದರು.

ಈ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜೈನ ಸಂಘದ ತಾಲೂಕ ಅಧ್ಯಕ್ಷ ಮಂಗಿಲಾಲ್ ಜೈನ್ ಅವರು, ಅಹಿಂಸೆಯೇ ಪರಮ ಧರ್ಮ ತತ್ವದ ಅಡಿಯಲ್ಲಿ ಶಾಂತಿ, ಸೌಹಾರ್ದತೆಯಿಂದ ಸಮಾಜದಲ್ಲಿ ಸಂಸ್ಕೃತಿ ಸಂಸ್ಕಾರ ಕಲಿಸುವುದರ ಜೊತೆಗೆ ಜನರನ್ನು ಸನ್ಮಾರ್ಗದ ಹಾದಿಯಲ್ಲಿ ನಡೆಯುವಂತೆ ದಾರಿ ತೋರಿಸುವ ಕೆಲಸ ಮಾಡುವ ಮುನಿವರ್ಯರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನೀಯ.

ಈ ಘಟನೆಯಿಂದ ಎಲ್ಲ ಧಾರ್ಮಿಕ ಗುರುಗಳು ಭಯ ಬೀತರಾಗಿದ್ದಾರೆ.ಇನ್ನು  ಸಾಮಾನ್ಯ ಜನರ ಪಾಡೇನು ? ಸರ್ಕಾರ ಧರ್ಮ ಗುರುಗಳ ರಕ್ಷಣೆ ಒದಗಿಸುವ ಕೆಲಸ ಮಾಡಬೇಕು. ಅವರಿಗೆ ರಕ್ಷಣೆ ನೀಡಿ, ದುಷ್ಕೃತ್ಯ ಎಸಗಿದ  ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆ ವಿಧಿಸಿದಾಗ ಮಾತ್ರ ಇಂತಹ ಅಹಿತಕರ ಘಟನೆ ತಡೆಗಟ್ಟಲು ಸಾಧ್ಯ ಎಂದು ಎಂದು ಅವರು ತಿಳಿಸಿದರು.

ಈ ಪ್ರತಿಭಟನೆಯಲ್ಲಿ ಸಂಘದ ಹಿರಿಯ ಮುಖಂಡರಾದ ವಿಕ್ರಂ ಬಂಡಾರಿ ಅಮೃತ ಲಾಲ್ ಜೈನ್, ಕುಬೇರಪ್ಪ ಜೈನ್, ರಾಜು ಜೈನ್, ಮುನ್ನ ಜೈನ್, ಲಲಿತ್ ಕುಮಾರ್ ಜೈನ್, ಆನಂದ್ ಜೈನ್, ಹಿತೀಶ್ ಜೈನ್, ಕಿರಣ್, ಮಹಾವೀರ ಜೈನ್, ಜಿನೇಂದ್ರ ಜೈನ್, ರಮೇಶ್ ಜೈನ್, ಗೌತಮ್ ಜೈನ್ ಸೇರಿದಂತೆ ಇತರರು ಇದ್ದರು.

About The Author