ಕ್ಷೇತ್ರದ ಮತದಾರರ ಆಶೀರ್ವಾದದಿಂದ ನಾನು ಮಂತ್ರಿಯಾಗಿರುವೆ : ದರ್ಶನಾಪುರ

ಶಹಾಪುರ: ಜನಪ್ರತಿನಿಧಿಗಳು ಮತ್ತು ಸರಕಾರಿ ನೌಕರರು ಸೇರಿ ಕೆಲಸ ಮಾಡಿದರೆ ಜಿಲ್ಲೆಯ ಅಭಿವೃದ್ಧಿ ಸಾಧ್ಯ, ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿ ಪರಿಹರಿಸಿ, ಇದರಿಂದ ಅಧಿಕಾರಿಗಳಿಗೆ ಒಳ್ಳೆಯ ಹೆಸರು ಬರುತ್ತದೆ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಹಾಗೂ ಯಾದಗಿರಿ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.

ಭೀಮರಾಯನ ಗುಡಿಯ ಅಡಿಟೋರಿಯಂ ಹಾಲ್‌ನಲ್ಲಿ ನಡೆದ ರಾಜ್ಯ ಸರಕಾರಿ ನೌಕರರ ವಿವಿಧ ವೃಂದ ಸಂಘಗಳು ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಸಸಿಗೆ ನೀರೆರೆಯವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಕ್ಷೇತ್ರದ ಮತದಾರರ ಆಶೀರ್ವಾದದಿಂದ ನಾನು ಮಂತ್ರಿಯಾಗಿರುವೆ, ಯಾವತ್ತಿಗೂ ಮತದಾರರಿಗೆ ನಾನು ಚಿರಋಣಿ. ಐದು ಬಾರಿ ಶಾಸಕರಾಗಿ ಮೂರು ಬಾರಿ ಸಚಿವರಾಗಿರುವೆ ಎಂದು ಹೇಳಿದ ಅವರು, ನೌಕರರ ಯಾವುದೇ ಸಮಸ್ಯೆಗಳಿಗೆ, ಬೇಡಿಕೆಗಳಿಗೆ ಸ್ಪಂಧಿಸಿ ಪರಿಹರಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷರಾದ ರಾಯಪ್ಪಗೌಡ ಹುಡೇದ ಏಳನೇ ವೇತನ ಆಯೋಗ ಜಾರಿ, ಎನ್‌ಪಿಎಸ್ ರದ್ದು ಮಾಡಿ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು. ಕಲ್ಯಾಣ ಕರ್ನಾಟಕದಲ್ಲಿ ಹೆಚ್‌ಆರ್‌ಎಂಎಸ್ ಉಪವಿಭಾಗ ಕಚೇರಿಯನ್ನು ಸ್ಥಾಪಿಸಬೇಕು. ತಾಲೂಕಿನಲ್ಲಿ ನೌಕರರ ಬಹುಮಹಡಿ ಕಟ್ಟಡ ಕಟ್ಟಿಸಿ ಕೊಡಬೇಕೆಂದು ಸಚಿವರಿಗೆ ಮನವಿಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಯೋನಿವೃತ್ತಿ ಹೊಂದಿದ ಯಾದಗಿರಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ ಮತ್ತು ರೇಷ್ಮೆ ಇಲಾಖೆಯ ವಿಸ್ತರಣಾಧಿಕಾರಿಗಳಾದ ಬಸವರಾಜ ಸಿಂಗ್ರಿ ಅವರಿಗೆ ಸಂಘದ ಕಡೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಮಸ್ತ ನೌಕರರ ವರ್ಗದವರು ಸಚಿವರಿಗೆ ಅಭಿನಂದಿಸಿ ಗೌರವಿಸಿದರು.

ವಿಶ್ವನಾಥ ರೆಡ್ಡಿ ದರ್ಶನಾಪುರ ಜಿಲ್ಲಾ ಸಹಕಾರಿ ಒಕ್ಕೂಟಗಳ ಅಧ್ಯಕ್ಷರು ಯಾದಗಿರಿ, ಮಹಿಪಾಲರೆಡ್ಡಿ ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷರು, ಸೋಮಶೇಖರ ಬಿರಾದರ ಕಾರ್ಯನಿರ್ವಾಹಕ ಅಧಿಕಾರಿಗಳು ಶಹಾಪುರ, ಬಸವರಾಜ ಸಜ್ಜನ ಕಾರ್ಯನಿರ್ವಾಹಕ ಅಧಿಕಾರಿಗಳು ವಡಗೇರಾ, ಶಿಬಾ ಜಿಲಿಯಾನ್ ಕ್ಷೇತ್ರಶಿಕ್ಷಣಾಧಿಕಾರಿಗಳು, ಚನಾರೆಡ್ಡಿ ತಂಗಡಗಿ ಡಿಗ್ರಿ ಕಾಲೇಜ್ ಪ್ರಾಚಾರ್ಯರು, ವೆಂಕೋಬಾ ಪಾಟೀಲ್ ಉಪ ಪ್ರಾಂಶುಪಾಲರು,ಎಂ.ನಾರಾಯಣ ಉಪಾಧ್ಯಕ್ಷರು ಜಿಲ್ಲಾ ಸಹಕಾರಿ ಸಂಘಗಳ ಒಕ್ಕೂಟ ಯಾದಗಿರಿ, ಭೀಮನಗೌಡ ತಳೆವಾಡ, ಬಸವರಾಜ ಯಾಳಗಿ, ಎನ್.ಸಿ.ಪಾಟೀಲ ಸೇರಿದಂತೆ ಸರಕಾರಿ ನೌಕರಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾವೇರಿ ಪಾಟೀಲ ನಿರೂಪಿಸಿದರು, ಚಂದ್ರಕಲಾ ಜಮಖಂಡಿ ಪ್ರಾರ್ಥಿಸಿದರು, ಚಂದ್ರಕಲಾ ಗೂಗಲ್ ಸ್ವಾಗತಿಸಿದರು.