ಮಣ್ಣೆತ್ತಿನ ಅಮಾವಾಸ್ಯೆ, ಇಂದು ಭಾರ ಎತ್ತುವ ಸ್ಪರ್ಧೆ

ದೇವದುರ್ಗ: ಪವಿತ್ರ ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ಹಮಾಲರ ಸಂಘದಿಂದ ಹಮ್ಮಿಕೊಂಡಿದ್ದ ನಗರ ಮತ್ತು ಗ್ರಾಮೀಣ ಯುವಕರಾಗಿ ಕಲ್ಲು ಮತ್ತು ಉಸುಗಿನ ಚೀಲ ಭಾರ ಎತ್ತುವ ಸ್ಪರ್ಧೆಯು ಶರಣಗೌಡ ಪೊಲೀಸ್ ಪಾಟೀಲ್ ಅವರ ನೇತೃತ್ವದಲ್ಲಿ ಇಂದು ಬೆಳ್ಳಗೆ 10 ಗಂಟೆಗೆ ಘಂಟೆಯಿಂದ 5 ಯವರೆಗೆ ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದಲ್ಲಿ ಕಲ್ಲು ಮತ್ತು ಉಸುಗಿನ ಚೀಲ ಎತ್ತುವ ಸ್ಪರ್ಧೆ ಇಂದು ಸರ್ಕಾರಿ ಆಸ್ಪತ್ರೆ ಹಿಂದುಗಡೆ, ಮಸೀದಪೂರ ಕ್ರಾಸ್ ಹತ್ತಿರ, ಲಕ್ಷ್ಮೀ ದೇವಸ್ಥಾನದಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಭಜರಂಗಿ ಹಮಾಲರ ಸಂಘದ ಮುಖಂಡರಾದ ಹನುಮಂತ ಅವರು ತಿಳಿಸಿದರು.

ಕಲ್ಲು ಎತ್ತುವ ಸ್ಪರ್ಧೆ ವಿಜೇತರಿಗೆ ಪ್ರಥಮ ಬಹುಮಾನ 10,000 ದ್ವಿತೀಯ ಬಹುಮಾನ 5000 ಮತ್ತು ಉಸುಗಿನ ಚೀಲ ಭಾರ ಎತ್ತುವ ಸ್ಪರ್ಧೆ ವಿಜೇತರಿಗೆ ಪ್ರಥಮ ಬಹುಮಾನ 10,000 ದ್ವಿತೀಯ ಬಹುಮಾನ 5000 ನೀಡಲಾಗುತ್ತದೆ ಎಂದರು.

ಭಾಗವಹಿಸುವ ಆಸಕ್ತರು ಈ ಕೆಳಗಿನ ನಂಬರಗಳಿಗೆ 9741221858, 9731703186, 9972636207 ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.

About The Author