ಸಿದ್ದರಾಮಯ್ಯ ಸತ್ತರೆ ಮಳೆ ಬರುತ್ತದೆ ಎಂದು ಹೇಳಿದ ವ್ಯಕ್ತಿಯ ಬಂಧನಕ್ಕೆ ಮಂಜುಳಾ ನಾರಾಯಣ ಆಗ್ರಹ

ಶಹಾಪೂ,,ಮಂತ್ರಾಲಯದಲ್ಲಿ ಮನುವಾದಿಯೊಬ್ಬ ಸಿದ್ದರಾಮಯ್ಯ ಸತ್ತರೆ ಮಳೆ ಬಂದು ತುಂಗಭದ್ರ ನದಿ ತುಂಬುತ್ತದೆ ಎಂದು ಹೇಳಿರುವುದು ಖಂಡನೀಯ ಕೂಡಲೇ ಆ ವ್ಯಕ್ತಿಯನ್ನು ಬಂಧಿಸಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಜ್ಯ ಮಹಿಳಾ ಅಧ್ಯಕ್ಷರಾದ ಮಂಜುಳಾ ನಾರಾಯಣನ್ ಆಗ್ರಹಿಸಿದರು.
 ಜಿಲ್ಲಾಧಿಕಾರಿಗಳ ಮುಖಾಂತರ ಗೃಹ ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ರಾಜ್ಯದಲ್ಲಿ ಮಳೆ ಬಾರದೆ ಇರುವುದಕ್ಕೂ ಏನು ಸಂಬಂಧ. ಹಾಗಾದರೆ ಈ ಮುಂಚೆ ಇರುವ ಮುಖ್ಯಮಂತ್ರಿಗಳು ರಾಜ್ಯದಲ್ಲಿದ್ದಾಗ ಅತಿ ಹೆಚ್ಚು ಮಳೆಯಾಗಿ ಅನಾವೃಷ್ಟಿಯಾಗಿ ಮಳೆ ಬೆಳೆ ನಾಶವಾಗಿತ್ತು ಅದಕ್ಕೆ ಯಾರು ಹೊಣೆ ಎಂದು ಕಿಡಿ ಕಾರಿದರು.ಕೂಡಲೇ ಆ ವ್ಯಕ್ತಿಯನ್ನು ಬಂಧಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು

ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಜ್ಯಾಧ್ಯಕ್ಷರಾದ ಬಿಎಮ್ ಪಾಟೀಲ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಎಚ್ ಬಸವರಾಜ ಮಹಿಳಾ ಅಧ್ಯಕ್ಷರಾದ ಮಂಜುಳಾ ಕೃಷ್ಣ ಉಪಾಧ್ಯಕ್ಷರಾದ ಶರತ್ ಕೃಷ್ಣ ರಮೇಶ ಮಾಳಪ್ಪ ಗಣೇಶ ಮಲ್ಲೇಶ ರಾಜೇಶ ಸಂಘದ ಸಂಘಟನಾ ಕಾರ್ಯದರ್ಶಿಗಳು ಸೇರಿದಂತೆ ಇತರರು ಇದ್ದರು

Leave a Reply

Your email address will not be published. Required fields are marked *