ಸಿದ್ದರಾಮಯ್ಯ ಸಿಎಂ ಮನೆ ಕಡೆ 610km ಕಾಲ್ನಡಿಗೆಯಲ್ಲಿ ಪೂಜ್ಯ ಶರಭಯ್ಯ ಸ್ವಾಮೀಜಿಯವರು ಪಾದಯಾತ್ರೆ, ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಅಯ್ಯಪ್ಪಗೌಡ ಗಬ್ಬೂರು 

ಬೆಂಗಳೂರು : ಸಿದ್ದರಾಮಯ್ಯನವರು ಎರಡನೇ ಬಾರಿಗೆ ಸಿಎಂ ಆದರೆತ ಮ್ಮೂರಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡುವ ಸಂಕಲ್ಪ ಮಾಡಿದ್ದ ಶರಭಯ್ಯ ಮಹಾಸ್ವಾಮಿಗಳು 600 ಕ್ಕೂ ಹೆಚ್ಚು ಕಿ.ಮೀ ದೂರದವರೆಗೆ ಪಾದಯಾತ್ರೆ ನಡೆಸುತ್ತಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರು ರೇವಣಸಿದ್ದೇಶ್ವರ ಶಾಖಾ ಮಠದ ಶರಭಯ್ಯ
ಮಹಾಸ್ವಾಮಿಗಳು 21-6-2023 ಪಾದಯಾತ್ರೆ ಆರಂಭಿಸಿದವರು. ಇಂದಿಗೂ 18 ನೇ ದಿನ 600 ಕಿ.ಮೀ ನಡೆದಿದ್ದಾರೆ. ಈಗ ಬೆಂಗಳೂರು ಶಿವಾನಂದ ಸರ್ಕಲ್ ನಲ್ಲಿ ಪಾದಯಾತ್ರೆ ನಡೆಯುತ್ತಿದೆ. ಸಿದ್ದರಾಮಯ್ಯ ಸಿಎಂ ಮನೆ ಕಡೆ ಇನ್ನೂ 500 ಮೀಟರ್ ನಲ್ಲಿ ನಾಳೆ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಅಭಿನಂದನೆಗಳು ತಿಳಿಸಿ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ ಎಂದು ಸಮಾಜದ ಮುಖಂಡ ಸಿದ್ದರಾಮಯ್ಯ ಅಭಿಮಾನಿ ರಾಜ್ಯ ಕೆಪಿಸಿಸಿ ಕಾರ್ಮೀಕ ವಿಭಾಗದ ರಾಜ್ಯ ಉಪಾಧ್ಯಕ್ಷ ಕರ್ನಾಟಕ ಪ್ರದೇಶ ಕುರುಬರ ಸಂಘದ ಯುವ ಘಟಕದ ಉಪಾಧ್ಯಕ್ಷ ಅಯ್ಯಪ್ಪ ಗಬ್ಬೂರು ಸಾಥ್ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಸಾಮಾಜಿಕ ಹರಿಕಾರರು ಅಹಿಂದ ವರ್ಗದ ನಾಯಕರು ಎಲ್ಲ ಸರ್ವಜನಾಂಗದ ಧೀಮಂತ ನಾಯಕರಾಗಿದ್ದು ಅವರು ಮುಖ್ಯಮಂತ್ರಿಯಾಗಿದ್ದಾರೆ.ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಲೆಂದು ಹರಕೆ ಹೊತ್ತುಕೊಂಡಿದ್ದ ಪೂಜ್ಯ ಶರಭಯ್ಯ ಸ್ವಾಮೀಜಿಯವರು 600km ಪಾದಯಾತ್ರೆ ಕೈಗೊಂಡಿದ್ದಾರೆ.ನಾಳೆ ಮುಖ್ಯಮಂತ್ರಿಯವರ ನಿವಾಸಿ ತಲುಪಲಿದ್ದು ಪಾದಯಾತ್ರೆ ಅಂತ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಂತು ಪೂಜಾರಿ, ಸುಂಬಡ ಮಹದೇವ ಪೂಜಾರಿ, ಅನ್ನೂರು ಮಾಳು ಪೂಜಾರಿ,ನಾಗರಾಜ್ ಎಮ್,ಶಿವಕುಮಾರ್ ಪೂಜಾರಿ ಶಂಕರವಾಡಿ ಡಾ.ಆನ೦ದ ಭಕ್ತಾದಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

About The Author