ಹೋತಪೇಟ ಗ್ರಾಮದ ಜೆಜೆಎಮ್ ಕಾಮಗಾರಿ ಕಳಪೆ ತನಿಖೆಗೆ ಆಗ್ರಹ

ಶಹಾಪುರ : ತಾಲೂಕಿನ ಹೋತಪೇಟ ಗ್ರಾಮದಲ್ಲಿನ 4.16 ಲಕ್ಷ ರೂ. ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು ಕೂಡಲೇ ತನಿಖಾ ತಂಡವನ್ನು ರಚಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಾಲೂಕು ನಮ್ಮ ಕರ್ನಾಟಕ ಸೇನೆಯ ಅಧ್ಯಕ್ಷರಾದ ಸಿದ್ದುಪಟ್ಟೇದರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಕಳಪೆಯಾಗಿದ್ದು, ಗುಣಮಟ್ಟದ ಸಿಮೆಂಟ್ ಮತ್ತು ಕಂಕರಗಳನ್ನು ಬಳಸಿರುವದಿಲ್ಲ.ಅಂದಾಜು ಪತ್ರಿಕೆಯ ಪ್ರಕಾರ ಕಾಮಗಾರಿ ನಡೆಸಿರುವುದಿಲ್ಲ. ಸರಕಾರದ ಮಹತ್ವಾಕಾಂಕ್ಷೆಯ ಗ್ರಾಮೀಣ ಕುಡಿಯುವ ನೀರು ಯೋಜನೆಯ ಜೆಜೆಎಮ್ ಕಾಮಗಾರಿ ಗ್ರಾಮೀಣ ಪ್ರದೇಶದ ಜನರ ಮಹತ್ವದ ಯೋಜನೆಯಾಗಿದೆ.
 ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿ ಅರೆಬರೆ ಕಾಮಗಾರಿ ಮಾಡಿ ಸರಕಾರದ ಹಣವನ್ನು ಲೂಟಿ ಮಾಡಿದ್ದಾರೆ. ಕೂಡಲೇ ಸಚಿವರು ಕ್ರಮ ಕೈಗೊಂಡು ಗುತ್ತಿಗೆದಾರರ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *