ಸರಕಾರಿ ನೌಕರಿ ಕೊಡಿಸುವೆನೆಂದು ಲಕ್ಷಾನುಗಟ್ಟಲೆ ಹಣ ವಂಚಿಸಿದ ಬೆಂಗಳೂರು ಮೂಲದ ದೇವರಾಜ್ ಎನ್ನುವ ವ್ಯಕ್ತಿ ನ್ಯಾಯಾಲಯದಲ್ಲಿ ದೂರು ದಾಖಲು

ಯಾದಗಿರಿ : ಸರಕಾರಿ ನೌಕರಿ ಕೊಡಿಸುವೆನೆಂದು ಹೇಳಿ ಬೆಂಗಳೂರು ಮೂಲದ ದೇವರಾಜ ಎನ್ನುವ ವ್ಯಕ್ತಿ 20 ಲಕ್ಷಕ್ಕೂ ಅಧಿಕ ಹಣವನ್ನು ಲೂಟಿ ಮಾಡಿದ  ಘಟನೆ ನಡೆದಿದೆ.  ವಿಧಾನಸೌಧದಲ್ಲಿ ಸರಕಾರಿ ನೌಕರಿ ಕೊಡಿಸಿವೆ ಎಂದು ಹೇಳಿ 20 ಲಕ್ಷ ರೂಪಾಯಿ ತೆಗೆದುಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ದೇವರಾಜ ಎನ್ನುವ ವ್ಯಕ್ತಿ ಸರಕಾರಿ ವಿಕಾಸ ಸೌಧದಲ್ಲಿ ಐಎಎಸ್ ಅಧಿಕಾರಿಯ ವಾಹನ ಚಾಲಕನೆಂದು ಹೇಳಿಕೊಂಡು ವಿಧಾನಸೌಧದಲ್ಲಿರುವ ಐಎಎಸ್ ಅಧಿಕಾರಿಗಳಿಂದ  ಸರಕಾರಿ ಕೆಲಸ ಮಾಡಿಸಿ ಕೊಡುವೆನೆಂದು ಹೇಳಿಕೊಂಡಿದ್ದಾನೆ.ಮರಳಿ ಹಣವನ್ನು ಕೇಳಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎನ್ನುವುದರ ಬಗ್ಗೆ ಠಾಣೆಯಲ್ಲಿ ತಿಳಿಸಲಾಗಿದೆ.

ಸ್ವತಃ ಆತನ ಬ್ಯಾಂಕ್ ಖಾತೆಗೆ ಹಣ ಜಮಾಮಣಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ನಾಗರಾಜ ರವರ ಸಂಬಂಧಿಯಾದ ಬಸವರಾಜ ಶಹಾಪುರ ನಗರದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸಿದ್ದತೆ ನಡೆಸಿದ್ದು, ದೂರಿಗೆ ಸಂಬಂಧಿಸಿದಂತೆ ಬಸವರಾಜ ಪತ್ರಿಕ ಹೇಳಿಕೆ ನೀಡಿದ್ದಾನೆ. 2021 ರಲ್ಲಿ ಬ್ಯಾಂಕ್ ಖಾತೆಯ ಮುಖಾಂತರ 15 ಲಕ್ಷ ಮತ್ತು ನಗದು ರೂಪದಲ್ಲಿ 5 ಲಕ್ಷ ಕೊಡಲಾಗಿದೆ. ಈತನು ಸರಕಾರಿ ನೌಕರನೊ ಅಥವಾ ಹೊರಗುತ್ತಿಗೆ ನೌಕರನೊ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಸ್ಥಳೀಯ ಲೇವಾದೇವಿ ಸಹಕಾರಿ ಬ್ಯಾಂಕುಗಳಿಂದ ಇಪತ್ತು ಲಕ್ಷ ರೂಪಾಯಿಗಳನ್ನು ಸಾಲಮಾಡಿ ಕೊಡಲಾಗಿದ್ದು, ಮೂರು ವರ್ಷದ ಬಡ್ಡಿಯ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.

ದೇವರಾಜ ಎನ್ನುವ ವ್ಯಕ್ತಿ ಇದೇ ರೀತಿಯಾಗಿ ವಿಶೇಷವಾಗಿ ಉತ್ತರ ಕರ್ನಾಟಕದ ಮತ್ತು ಕಲ್ಯಾಣ ಕರ್ನಾಟಕದ ನಿರುದ್ಯೋಗಿಗಳೇ ಈತನ ಟಾರ್ಗೆಟ್ ಆಗಿದ್ದು, ಅಂತವರನ್ನು ಬಲೆಗೆ ಬೀಳಿಸಿಕೊಂಡು ಈ ರೀತಿಯ ವ್ಯವಹಾರ ಮಾಡುತ್ತಿದ್ದಾನೆ. ಇದೇ ರೀತಿಯಾಗಿ ಎಷ್ಟೋ ಜನರ ಜೀವನದಲ್ಲಿ ಆಟವಾಡಿದ್ದಾನೆ ಎಂದು ಅಂದಾಜಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಬಂಧಿ ಎಂದು ಹೇಳಿಕೊಂಡಿದ್ದಾನೆ.ನಾನು ಕುರುಬರ ಜಾತಿಯವರೆಂದು ಹೇಳಿಕೊಂಡ ನಿಮಿತ್ತ ಬೆಂಗಳೂರಿನ ಕರ್ನಾಟಕ ಕುರುಬರ ಸಂಘದಿಂದ ಮಾಹಿತಿ ಪಡೆಯಲಾಗುತ್ತಿದೆ.
ಕೆಪಿಎಸ್ಸಿಯಲ್ಲಿ ರಾಮಕೃಷ್ಣ ಎನ್ನುವ ವ್ಯಕ್ತಿಯ ಖಾತೆಗೆ ಕೆಪಿಎಸ್ಸಿಯ ಗ್ರೂಪ್ ಸಿ ಹುದ್ದೆ ಕೊಡಿಸುವುದಾಗಿ ಎರಡು ಲಕ್ಷ ರೂಪಾಯಿ ವೆಂಕಟೇಶ ನಾಯಕ ಎನ್ನುವವರು ಬ್ಯಾಂಕ್ ಖಾತೆಗೆ NEFT ಮೂಲಕ ಹಣವನ್ನು ಜಮಾ ಮಾಡಿಸಿಕೊಟ್ಟಿದ್ದಾನೆ.ಇವೆಲ್ಲುಗಳಿಗೆ ಸಂಬಂಧಿಸಿದಂತೆ ದೂರಿನಲ್ಲಿ ದಾಖಲಿಸಲಾಗಿದೆ. ಆರು ತಿಂಗಳೊಳಗೆ ಸರಕಾರಿ ನೌಕರಿ ಕೊಡಿಸುವೆನೆಂದು ಹೇಳಿದ್ದ ದೇವರಾಜನ ಫೋನ್ ನಂಬರನಲ್ಲಿ ನಡೆದ ಸಂಭಾಷಣೆಗಳನ್ನು ಕೊಡಲಾಗಿದೆ.ಇನ್ನೂ ಹೆಚ್ಚಿನ ತನಿಖೆಗಾಗಿ ಆತನ ಫೋನ್ ನಂಬರ್ ನಿಂದ ಬಂದ ಕರೆಗಳನ್ನು ವೀಕ್ಷಿಸಿದಾಗ ಇನ್ನೂ ಹಲವು ಸತ್ಯಗಳು ತಿಳಿಯುತ್ತವೆ ಎಂದು ದಾಖಲಿಸಲಾಗಿದೆ.
ಸರಕಾರಿ ನೌಕರಸ್ತನಾಗಿದ್ದರೆ ಎಂದು ದಾಖಲಿಸಿ ರಾಜ್ಯ ಸರಕಾರಿ ನೌಕರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಅವರಿಗೆ ಈತನ ಬಗ್ಗೆ ಮಾಹಿತಿ ನೀಡಲಾಗಿದೆ.ಇತನಿಗೆ ಸಂಬಂಧಿಸಿದಂತೆ ಇನ್ನು ಕೆಲವು ಮಾಹಿತಿಗಳನ್ನು ಕಲಿಹಾಕಲಾಗುತ್ತಿದೆ.ಪೋಲಿಸ್ ಠಾಣೆಯಿಂದ FIR ದಾಖಲಾದ ನಂತರ
ಯಾದಗಿರಿ ಜಿಲ್ಲಾ ಎಸ್ ಪಿ ಅವರಿಗೆ ರಾಜ್ಯ ಐಜಿಪಿಯವರಿಗೆ ಮಾಹಿತಿ ಒದಗಿಸಲು ನ್ಯಾಯಾಲಯದಿಂದಲೆ ಮಾಹಿತಿ ಕಳಿಸುವಂತೆ  ಕೇಳಿಕೊಳ್ಳಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಬಸವರಾಜ ತಿಳಿಸಿದರು.

About The Author