ಸಿದ್ದರಾಮಯ್ಯ ಸತ್ತರೆ ಮಳೆ ಬರುತ್ತದೆ ಎಂದು ಹೇಳಿದ ವ್ಯಕ್ತಿಯ ಹೇಳಿಕೆಗೆ ಬಿಎಮ್ ಪಾಟೀಲ್ ಕೆಂಡಾಮಂಡಲ ಬಂಧನಕ್ಕೆ  ಆಗ್ರಹ

ಬೆಂಗಳೂರು : ಐತಿಹಾಸಿಕ ಸ್ಥಳವಾದ ಮಂತ್ರಾಲಯದಲ್ಲಿ ಮಾತನಾಡಿದ ಮನುವಾದಿ ವ್ಯಕ್ತಿ  ಸಿದ್ದರಾಮಯ್ಯನವರು ಸತ್ತರೆ ಮಂತ್ರಾಲಯದ ನದಿ ನೀರು ತುಂಬಿ ಹರಿಯುತ್ತದೆ ಎಂದು ಹೇಳಿರುವುದು  ಖಂಡನೀಯ. ರಾಜ್ಯದ ಒಬ್ಬ ಮುಖ್ಯಮಂತ್ರಿಯವರಿಗೆ ಮಾಡಿದ ಅವಮಾನ. ಕೂಡಲೇ ಆ ವ್ಯಕ್ತಿಯನ್ನು ಬಂಧಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕೆಪಿಸಿಸಿ ರಾಜ್ಯ ವಕ್ತಾರರು ಮತ್ತು ಕರ್ನಾಟಕ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷರಾದ ಬಿಎಮ್ ಪಾಟೀಲ್ ಆಗ್ರಹಿಸಿದ್ದಾರೆ.

 ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವುದಕ್ಕೂ ಮಳೆ ಬಾರದೇ ಇರುವುದಕ್ಕೂ ಯಾವುದೇ ಸಂಬಂಧವಿಲ್ಲ. ಪ್ರಕೃತಿ ನಿಯಮ. ರಾಜ್ಯದ ಮಾಧ್ಯಮದವರು ಇದನ್ನು ಖಂಡಿಸಬೇಕಿದೆ. ರಾಜ್ಯದ ಹವಾಮಾನ ಇಲಾಖೆಯ ಪ್ರಕಾರ ಯಾವ ಸಮಯದಲ್ಲಿ ಮಳೆ ಬರುತ್ತದೆ ಎಂದು ತಿಳಿಸುತ್ತದೆಯೆ ಹೊರತು ರಾಜ್ಯದ ಮುಖ್ಯಮಂತ್ರಿಗಳಲ್ಲ. ಆಡಳಿತದ ವ್ಯವಸ್ಥೆಯಲ್ಲಿ ದುರುಪಯೋಗವಾದಾಗ, ಆಡಳಿತದ ವ್ಯವಸ್ಥೆಯ ಯೋಜನೆಗಳು ನಿಷ್ಕ್ರಿಯವಾದಾಗ ಅಂತಹ ವಿಚಾರಗಳನ್ನು ಪ್ರಸ್ತಾಪಿಸಬೇಕೆ ಹೊರತು ಅವಮಾನದ ನಿಷ್ಕೃತ್ಯವಾದ ಇಂತಹ ವಿಚಾರಗಳನ್ನು ಖಂಡಿಸುತ್ತೇವೆ ಎಂದು ಹೇಳಿದರು.