ಮಹಾಶೈವ ಧರ್ಮಪೀಠ ವಾರ್ತೆ : ಮಹಾಶೈವ ಧರ್ಮಪೀಠದಲ್ಲಿ 50 ನೆಯ ‘ ಶಿವೋಪಶಮನ ಕಾರ್ಯ’

ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಜೂನ್ 18 ರ ರವಿವಾರದಂದು 50ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶ್ರೀಕ್ಷೇತ್ರ ಕೈಲಾಸವನ್ನರಸಿ ಬಂದಿದ್ದ ನೂರಾರು ಜನ ಭಕ್ತರುಗಳಿಗೆ ಶಿವಾನುಗ್ರಹವನ್ನು ಕರುಣಿಸಿದರು.

ಇಂದಿನ ಶಿವೋಪಶಮನದಲ್ಲಿ ಸಮಸ್ಯೆಗಳ ಪರಿಹಾರಕ್ಕಾಗಿ ಬಂದಿದ್ದ ನೂರಾರು ಜನ ಭಕ್ತರಲ್ಲಿ ಕಾಲುಗಳನ್ನು ಊರಿ ನಡೆಯಲು ಬಾರದ ಬಾಲಕ ಮತ್ತು ನಡೆಯಲು ಬಾರದ ಮುಸ್ಲಿಂ ಸಮುದಾಯದ ಭಕ್ತರೊಬ್ಬರು ಸಂಕಷ್ಟಪರಿಹಾರಕ್ಕಾಗಿ ವಿಶ್ವೇಶ್ವರ ಶಿವನ ಕಾರುಣ್ಯಕಟಾಕ್ಷವನ್ನು ಅಪೇಕ್ಷಿಸಿ ಬಂದಿದ್ದು ವಿಶೇಷವಾಗಿತ್ತು.’ಮಾತನಾಡುವ ಮಹಾದೇವ’ ಎಂದು ಬಿರುದುಗೊಂಡ ವಿಶ್ವೇಶ್ವರ ಶಿವನು ತನ್ನ ಸನ್ನಿಧಿಗೆ ಬರುವ ಭಕ್ತರ ಸರ್ವವಿಧ ರೋಗ,ಸಂಕಟಗಳನ್ನು ಪರಿಹರಿಸುತ್ತಿರುವುದರಿಂದ ರಾಜ್ಯ ಮತ್ತು ಹೊರರಾಜ್ಯಗಳಿಂದ ನಾನಾ ವಿಧವಾದ ಸಮಸ್ಯೆಗಳನ್ನು ಹೊತ್ತ ಭಕ್ತರುಗಳು ಶ್ರೀಕ್ಷೇತ್ರ ಕೈಲಾಸಕ್ಕೆ ಬರುತ್ತಿದ್ದಾರೆ.

ಅಸಾಧ್ಯರೋಗಪೀಡಿತರುಗಳಲ್ಲದೆ ಮದುವೆಯಾಗದ ತರುಣ ತರುಣಿಯರು,ಶತ್ರುಗಳ ಬಾಧೆಗೊಳಗಾದವರು,ಕೋರ್ಟ ಕಛೇರಿಗಳನ್ನು ಅಲೆದು ಸುಸ್ತಾದವರು,ದಾರಿದ್ರ್ಯವಾದಿ ಆರ್ಥಿಕ ಸಂಕಟಗಳಿಗೆ ಸಿಕ್ಕವರು,ಮಕ್ಕಳಾಗದವರು ಸೇರಿದಂತೆ ಎಲ್ಲ ವಿಧದ ಸಮಸ್ಯೆಗಳನ್ನು ಹೊತ್ತುಬರುತ್ತಿದ್ದಾರೆ ಭಕ್ತರುಗಳು ಶಿವನ ಸನ್ನಿಧಿಗೆ.ವಿಶ್ವನಿಯಾಮಕನಾದ ಶಿವನು ತನ್ನಲ್ಲಿ ಗಟ್ಟಿ ನಿಷ್ಠೆಯನ್ನು ಇಟ್ಟ ಯಾವ ಭಕ್ತರನ್ನೂ ನಿರಾಶೆಗೊಳಿಸಿಲ್ಲವಾದ್ದರಿಂದ ಶಿವನನ್ನು ನಂಬಿ ಬರುತ್ತಿರುವ ಭಕ್ತರ ಸಂಖ್ಯೆ ವಾರದಿಂದ ವಾರಕ್ಕೆ ಹೆಚ್ಚಾಗುತ್ತಲೇ ಇದೆ.ಅಲ್ಲದೆ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಭಕ್ತರಿಂದ ಯಾವುದೇ ಶುಲ್ಕ,ಕಾಣಿಕೆಗಳನ್ನು ಪಡೆಯದೆ ಸಂಪೂರ್ಣ ಉಚಿತವಾಗಿ ಭಕ್ತರನ್ನು ನೋಡುತ್ತಿರುವುದರಿಂದ ಬಡವರು- ಶ್ರೀಮಂತರು ಎನ್ನುವ ಭೇದವಿಲ್ಲದೆ ಎಲ್ಲ ಜಾತಿ,ಧರ್ಮಗಳ ಭಕ್ತರುಗಳು ಪರಿಹಾರವನ್ನರಸಿ ಶ್ರೀಕ್ಷೇತ್ರ ಕೈಲಾಸಕ್ಕೆ ಬರುತ್ತಿದ್ದಾರೆ.ಮಹಾಶೈವ ಧರ್ಮಪೀಠವು ನಿಜವಾದ ಅರ್ಥದ ‘ ಸಮನ್ವಯಮಠ’ ವಾಗಿದ್ದು ಬ್ರಾಹ್ಮಣರು,ದಲಿತರು,ಮುಸ್ಲಿಮರು ಸೇರಿದಂತೆ ಎಲ್ಲ ಜನಾಂಗಗಳ ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿ,ಶಿವ ವಿಶ್ವೇಶ್ವರನಲ್ಲಿ ಪರಿಹಾರ ಕಂಡುಕೊಳ್ಳುತ್ತಿದ್ದಾರೆ.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವರುಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ ಹಾಗೂ ದಾಸೋಹಸಮಿತಿಯ ಮುಖ್ಯಸ್ಥರಾದ ಗುರುಬಸವ ಹುರಕಡ್ಲಿ ಸೇರಿದಂತೆ ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಶಿವಯ್ಯಸ್ವಾಮಿ ಮಠಪತಿ,ಶರಣಗೌಡ ಹೊನ್ನಟಗಿ,ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಮೃತ್ಯುಂಜಯ ಯಾದವ್,ಯಲ್ಲಪ್ಪ ಕರಿಗಾರ,ಹನುಮೇಶ,ತಿಪ್ಪಯ್ಯ ಭೋವಿ,ಮಹಾಶೈವ ಧರ್ಮಪೀಠದ ಪ್ರಸಾರ ವ್ಯವಸ್ಥಾಪಕ ಉದಯಕುಮಾರ ಮಡಿವಾಳ ಸೇರಿದಂತೆ ಮಹಾಶೈವ ಧರ್ಮಪೀಠದ ಕಾರ್ಯಕರ್ತರುಗಳು,ಭಕ್ತರುಗಳು ಉಪಸ್ಥಿತರಿದ್ದರು.

About The Author