ಈಶಾನ್ಯ ಪದವೀಧರ ಕ್ಷೇತ್ರ : ಕಾಂಗ್ರೆಸ್ ಪಕ್ಷದಿಂದ ರಾಷ್ಟ್ರೀಯ ಮಾಧ್ಯಮ ಸಂಯೋಜಕ ಚೇತನ್ ಗೋನಾಯಕ್ ಅರ್ಜಿ ಸಲ್ಲಿಕೆ

“ಚೇತನ್ ಗೋನಾಯಕ್ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮಾಧ್ಯಮ ಸಂಯೋಜಕರು”

ಯಾದಗಿರಿ : 2024ರ ಜೂನ್ ತಿಂಗಳಿನಲ್ಲಿ ರಾಜ್ಯದ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ವಿಧಾನ ಪರಿಷತ್ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮಾಧ್ಯಮ ಸಂಯೋಜಕರಾದ ಚೇತನ್ ಗೋನಾಯಕ್ ಚುನಾವಣಾ ಸ್ಪರ್ಧಾಕಾಂಕ್ಷಿಯಾಗಿ  ಕೆಪಿಸಿಸಿ ಬೆಂಗಳೂರಿನ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.ಪದವಿದರ ಯುವಕರು ಗೋನಾಯಕ ರವರಿಗೆ ಸಾತ್ ನೀಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯನ್ನೋಳಗೊಂಡಿದೆ.ಇನ್ನು ಚುನಾವಣೆಗೆ 11 ತಿಂಗಳು ಬಾಕಿ ಇದೆ. ಆದರೆ ಕಾಂಗ್ರೆಸ್ ಪಕ್ಷ ಈಗಲೇ ಚುನಾವಣೆ ತಯಾರಿ ನಡೆಸಿದ್ದು, ಅರ್ಜಿ ಸಲ್ಲಿಕೆಯನ್ನು ಪ್ರಾರಂಭಿಸಿದೆ. ಪ್ರಸ್ತುತ ಕಾಂಗ್ರೆಸ್ ಪಕ್ಷದಿಂದ ಡಾ. ಚಂದ್ರಶೇಖರ ಪಾಟೀಲ್ ವಿಧಾನ ಪರಿಷತ್ ಸದಸ್ಯರಾಗಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷ ಯಾರಿಗೆ ಟಿಕೆಟ್ ಕೊಡುತ್ತದೆಯೋ ಕಾದು ನೋಡಬೇಕಿದೆ. ಈಗಾಗಲೇ ಡಾ.ಕಿರಣ್ ದೇಶಮುಖ್, ತಿಪ್ಪಯ್ಯ ಪುರ್ಲೆ ಟಿಕೆಟ್ ಸಲ್ಲಿಸಿದ್ದಾರೆ.
ಯುವ ಚೇತನ ಮುತ್ಸದ್ದಿ ನಾಯಕ ಪಕ್ಷದ ಸಂಘಟನಾ ಚತುರನಾದ ಚೇತನ್ ಗೋನಾಯಕ್  ಸ್ಪರ್ಧಿಸಬೇಕು ಎನ್ನುವುದು ಯುವಕರ ಅಪೇಕ್ಷೆಯಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಕೆಲಸ ಮಾಡಿ ಪಕ್ಷದ ಗೆಲುವಿಗಾಗಿ ಶ್ರಮಿಸಿದ್ದಾರೆ. ಕಾಂಗ್ರೆಸ್ ಪಕ್ಷ ಯುವಕರಿಗೆ ಮನ್ನಣೆ ಕೊಡಬೇಕು ಎನ್ನುವುದು ಪಕ್ಷದ ಯುವ ಕಾರ್ಯಕರ್ತರ ಅಪೇಕ್ಷೆಯಾಗಿದೆ. ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರು ಪಕ್ಷದ ಗೆಲುವಿಗಾಗಿ ಶ್ರಮಿಸುತ್ತೇವೆ.
ಬಸವರಾಜ ಅತ್ನೂರು
ಕಾಂಗ್ರೆಸ್ ಮುಖಂಡ ಮತ್ತು ಸಿದ್ದರಾಮಯ್ಯ ಬ್ರಿಗೇಡ್ ಯಾದಗಿರಿ ಜಿಲ್ಲಾಧ್ಯಕ್ಷ

About The Author