ಶ್ರೀಗಳು ಸಿಎಂ ಸಿದ್ದರಾಮಯ್ಯನಿಗೆ ಪುಸ್ತಕ ನೀಡಿ ಅಭಿನಂದನೆಗಳು ಸಲ್ಲಿಸಿ 600 ಕಿ.ಮೀ ಪಾದಯಾತ್ರೆ ಮುಕ್ತಾಯ : ಅಯ್ಯಪ್ಪಗೌಡ ಗಬ್ಬೂರು

ಬೆಂಗಳೂರು.ಜು.10 : ಸಿದ್ದರಾಮಯ್ಯನವರು ಎರಡನೇ ಬಾರಿಗೆ ಸಿಎಂ ಆದರೆ ತಮ್ಮೂರಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡುವ ಸಂಕಲ್ಪ ಮಾಡಿದ್ದ ಶರಭಯ್ಯ ಮಹಾಸ್ವಾಮಿಗಳು 600 ಕ್ಕೂ ಹೆಚ್ಚು ಕಿ.ಮೀ ದೂರದವರೆಗೆ ಪಾದಯಾತ್ರೆ ಮಾಡಿದ್ದಾರೆ.ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರು ರೇವಣಸಿದ್ದೇಶ್ವರ ಶಾಖಾ ಮಠದ ಶರಭಯ್ಯ ಮಹಾಸ್ವಾಮಿಗಳು 21-6-2023 ಪಾದಯಾತ್ರೆ ಆರಂಭಿಸಿದವರು. ಇಂದಿಗೂ 19 ನೇ ದಿನ 600 ಕಿ.ಮೀ ನಡೆದಿದ್ದಾರೆ. ಸಿದ್ದರಾಮಯ್ಯ ಸಿಎಂ ನಿವಾಸಕ್ಕೆ ಭೇಟಿ ನೀಡಿ ಕಂಬಳಿ ಹೊದಿಸಿ ಪುಸ್ತಕ ನೀಡಿ ಅಭಿನಂದನೆಗಳು ತಿಳಿಸಿ ಪಾದಯಾತ್ರೆ ಮುಕ್ತಾಯವಾಯಿತು. ಎಂದು ಅಯ್ಯಪ್ಪಗೌಡ ಗಬ್ಬೂರು ರಾಜ್ಯ ಉಪಾಧ್ಯಕ್ಷರು ಕರ್ನಾಟಕ ಪ್ರದೇಶ ಕುರುಬರ ಸಂಘದ ಯುವ ಘಟಕ ಗಾಂಧಿನಗರ ಬೆಂಗಳೂರು ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಶ್ರೀಗಳು ಕುಟುಂಬದವರು ಮಾಂತು ಪೂಜಾರಿ, ಸುಂಬಡ ಮಾಹದೇವ ಪೂಜಾರಿ, ಅನ್ನೂರು ಮಾಳು ಪೂಜಾರಿ,ನಾಗರಾಜ್ ಎಮ್, ಶಶಿಕುಮಾರ್ ,ನಿಂಗಪ್ಪ ಸಿದ್ದು ಸಿಂದಗಿ ಶಿವಕುಮಾರ್ ಪೂಜಾರಿ ಶಂಕರವಾಡಿ ಡಾ.ಆನ೦ದ ಭಕ್ತಾದಿಗಳು ಪಾದಯಾತ್ರೆ ಮುಕ್ತಾಯಗೊಂಡಿತು.