ಎಲ್ಲಾ ವರ್ಗದವರನ್ನು ಸಮತೋಗಿಸಿದ ಬಜೆಟ್

ವಡಗೇರಾ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಎಲ್ಲ ವರ್ಗದ ಜನರನ್ನು ಸಮತೂಗಿಸಿದ ಬಜೆಟ್ ಆಗಿದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾದ ಮೌನೇಶ್ ಪೂಜಾರಿ ಶ್ಲಾಘಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೋಷಿತರ ಬಡವರ ಪರ ಅವರು ಮಂಡಿಸಿದ ಬಜೆಟ್ ನಲ್ಲಿ ಎಲ್ಲ ವರ್ಗದ ಧರ್ಮಜನಾಂಗದವರನ್ನು ಒಳಗೊಂಡಿದೆ. ಶೋಷಿತರಿಗೆ ಬಡವರಿಗೆ ಸೇರಿದಂತೆ ಎಲ್ಲ ವರ್ಗದವರಿಗೂ ಸಮಪಾಲು ಕೊಡಲಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು 14ನೇ ದಾಖಲೆ ಬಜೆಟ್ ಮಂಡಿಸಿದ್ದಾರೆ. ಯಾವ ಧರ್ಮ ಮತ್ತು ಜಾತಿಯನ್ನು ಆಧಾರವಾಗಿಟ್ಟುಕೊಂಡು ಬಜೆಟ್ ಮಂಡಿಸಿಲ್ಲ. ಎಲ್ಲ ವರ್ಗದವರನ್ನು ಸರಿದೂಗಿಸಿಕೊಂಡು ಮಂಡಿಸಿದ ಬಜೆಟ್ ಇದಾಗಿದೆ. ಹಿಂದುಳಿದ ವರ್ಗದವರು ಶೋಷಿತರು ಬಡವರ ಪರ ಬಜೆಟ್ ಮಂಡನೆಯಾಗಿದೆ. ರಾಜ್ಯದ ಅಭಿವೃದ್ಧಿಗಾಗಿ ಬೇಕಾದಂತಹ ಎಲ್ಲಾ ವಲಯಗಳಿಗೂ ಸರಿಯಾದ ರೀತಿಯಲ್ಲಿ ಹಣ ವಿಂಗಡನೆ ಮಾಡಲಾಗಿದೆ. ಸಮಚಿತ್ತವಾದ ಬಜೆಟ್ ಇದಾಗಿದೆ.
ಬಸವರಾಜ ಅತ್ನೂರು
ಕಾಂಗ್ರೆಸ್ ಮುಖಂಡ ಯಾದಗಿರಿ.

Leave a Reply

Your email address will not be published. Required fields are marked *