ಯೋಗ ಇಷ್ಟಪಟ್ಟು ಮಾಡಿದರೆ ಅದರ ಪರಿಣಾಮ ಅಗಾಧ: ನಾರಾಯಣಾಚಾರ್ಯ

ಶಹಾಪುರ: ಯೋಗಾಸನಗಳನ್ನು ಇಷ್ಟಪಟ್ಟು ಮಾಡಿದರೆ ಅದರ ಪರಿಣಾಮ ಅಗಾಧವಾಗಿದ್ದು, ಆರೋಗ್ಯಯುತ ಜೀವನಕ್ಕೆ ಯೋಗ ಬಹುಮುಖ್ಯವಾಗಿದೆ ಎಂದು ಹಿರಿಯರಾದ ನಾರಾಯಣಚಾರ್ಯ ತಿಳಿಸಿದರು.ಯೋಗಕ್ಕೆ ಜಾಗತಿಕ ಮನ್ನಣೆ ಸಿಗುವಲ್ಲಿ ಭಾರತದ ಇಚ್ಛಾಶಕ್ತಿಯ ಕಾರಣವಾಗಿದೆ, ವಿದ್ಯಾರ್ಥಿಗಳು ಪ್ರತಿನಿತ್ಯ ಸರಳವಾದ ಆಸನಗಳನ್ನು ರೂಢಿಸಿಕೊಂಡು, ಉತ್ತಮ ಜೀವನಕ್ಕೆ ಮೇಲ್ಪಂಕ್ತಿಯಾಗಬೇಕು, ಆರೋಗ್ಯ ಸಮಸ್ಯೆಗೆ ಕಡಿವಾಣ ಹಾಕಲು, ಯೋಗ ಸಾಧನೆಯೇ ನಮ್ಮ ಸಂಕಲ್ಪ ಎಂದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ನಾಗರಾಜ ಪತ್ತಾರ ಯೋಗ ಅಭ್ಯಾಸ ಮಾಡಿಸಿದರು, ಶಿಕ್ಷಕ ಶಿವರೆಡ್ಡಿ ಸಿಂಗನಹಳ್ಳಿ ಸ್ವಾಗತಿಸಿದರು, ಶಿಕ್ಷಕರು, ವಿದ್ಯಾರ್ಥಿಗಳು ಆಸಕ್ತಿಯಿಂದ ಯೋಗದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *