ಬಿಸಿಊಟ ನೌಕರರನ್ನು ಡಿ ಗ್ರೂಪ್ ನೌಕರರೆಂದು ಪರಿಗಣಿಸಲು ಒತ್ತಾಯಿಸಿ ಪ್ರತಿಭಟನೆ

ಶಹಾಪುರ: ಬಿಸಿಯೂಟ ನೌಕರರ ವೇತನ ಹೆಚ್ಚಳ, ಕನಿಷ್ಠ ವೇತನ ಜಾರಿಗಾಗಿ, ಡಿ ಗ್ರೂಪ್ ನೌಕರರೆÀಂದು ಪರಿಗಣಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘದಿAದ ತಾಲೂಕು ಪಂಚಾಯಿತಿ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿ, ತಾಲೂಕು ಪಂಚಾಯಿತಿ ಅಧಿಕಾರಿ ಮೂಲಕ ಶಿಕ್ಷಣ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

 

ಈ ವೇಳೆ ಮಾತನಾಡಿದ ಸಂಘದಗೌರವ ಅಧ್ಯಕ್ಷ ಸುನಂದ ಹಿರೇಮಠ್ ಅವರು, ಭಾರತ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಬಿಸಿಊಟ ಯೋಜನೆ ಯಶಸ್ವಿ ಹಿಂದೆ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಲವು ಬಾರಿ ಹೋರಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಕ್ಷರದಾಸೋಹ ನಕರರು ಕೆಲಸ ನಿರ್ವಹಿಸುವತ್ತಿರುವ ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಕಿರುಕುಳ ಜಾಸ್ತಿಯಾಗಿದೆ, ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದರುಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆ ಬಗೆಹರಿಸದೆ ನೀವೇ ಸಹಿಸಿಕೊಂಡು ಹೋಗಬೇಕು ಎಂದಉಪದೇಶ ಹೇಳುತ್ತಾರೆ ಎಂದುಅವರು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಈ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಸಂಘಟನೆತಾಲೂಕ ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ ೨೧ ವರ್ಷಗಳಿಂದ ಕೆಲಸ ನಿರ್ವಹಿಸುತ್ತಾ ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಈ ಮಹಿಳೆಯರ ತಾಯಿತನದ ಪರಿಶ್ರಮಾವಿದೆ.ದಿನಕ್ಕೆ ೬ ಗಂಟೆಗಳಿಗಿ0ತಲೂ ಅಧಿಕ ಸಮಯ ಕೆಲಸ ಮಾಡುತ್ತಿರುವಇವರ ಪರಿಶ್ರಮವನ್ನು ಗುರುತಿಸಿ ಕನಿಷ್ಠ ೨೧ಸಾವಿರ ವೇತನ ನೀಡಬೇಕಿದೆ.ಬಿಸಿ ಊಟ ನೌಕರರನ್ನು ಶಿಕ್ಷಣ ಇಲಾಖೆ ಯಜವಾಬ್ದಾರಿಗೆ ಸಂಪೂರ್ಣವಾಗಿ ತಂದು ಇವರ ನ್ಯಾಯೋಚಿತ ಬೇಡಿಕೆಗೆ ಸರ್ಕಾರ ಸ್ಪಂದಿಸದೆಇರುವುದುದುರದೃಷ್ಟಕರ ಸಂಗತಿಯಾಗಿದೆ.

 

ರಾಜ್ಯದಲ್ಲಿ ಸುಮಾರು ವರ್ಷದಿಂದ ನಿಸ್ವಾರ್ಥ ಹಾಗೂ ಪ್ರಮಾಣಿಕತೆಯಿಂದ ದುಡಿದ ಸುಮಾರು ೬,೫೦೦ ಅಕ್ಷರದಾಸೋಹ ನೌಕರರನ್ನು ೬೦ ವರ್ಷ ವಯಸ್ಸಾಗಿದೆಎಂದು ನಿವೃತ್ತಿಯ ಹೆಸರಲ್ಲಿ ನಯಾ ಪೈಸೆ ಪರಿಹಾರಕೊಡದೆ ಕೆಲಸದಿಂದತೆಗೆದು ಹಾಕಲಾಗಿದೆ. ಶಾಲೆಯಲ್ಲಿ ಈ ಕೆಲಸವನ್ನುಇವರೇ ಮಾಡುತ್ತಿರುವುದರಿಂದ ಈ ನೌಕರರನ್ನು ಡಿ ಗ್ರೂಪ್ ನೌಕರರೆಂದು ಪಣಿಸ ಪರಿಗಣಿಸಬೇಕುಎಂದುಅವರು ಒತ್ತಾಯಿಸಿದರು. ಸಂಘದತಾಲೂಕಅಧ್ಯಕ್ಷ ಹನುಮಂತಿ ಮೌರ್ಯ, ಮಾತನಾಡಿದರು.
ಈ ಪ್ರತಿಭಟನೆಯಲ್ಲಿಅಕ್ಷರದಾಸೋಹ ನೌಕರ ಸಂಘದ ಕಾರ್ಯದರ್ಶಿ ಈರಮ್ಮ ಹೈಯ್ಯಳ್ಕರ್, ಅಂಗನವಾಡಿ ನೌಕರ ಸಂಘದಅಧ್ಯಕ್ಷ ಬಸಲಿಂಗಮ್ಮ ನಾಟೆಕಾರ, ಇಂದಿರಾದೇವಿ ಕೊಂಕಲ್, ಲಾಲಬೀ ಶೆಟ್ಟಿಕೆರಾರಂಜಾನಬೀ, ಪಾರ್ವತಿ ಸಗರ, ಅನ್ನಪೂರ್ಣ, ಚಂದ್ರಕಲಾ, ಶಾಂತಮ್ಮ, ಶ್ರೀದೇವಿ, ರೇಣುಕಾ, ವಿಜಯಲಕ್ಷ್ಮಿ ಸೇರಿದಂತೆ ಅನೇಕ ನೌಕರರು ಭಾಗವಹಿಸಿದ್ದರು.

About The Author