ಮಹಾಶೈವ ಧರ್ಮಪೀಠದಲ್ಲಿ 51 ನೆಯ ಶಿವೋಪಶಮನ ಕಾರ್ಯ ಹನುಮಾಪುರ ಗ್ರಾಮದ ನೂರ್ ಪಾಶಾ ನಾಯಕ್ ಗುಣಮುಖರಾಗಿ ನಡೆದಾಡುತ್ತಿರುವುದು

ರಾಯಚೂರು ಜೂನ್ 25 :ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ‌ಕೈಲಾಸದಲ್ಲಿ ಜೂನ್ 25 ರ ರವಿವಾರದಂದು 51 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶ್ರೀಕ್ಷೇತ್ರ ಕೈಲಾಸವನ್ನರಸಿ ಬಂದಿದ್ದ ನೂರಾರು ಭಕ್ತರುಗಳಿಗೆ ಶಿವಾನುಗ್ರಹವನ್ನು‌ ಕರುಣಿಸಿದರು.

ಕಳೆದ ರವಿವಾರ ತನ್ನೆರಡು ಕಾಲುಗಳ ಸ್ವಾಧೀನ ಕಳೆದುಕೊಂಡು ನಡೆಯಲಾಗದೆ ವಿಶ್ವೇಶ್ವನ ಸನ್ನಿಧಿಗೆ ಬಂದಿದ್ದ ಹನುಮಾಪುರ ಗ್ರಾಮದ ನೂರ್ ಪಾಶಾ ನಾಯಕ್ ಗುಣಮುಖರಾಗಿ ವಿಶ್ವೇಶ್ವರ ಶಿವ,ವಿಶ್ವೇಶ್ವರಿ ದುರ್ಗಾದೇವಿ ಮತ್ತು ಮಹಾಕಾಳಿಯರ ದೇವಸ್ಥಾನಗಳಿಗೆ ಐದು ಐದು ಸುತ್ತು ಪ್ರದಕ್ಷಿಣೆ ಮಾಡಿದ್ದು ಇಂದಿನ ವಿಶೇಷವಾಗಿತ್ತು.ಕಳೆದ ಎರಡು ವರ್ಷಗಳಿಂದ ಕಾಲುಗಳ ಸ್ವಾಧೀನ ಕಳೆದುಕೊಂಡು ನಡೆಯಲಾಗದೆ ಒದ್ದಾಡುತ್ತಿದ್ದ ನೂರ್ ಪಾಶಾ ಕಳೆದ ರವಿವಾರ ( 50 ನೇ ಶಿವೋಪಶಮನ ಕಾರ್ಯ) ಶ್ರೀ ಕ್ಷೇತ್ರ ಕೈಲಾಸಕ್ಕೆ ಪತ್ನೀಸಮೇತರಾಗಿ ಬಂದು ತಮ್ಮ ಸಂಕಷ್ಟ ನಿವೇದಿಸಿದ್ದರು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಅವರು ಶಿವಾಭಯವನ್ನು ಕರುಣಿಸಿ ಲೋಬಾನ ಮಂತ್ರಿಸಿ ಕೊಟ್ಟಿದ್ದರು.

ತನ್ನ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ ಹನುಮಾಪುರ ಗ್ರಾಮದ ನೂರ್ ಪಾಶಾ ನಾಯಕ್ ಗುಣಮುಖರಾಗಿ ನಡೆದಾಡುತ್ತಿರುವುದು.

ಗುಣಮುಖನಾಗಿದ್ದರೂ ನಡೆಯಲು ಅಳುಕುತ್ತಿದ್ದ ನೂರ್ ಪಾಶಾನಿಗೆ ಪೀಠಾಧ್ಯಕ್ಷರು ‘ ಶಿವ ದುರ್ಗಾ ದೇವಸ್ಥಾನಗಳ ಸುತ್ತು ಐದು ಪ್ರದಕ್ಷಿಣೆ ಹಾಕಿ.ಏನೂ ಆಗದು ಭಯಬೇಡ,ನಾನಿದ್ದೇನೆ’ ಎನ್ನುವ ಅಭಯವನ್ನಿತ್ತುದ್ದರಿಂದ ನೂರ್ ಪಾಶಾ ಪತ್ನಿ ಪುಚ್ಚಾಂಬಿ ಜೊತೆ ಶ್ರೀಕ್ಷೇತ್ರದ ಶಿವದುರ್ಗಾ ಹಾಗೂ ಮಹಾಕಾಳಿ ದೇವಸ್ಥಾನಗಳಿಗೆ ಐದೈದು ಸುತ್ತು ಪ್ರದಕ್ಷಿಣೆ ಮಾಡಿ ‘ ಎರಡು ವರ್ಷಗಳಿಂದ ನಡೆದೇ ಇರದ ನನ್ನನ್ನು ನಡೆಸಿದ ಪುಣ್ಯಾತ್ಮ’ ಎಂದು ಕೈಮುಗಿದು ಕೃತಜ್ಞತೆಗಳನ್ನರ್ಪಿಸಿದ ಅಪರೂಪದ ಕ್ಷಣಗಳಿಗೆ ಪೀಠದಲ್ಲಿದ್ದ ಭಕ್ತಗಣ ಸಾಕ್ಷಿಯಾಯಿತು.ಇಂತಹ ಅನ್ಯಾದೃಶ,ಅದ್ಭುತವೆನ್ನಿಸುವ,ಪವಾಡಸದೃಶ ಘಟನೆಗಳು ಪ್ರತಿ ರವಿವಾರ ಮಹಾಶೈವ ಧರ್ಮಪೀಠದಲ್ಲಿ ನಡೆಯುತ್ತಿರುತ್ತವೆ.ಇಂದಿನ ಶಿವೋಪಶಮನದಲ್ಲಿ ಆಂಧ್ರಪ್ರದೇಶ,ತೆಲಂಗಾಣಗಳ ಹೈದರಾಬಾದ್,ನಾರಾಯಣಪೇಟ್,ಮುಕ್ತಲ್,ಮದ್ದೂರು ಮತ್ತು ಕರ್ನೂಲ್ ಗಳಿಂದ ಬಂದಿದ್ದ ಭಕ್ತರುಗಳು ಬಹಳಷ್ಟಿದ್ದರು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ,ದಾಸೋಹ ಸಮಿತಿಯ ಮುಖ್ಯಸ್ಥ ಗುರುಬಸವ ಹುರಕಡ್ಲಿ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಶಿವಯ್ಯಸ್ವಾಮಿ ಮಠಪತಿ,ಶರಣಗೌಡ ಹೊನ್ನಟಗಿ, ಬೊಮ್ಮನಾಳ ಸ.ಹಿ.ಪ್ರಾ ಶಾಲೆಯ ಮುಖ್ಯೋಪಾಧ್ಯಾಯರೂ ಗಬ್ಬೂರಿನ ಗಾಯತ್ರಿ ಆಶ್ರಮದ ಮುಖ್ಯಸ್ಥರಾದ ಶಕ್ತ್ಯುಪಾಸಕರಾದ ಉದಯಕುಮಾರ ಪಂಚಾಳ,ಉಮೇಶ ಅರಸಣಗಿ, ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ,ಸಿದ್ರಾಮಯ್ಯಸ್ವಾಮಿ ಹಳ್ಳಿ,ವೀರೇಶ ಯಾದವ್,ಯಲ್ಲಪ್ಪ ಕರಿಗಾರ,ತಿಪ್ಪಯ್ಯ ಭೋವಿ,ಪತ್ರಕರ್ತ ಏಳುಬಾವೆಪ್ಪ ಗೌಡ,ಮಹಾಶೈವ ಧರ್ಮಪೀಠದ ಪ್ರಸಾರ ವ್ಯವಸ್ಥಾಪಕ ಉದಯಕುಮಾರ ಮಡಿವಾಳ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು,ಶಿವೋಪಶಮನಕ್ಕೆ ಬಂದಿದ್ದ ಭಕ್ತರುಗಳು ಉಪಸ್ಥಿತರಿದ್ದರು.

About The Author