ಎನ್.ಗಣೇಕಲ್: ಹಳದಿ ಬಣ್ಣಕ್ಕೆ ತಿರುಗಿದ ಕಲುಷಿತ ನೀರು ಸೇವನೆ ನಾಳೆ ಪ್ರತಿಭಟನೆ

ಗಬ್ಬೂರು: ದೇವದುರ್ಗ ತಾಲೂಕಿನ ಮಲದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎನ್.ಗಣೇಕಲ್ ಗ್ರಾಮದ ಕುಡಿಯುವ ನೀರಿನ ಕೆರೆಯಲ್ಲಿರುವ ನೀರು ಕಲುಷಿತಗೊಂಡು ಹಳದಿ ಬಣ್ಣಕ್ಕೆ ತಿರುಗಿದೆ ಆರೋಗ್ಯಾಧಿಕಾರಿಗಳು ನೀರು ಕುಡಿಯಲು ಯೋಗ್ಯವಿಲ್ಲ ಎಂದು ವರದಿ ನೀಡಿದ್ದಾರೆ. ಆದರೆ ಬೇರೆ ವ್ಯವಸ್ಥೆ ಇಲ್ಲದೆ ಶಾಲೆಯಲ್ಲಿ ಹಾಗೂ ಗ್ರಾಮದ ಜನರು ಕಲುಷಿತ ನೀರೆ ಜನರ ಕುಡಿಯುವಂತಾಗಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಮುಖಂಡರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದರು. ಮಲದಕಲ್ ಗ್ರಾಮ ಪಂಚಾಯತಿಗೆ ಮೊನ್ನೆ ಸಿಇಒ ಶಶಿಧರ್ ಕುರೇರ ಅವರು ಎನ್.ಗಣೇಕಲ್ ಗ್ರಾಮದಲ್ಲಿ ಕಲುಷಿತ ನೀರು ಕುಡಿಯುತ್ತಿರುವ ಜನರಲ್ಲಿಗೆ ಸೌಜನ್ಯಕ್ಕಾದರೂ ಸಿಇಒ ಅವರು ಗ್ರಾಮಕ್ಕೆ ಭೇಟಿ ನೀಡದೇ ನಿರ್ಲಕ್ಷ್ಯ ತೋರಿದ್ದಕ್ಕೆ ಗ್ರಾಮದ ಸಾರ್ವಜನಿಕರು ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಶಾಂತಕುಮಾರ ಹೊನ್ನಟಗಿ ಅವರು ವಿರುದ್ಧ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸಂಪೂರ್ಣ ಹಾಳಾಗಿದ್ದು, ನಿರ್ವಹಣೆ ಇಲ್ಲದೆ ಇರುವುದರಿಂದ ಗ್ರಾಮದ ಜನರಿಗೆ ಅಶುದ್ಧ ನೀರು ಕುಡಿಯುವಂತಹ ಪರಿಸ್ಥಿತಿ ಎದುರಾಗಿದೆ. ಖಾಸಗಿಯಲ್ಲಿ 20 ರೂಪಾಯಿ ಕೊಟ್ಟು ಒಂದು ಕೊಡ ನೀರು ತಂದು ಕುಡಿಯುವ ಪರಿಸ್ಥಿತಿ ನಮಗೆ ಬಂದಿದೆ ಎಂದು ಗ್ರಾಮಸ್ಥರಾದ ತೂಕರಾಮ ಎನ್.ಗಣೇಕಲ್ ಅವರು ಪಿಡಿಒ ರೇಣುಕಮ್ಮ ಅವರಿಗೆ ತಿಳಿಸಿದೆ ನಮಗೆ ಸಂಬಂಧವಿಲ್ಲ ಎಂಬಂತೆ ಬೇಜಾವಬ್ದಾರಿಯಿಂದ ವರ್ತಿಸಿ ಇಂದಿಗೂ ಗ್ರಾಮದ ಜನರಿಗೆ ಕುಡಿಯುವ ನೀರು ಒದಗಿಸಿಲ್ಲ ಎಂದು ಆರೋಪಿಸಿದರು.

ಎನ್.ಗಣೇಕಲ್ ಗ್ರಾಮದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ.ಸಾರ್ವಜನಿಕರು ಅನಿವಾರ್ಯ ಪರಿಸ್ಥಿತಿಯಲ್ಲಿ ಅಶುದ್ಧ ನೀರು ಕುಡಿಯುವುದರಿಂದ ಹಲವಾರು ರೋಗಗಳು ಹರಡುತ್ತಿದ್ದು.ಸರಕಾರ ಕೋಟೆಗಟ್ಟಲೆ ಹಣ ಖರ್ಚು ಮಾಡಿ ಗ್ರಾಮೀಣ ಭಾಗದ ಜನರಿಗೆ ಶುದ್ಧ ನೀರು ಒದಗಿಸುವ ಕಾರ್ಯ ಕೈಮುಂದಾಗಿದೆ. ಆದರೆ ಎನ್.ಗಣೇಕಲ್ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ದುರಸ್ತಿ ಯಾಗಿದೆ, ಆ ದುರಸ್ತಿ ಮಾಡುವ ಗೋಜಿಗೆ ಅಧಿಕಾರಿಗಳು ಮುಂದಾಗುತ್ತಿಲ್ಲ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ವಿಳಂಬ ಮಾಡದೆ ಶುದ್ದ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಗೊಳಿಸಿ, ಗ್ರಾಮದ ಜನರಿಗೆ ಕುಡಿಯುವ ನೀರು ಅನುಕೂಲ ಮಾಡಿಕೊಡದ್ದಿದರೆ. ಜೂ.23 ರಂದು ಮಲದಕಲ್ ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂದೆ ಪ್ರತಿಭಟನೆ ಮಾಡಲಾಗಿದೆ.

ರಾಜಪ್ಪ ಸಿರವಾರಕರ್, ಮರೆಪ್ಪ ಮಲದಕಲ್, ನರಸಪ್ಪ ಗಣೇಕಲ್‌, ತುಕಾರಾಮ ಎನ್.ಗಣೇಕಲ್, ಬಸವಲಿಂಗ ಎನ್.ಗಣೇಕಲ್, ಮಾರ್ತಾಂಡ ಗಬ್ಬೂರು, ಮುತ್ತುರಾಜ ಮ್ಯಾತ್ರಿ, ಹುಲ್ಲಿಗೆಪ್ಪ ಹೊನ್ನಟಗಿ, ಸೇರಿದಂತೆ ಅನೇಕರಿದ್ದರು.

About The Author