ಮೂಲಭೂತ ಸೌಕರ್ಯ ಒದಗಿಸುವಂತೆ ಎನ್‌ಜಿಓ ಕಾಲೋನಿಯ ನಿವಾಸಿಗಳಿಂದ ಸಚಿವರಿಗೆ ಮನವಿ

ಶಹಾಪುರ :  ನಗರದ ಎನ್‌ಜಿಓ ಕಾಲೋನಿಗೆ ಒಳಚರಂಡಿ, ಸಿ.ಸಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಕಂಬಗಳು, ಬೀದಿ ದೀಪಗಳು ಒದಗಿಸಿಕೊಡಬೇಕೆಂದು ಕಾಲೋನಿಯ ನಿವಾಸಿಗಳು ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ನಗರದ ಭೀಮರೆಡ್ಡಿ ಭೈರೆಡ್ಡಿ ಕಾಲೋನಿಗೆ ಭೇಟಿ ನೀಡಿದ್ದ ವೇಳೆ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ನಿವಾಸಿಗಳು, ನಗರದಲ್ಲಿ ಬೆಳೆಯುತ್ತಿರುವ ಕಾಲೋನಿಯಾಗಿದ್ದು ಇಲ್ಲಿ ಅನೇಕ ಸರಕಾರಿ ನೌಕರರು ನಿವೃತ್ತ ನೌಕರರು ತಮ್ಮ ಮನೆಯನ್ನು ನಿರ್ಮಿಸಿಕೊಂಡು ವಾಸಮಾಡುತ್ತಿದ್ದಾರೆ, ಆದ್ದರಿಂದ ಇಲ್ಲಿನ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳ ಕೊರತೆ ಹೆಚ್ಚಾಗಿದೆ, ಮಳೆಬಂದರೆ ನೀರು ನುಗ್ಗುವ ಸ್ಥಿತಿಇದೆ, ಆದ್ದರಿಂದ ಕಾಲೋನಿಯ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಬೇಕೆಂದು ಮನವಿ ಮಾಡಿದರು. ಬಳಿಕ ಮಾತನಾಡಿದ ಸಚಿವರು ಕಾಲೋನಿಯ ಸಿ.ಸಿ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಕ್ಕಾಗಿ ೨ ಕೋಟಿ ಅನುದಾನ ಒದಗಿಸಿಕೊಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಿಶ್ವನಾಥರೆಡ್ಡಿ ದರ್ಶನಾಪುರ, ಬಾಪುಗೌಡ ದರ್ಶನಾಪುರ, ರೇಖು ಚವ್ಹಾಣ, ಎನ್.ಸಿ ಪಾಟೀಲ್, ಶರಣಗೌಡ ಗುಂಡಗುರ್ತಿ, ಮಹಾದೇವಪ್ಪ ಸಾಲಿಮನಿ ಸೇರಿದಂತೆ ಕಾಲೋನಿಯ ನಿವಾಸಿಗಳು ಇದ್ದರು.

About The Author