ನುಡಿ ಜಾತ್ರೆ ಯಶಸ್ವಿಗೆ ಸರ್ವರ ಸಹಕಾರ ಅಗತ್ಯ: ಸಚಿವ ದರ್ಶನಾಪುರ

ಶಹಾಪುರ: ಜುಲೈ ೧೭ರಂದು ಸಗರದಲ್ಲಿ ಶಹಾಪುರ ತಾಲೂಕಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೆಳನ ನಡೆಯಲಿದ್ದು, ನುಡಿ ಜಾತ್ರೆಗೆ ಸರ್ವರು ಪರಸ್ಪರ ಸಹಕಾರ ಮನೋಭಾವನೆಯಿಂದ ಯಶಸ್ವಿಗೆ ಕಾರಣರಾಗಬೇಕು, ಕನ್ನಡ,ನಾಡು,ನುಡಿ,ನೆಲ,ಜಲ ಬಗ್ಗೆ ಕನ್ನಡಿಗರಲ್ಲಿ ಅಭಿಮಾನ ಇಮ್ಮಡಿಯಾಗಬೇಕು, ಈ ದಿಸೆಯಲ್ಲಿ ಸಗರನಾಡಿನಲ್ಲಿ ಕನ್ನಡ ಕಂಪು ಸೂಸಲಿ, ಕನ್ನಡ ಕುರಿತು ಸ್ವಾಭಿಮಾನ ಸರ್ವರಲ್ಲಿ ಮೂಡಲು ಇಂದು ಗ್ರಾಮಿಣ ಪ್ರದೇಶಗಳಲ್ಲಿ ಸಮ್ಮೇಳನ ಮಾಡುವತ್ತಿರುವದು ಸಂತೋಷದ ಸಂಗತಿಯಾಗಿದೆ ಎಂದು ಸಣ್ಣ ಕೈಗಾರಿಕೆ ಸಾರ್ವನಿಕ ಉದ್ಯಮಗಳ ಸಚಿವ ಜಿಲ್ಲಾ ಉಸ್ತುವಾರಿ ಮಂತ್ರಿ ಶರಣಬಸ್ಸಪ್ಪಗೌಡ ದರ್ಶನಾಪುರ ತಿಳಿಸಿದರು.

ತಾಲುಕಾ ಕಸಾಪ ಸಮ್ಮೆಳನ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡ ಲಿಂಗಣ್ಣ ಪಡಶೆಟ್ಟಿ ಅವರನ್ನು ಅಧಿಕೃತವಾಗಿ ಸನ್ಮಾನಿಸಿ, ಗೌರವಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು ಎಲ್ಲರ ಹಾರೈಕೆಯಿಂದ ಸಚಿವ ಸ್ಥಾನ ದೊರಕಿದ್ದು, ಅದರ ಜೊತೆ ಜವಾಬ್ದಾರಿಯು ಹೆಚ್ಚಾಗಿದೆ, ಕಸಾಪ ಭವನಕ್ಕೆ ಅನುದಾನದ ಲಭ್ಯತೆಯ ಅವಕಾಶ ಬಳಸಿಕೊಂಡು, ಉತ್ತಮ ಭವನ ನಿರ್ಮಾಣ ಮಾಡೋಣ ಎಂದರು.

ಈ ಸಂದರ್ಭದಲ್ಲಿ ಸರ್ವಾಧ್ಯಕ್ಷ ಲಿಂಗಣ್ಣ ಪಡಶೆಟ್ಟಿ ಗೌರವ ಸ್ವೀಕರಿಸಿ ಮಾತನಾಡಿ, ಕನ್ನಡಭಾಷಾ ನುಡಿ ಜಾಗೃತಿ ಕುರಿತು ಇಂದು ಹಳ್ಳಿಗಾಡಿನಲ್ಲಿ ನುಡಿ ಜಾತ್ರೆ ನಡೆಸಿ, ಪ್ರತಿಯೊಬ್ಬ ಗ್ರಾಮೀಣ ವ್ಯಕ್ತಿಗೆ ಕನ್ನಡ ಭಾಷ ಅಭಿಮಾನ ಮೂಡಿಸುವದು ಅವಶ್ಯಕವಾಗಿದೆ. ನನಗೆ ಸಮ್ಮೇಳನ ಸರ್ವಾಧ್ಯಕ್ಷ ಸ್ಥಾನ ಬಯಸದೆ ಬಂದ ಭಾಗ್ಯವಾಗಿದೆ ಎಂದರು.

ಕಸಾಪ ಅಧ್ಯಕ್ಷ ರವೀಂದ್ರನಾಥ ಹೊಸ್ಮನಿ ಪ್ರಾಸ್ತವಿಕವಾಗಿ ಮಾತನಾಡಿ, ತಾಲೂಕಿನ ಕಸಾಪದಿಂದ ಕನ್ನಡ ಭಾಷೆಯ ಬೆಳವಣಿಗೆಗೆ ನಿರಂತರ ಕಾರ್ಯಕ್ರಮಗಳು, ಗ್ರಾಮೀಣ ಭಾಗ ಸೇರಿದಂತೆ ನಗರದಲ್ಲಿ ನಿರಂತರವಾಗಿ ನಡೆದಿದ್ದು, ಮುಂಬರುವ ದಿನಗಳಲ್ಲಿ ಸಗರದ ತಾಲೂಕಾ ಸಮ್ಮೇಳನ ಹಾಗೂ ನಗರದಲ್ಲಿ ಆಯೋಜಿಸಲು ತೀರ್ಮಾನಿಸಿರುವ ಜಿಲ್ಲಾ ಸಮ್ಮೇಳನದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಸಚಿವರಲ್ಲಿ ಮನವಿಮಾಡಿದರು.

ವೇದಿಕೆಯಲ್ಲಿ ನಿಕಟಪೂರ್ವ ಕಸಾಪ ಅಧ್ಯಕ್ಷ ಸಿದ್ದಲಿಂಗಣ್ಣ ಆನೆಗುಂದಿ, ಸಾಹಿತಿ ಸಿದ್ದರಾಮ ಹೊನಕಲ್, ಜಿಪಂ ಮಾಜಿಸದಸ್ಯ ಬಸನಗೌಡ ಸುಬೇದಾರ, ಚಂದ್ರಶೇಖರ ಆರಬೋಳ, ರೈತ ಮುಖಂಡ ಶರಣಪ್ಪ ಸಲಾದಪುರ, ನೀಲಕಂಠ ಬಡಿಗೇರ, ಸಾಹಿತಿ ಶಿವಣ್ಣ ಇಜೇರಿ, ಕಸಾಪ ವಲಯ ಅಧ್ಯಕ್ಷ ಮಲ್ಲಣ್ಣಗೌಡ ಪೋ.ಪಾಟೀಲ, ಶಿರವಾಳ ವಲಯ ಮಲ್ಲಣ್ಣ ಹೊಸ್ಮನಿ, ಸಗರ ವಲಯ ಡಾ.ದೇವಿಂದ್ರಪ್ಪ ಹಡಪದ, ಸೇರಿದಂತೆ ಮುಡಬೂಳ ವಲಯದವರು, ಹಾಗೂ ನಗರದ ಅನೇಕ ಮುಖಂಡರು ಕಸಾಪ ಅಭಿಮಾನಿಗಳು ಪಾಲ್ಗೊಂಡಿದ್ದರು. ಶಂಕರ ಹುಲ್ಕಲ್ ಸ್ವಾಗತಿಸಿದರು, ಸುರೇಶಬಾಬು ಅರುಣಿ ಕಾರ್ಯಕ್ರಮ ನಿರೂಪಿಸಿದರು, ರಾಘವೆಂದ್ರ ಹಾರಣಗೇರ ವಂದಿಸಿದರು.

About The Author