ಸ್ವಚ್ಛತಾಗಾರರಿಗೆ ಘನತ್ಯಾಜ್ಯ ನಿವರ್ಹಣೆಗಾಗಿ ಕ್ಷೇತ್ರ ಭೇಟಿ : ಘನತ್ಯಾಜ್ಯ ನಿರ್ವಹಣೆ ಗ್ರಾಮ ಪಂಚಾಯತಿಯ ಮೊದಲ ಆದ್ಯತೆ ಕೆಲಸ : ಸೋಮಶೇಖರ ಬಿರೆದಾರ

ಶಹಾಪೂರ:ಪ್ರತಿ ಗ್ರಾಮ ಪಂಚಾಯತಗಳಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು  ಸೂಕ್ತರೀತಿಯಲ್ಲಿ ಮೂಲದಲ್ಲಿಯೇ ವಿಂಗಡಿಸಿ, ಸಂಗ್ರಹಿಸಿ, ವಿಲೇವಾರಿ ಹಾಗೂ ಸಂಸ್ಕರ್ಣೆ ಮಾಡುವ ಕೇಲಸ ಪ್ರತಿಯಲ್ಲಿ ಆದ್ಯತೆಯ ಮೇಲೆ ಅನುಷ್ಠಾನ ಮಾಡಬೇಕು ಇದು ಗ್ರಾಮ ಪಂಚಾಯತಿಯ ಮೂಲ ಕೆಲಸವಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳಾದ ಸೋಮಶೇಖರ ಬಿರೆದಾರ ಹೇಳಿದರು.
ಸ್ವಚ್ಛ ಭಾರತ ಮಿಷನ್ ಯೋಜನೆಯೆಡಿ  ತಾಲೂಕಿನ ಕೊಳ್ಳೂರ ಗ್ರಾಮ ಪಂಚಾಯತಿಯ ಸ್ವಚ್ಛ ಸಂಕೀರ್ಣ ಘಟಕದಲ್ಲಿ ಆಯೋಜಿಸಿರುವ ಗ್ರಾಮ ಪಂಚಾಯತಿಯ ಸ್ವಚ್ಛತಾಗಾರರಿಗೆ, & GPLF ನ ಸ್ವಚ್ಛತಾ ಸಿಬ್ಬಂದಿಯವರಿಗೆ ಕ್ಷೇತ್ರ ಭೇಟಿ ಹಾಗೂ ತರಬೇತಿಗಾರರಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು  ಉದ್ಘಾಟಿಸಿ, ಪ್ರತಿ ಗ್ರಾಮ ಪಂಚಾಯತಿಯಲ್ಲಿ ಆದ್ಯತೆಯ ಮೇಲೆ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಕಾರ್ಯಚರಣೆಯಲ್ಲಿಡಬೇಕು ಎಂದು  ಹೇಳಿದರು.
 ಪ್ರಾಸ್ತಾವಿಕ ಮಾತನಾಡಿದ ಐ.ಇ.ಸಿ ಸಮಾಲೋಚಕರಾದ  ಶಿವಕುಮಾರ  ಜಿಲ್ಲೆಯಲ್ಲಿಯೇ  ಘನತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣೆಯಲ್ಲಿ ಕೊಳ್ಳೂರ ಎಮ್ ಮಾದರಿ ಗ್ರಾಮ ಪಂಚಾಯತಿಯಾಗಿದೆ, ಈ ಕಾರ್ಯಕ್ಕಾಗಿ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರಿಗೆ ಜಿಲ್ಲಾ ಪಂಚಾಯತ ತಾಲೂಕ ಪಂಚಾಯತ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
ಕೊಳ್ಳೂರ ಎಮ್ ಸ್ವಚ್ಛ ಸಂಕೀರ್ಣ ಘಟಕದಲ್ಲಿ ಸಂಗ್ರಹಿಸಿ, ವಿಂಗಡಿಸಿ, ಸಂಸ್ಕರ್ಣೆ ಮಾಡುತ್ತಿರುವುದನ್ನು ಗ್ರಾಮ ಪಂಚಾಯತಿಯ ಸ್ವಚ್ಛತಾ ಸಿಬ್ಬಂದಿಯವರು ನೋಡಿ ಅದೇ ರಿತಿಯಲ್ಲಿ ಪ್ರತಿ ಗ್ರಾ.ಪಂ‌ಯಲ್ಲಿ ಪ್ರತಿ ಮನೆ, ಅಂಗಡಿ, ಹೋಟೆಲ್, ಇತರೆ ತ್ಯಾಜ್ಯ ಉತ್ಪಾದನೇಯ ಮೂಲಗಳಿಂದ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಿ,ಕಸವನ್ನು ಒಂದು ಸಂಪತ್ತು ಎಂಬುವುದನ್ನು ಗ್ರಾಮಸ್ಥರಿಗೆ ತಿಳಿಸಿ, ಗ್ರಾಮ ಸ್ವಚ್ಛತೆಯನ್ನು ಕಾಪಾಡಬೇಕು.ಪ್ರತಿ ದಿನ ಪ್ರತಿ ಮನೆಯಿಂದ ಸಾಮಾನ್ಯವಾಗಿ ಉಪಯೋಗಿಸಿ ಬಿಸಾಡಬಹುದಾದ ವಸ್ತುಗಳಾದ ಹಾಲಿನ ಪಾಕೇಟ, ಕುರಕುರಿ ಪಾಕೇಟ್ಸ, ಪ್ಲಾಸ್ಟಿಕ್ ಕವರ್, ಸಾಬೂನ ಕವರ್, ದಿನಸಿ ಅಂಗಡಿಯಿಂದ ತರಬಹುದಾದ ಕವರ್ ಗಳನ್ನು ತ್ಯಜೀಸಿ, ಹಸಿ ಕಸವನ್ನು ಗೊಬ್ಬರವನ್ನಾಗಿ ಮಾಡುಲು ಸೂಕ್ತರಿತಿಯಲ್ಲಿ ಸಂಗ್ರಹಿಸಿ ವಿಲೇವಾರಿ ಮಾಡುವ ವಿಧಾನಗಳನ್ನು ಪ್ರತ್ಯಕ್ಷವಾಗಿ ತೊರಿಸಲಾಯಿತು.
ಈ ಗ್ರಾಮ ಪಂಚಾಯತಿಯಲ್ಲಿ  ಒಟ್ಟು೧೧೫೦ ಮನೆಗಳಲ್ಲಿ ೮೩೦ ಮನೆಗಳು ಪ್ರತಿದಿನ ತ್ಯಾಜ್ಯ ಸ್ವಚ್ಛ ವಾಹಿನಿ ವಾಹನಕ್ಕೆ ನೀಡುತ್ತಿದ್ದು ಇದರಿಂದ ಸುಮಾರ್ ೫ ಟನ್ ಕಸವನ್ನು ಈ ಸ್ವಚ್ಛ ಸಂಕೀರ್ಣ ಘಟಕದಲ್ಲಿದೇ ಇದಕ್ಕೆ ಕಾರಣ ಗ್ರಾಮ ಪಂಚಾಯತಿಯವರ ಪರಿಶ್ರಮ & ಗ್ರಾಮಸ್ಥರ ಸಹಕಾರದಿಂದಾಗಿದೆ  ಎಂದು ಪ್ರಶಂಸೆ ಮಾಡಲಾಯಿತು.ಕೊಳ್ಳೂರ ಎಮ್ ಗ್ರಾ.ಪಂ.ಯ ಸ್ವಚ್ಛತಾ ಸಿಬ್ಬಂದಿಯಿಂದ ತ್ಯಾಜ್ಯ ವಿಂಗಡಣೆ ಮಾಡುತ್ತಿರುವುದನ್ನು   ತೊರಿಸಿ ಮಾಹಿತಿ ನೀಡಲಾಯಿತು.
ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ರಮೇಶ ನಾಯ್ಕ ಗ್ರಾಮ ಪಂಚಾಯತಿಯಲ್ಲಿ ಘಟಕದ ಕಾರ್ಯಚರಣೆಯ,   ಘಟಕ ನಿರ್ಮಾಣದಲ್ಲಿ ಗ್ರಾಮ ಪಂಚಾಯತ ಸದಸ್ಯರ ಪಾತ್ರ ಬಹುಮುಖ್ಯವಾಗಿತ್ತು , ಈ ಘಟಕವನ್ನು ಇನ್ನು ಮುಂದೆವು ಸಹ ಸುಸ್ಥಿತಿಯಲ್ಲಿ ಕಾರ್ಯಚರಣೆಯಲ್ಲಿಡುವುದಾಗಿ ಹೇಳಿದರು.ಸಹಾಯ ನಿರ್ದೇಶಕರಾದ ಭೀಮರಾಯ ಬಿರೆದಾರ  ಮಾತನಾಡಿ ಗ್ರಾಮದ ಸ್ವಚ್ಛತೆ ಕಾಪಾಡುವಲ್ಲಿ ಸ್ವಚ್ಛತಾ ಸಿಬ್ಬಂದಿಯ ಪಾತ್ರ ಪ್ರಮುಖವಾಗಿದೆ ಎಂದರು
ಈ ವೇಳೆ ಕೊಳ್ಳೂರು ಎಂ ಗ್ರಾಮ ಪಂಚಾತ ಅಧ್ಯಕ್ಷೆ ದೇವಮ್ಮ, ಶಹಾಪುರ ತಾಪಂ ಸಹಾಯಕ ನಿರ್ದೇಶಕರಾದ ಶ್ರೀ ಭೀಮರಾಯ ಬಿರಾದಾರ, ಪಿಡಿಒ ರಮೇಶ ನಾಯಕ, SBM ಜಿಲ್ಲಾ ಐಇಸಿ ಸಂಯೋಜಕ ಶಿವುಕುಮಾರ, TC ಮುಜಾಮಿಲ್, TAE ಪವನಕುಮಾರ, ಕಾರ್ಯದರ್ಶಿ ಮರದಾನೆಪ್ಪ, ಸಿಡಿಇಒ ಭೀಮಾಶಂಕರ, ಗ್ರಾಪಂ ಸದಸ್ಯರಾದ ಈರಣ್ಣಗೌಡ,ನರೇಗಾ ಐ.ಇ.ಸಿ ಸಂಯೋಜಕರಾದ ಬಸವರಾಜ್ ,  ದೇಕೆಮ್ಮ, ಅನಂತಮ್ಮ, ಪವಿತ್ರಾ, ಅಯ್ಯಣ್ಣ, ಭೀಮವ್ವ, ಸಾಹಸ ಸಂಸ್ಥೆಯ ಪ್ರತಿನಿಧಿಗಳು, ಕೆಲವು ಗ್ರಾಪಂಗಳ ಸ್ವಚ್ಛತಾಗಾರರು ಹಾಗೂ ಗ್ರಾಮಸ್

About The Author