ರಕ್ತದಾನ ಶ್ರೇಷ್ಠವಾದದ್ದು ಪ್ರತಿಯೊಬ್ಬರು ರಕ್ತದಾನಕ್ಕೆ ಮುಂದಾಗಬೇಕು : ಸನ್ನಿಗೌಡ ತುನ್ನೂರು

ವಡಗೇರಾ : ನವ ಚೇತನ ಟ್ರಸ್ಟ್  ವಡಗೇರಾ ಹಾಗೂ ಗೆಳೆಯರ ಬಳಗದ  ವತಿಯಿಂದ  ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಶಾಸಕರ ಪುತ್ರ ಸನ್ನಿಗೌಡ ತುನ್ನೂರು ಉದ್ಘಾಟಿಸಿ ಮಾತನಾಡುತ್ತಾ. ರಕ್ತದಾನ ಮಹಾದಾನ ಉಚಿತ ರಕ್ತದಾನ ಶಿಬಿರದಿಂದ ಬಡ ಜನರಿಗೆ ತುಂಬಾ ಅನುಕೂಲವಾಗಲಿದೆ. ಪ್ರತಿಯೊಬ್ಬರೂ ವರ್ಷದಲ್ಲಿ ಎರಡು ಬಾರಿಯಾದರೂ ರಕ್ತದಾನ ಮಾಡಬೇಕು ಎಂದು ಹೇಳಿದರು.  ನವ ಚೇತನ ಟ್ರಸ್ಟನ  ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಯಾವುದೇ ಸಂದರ್ಭದಲ್ಲಿ ಯಾರಿಗಾದರೂ ರಕ್ತ ಬೇಕಾದರೆ ನನಗೆ ಕರೆ ಮಾಡಿ ನಾನು ಸ್ವತಃ ಬಂದು  ರಕ್ತದಾನ ಮಾಡುತ್ತೇನೆ ಎಂದು ಹೇಳಿದರು . 
ಪಟ್ಟಣದ ಹಿರಿಯ ಮುಖಂಡ ಭಾಷುಮಿಯಾ ನಾಯ್ಕೋಡಿ.ಮಾತನಾಡಿದರು . ಯುವಕರ ದುಶ್ಚಟಗಳಿಗೆ ಬಲಿಯಾಗಿ ಆರೋಗ್ಯ ಹಾಳು ಮಾಡಿಕೊಳ್ಳದೆ  ಪ್ರತಿಯೊಬ್ಬರೂ ಕೂಡ ರಕ್ತದಾನ  ಮಾಡಿ ಇನ್ನೊಬ್ಬರ ಜೀವ ಉಳಿಸುವಂತಹ ಕೆಲಸಕ್ಕೆ ಮುಂದಾಗಲು ಸಲಹೆ ನೀಡಿದರು. ನವಚೇತನ ಟ್ರಸ್ಟ್, ಸುಮಾರು 5 ವರ್ಷಗಳಿಂದ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಒಳ್ಳೆಯ ಕೊಡುಗೆಯನ್ನು ನೀಡುತ್ತಿರುವುದಕ್ಕೆ ಶ್ಲಾಘನೀಯ ವ್ಯಕ್ತಪಡಿಸಿದರು.
ಈ ಸಮಯದಲ್ಲಿ ಪುತ್ರ ಸನ್ನಿಗೌಡ ಅವರು ಕೂಡ ರಕ್ತದಾನ ಮಾಡಿದರು.  ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ರಾಘವೇಂದ್ರ ಕಲಾಲ. ಶರಣಗೌಡ ಐಕುರ. ಮೈಬೂಬ್ ಖುರೇಶಿ.ಇವರಿಗೆ ಸನ್ಮಾನಿಸಲಾಯಿತು. ಶಿಬಿರದಲ್ಲಿ ಯುವಕರು ಮಹಿಳೆಯರು ಅಧಿಕಾರಿಗಳು ಇನ್ನಿತರರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಂಗಣ್ಣ ಜಡಿ. ವಹಿಸಿಕೊಂಡಿದ್ದರು.ವಡಗೇರಾ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಗನ್ನಾಥ ರೆಡ್ಡಿ.ನಗರ ಸಭೆ ಮಾಜಿ ಸದಸ್ಯ ಮಲ್ಲಣ್ಣ ಐಕೂರ. ಸಂಗುಗೌಡ ಪಾಟೀಲ.  ಮಕ್ಕಳ ತಜ್ಞ ಡಾ. ಸುರೇಶ.ಬಸವರಾಜ ನೀಲಹಳ್ಳಿ. ಕರವೇ ಮುಖಂಡ ಶರಣು ಇಟಗಿ.  ಮರಿಲಿಂಗಪ್ಪ ಸಾಹುಕಾರ ಕುಮನೂರ .ಸೂಗಪ್ಪ ಸಾಹುಕಾರ ಅಮಂಗಿ.ಮಹೇಶ್ ಗೌಡ ಕ್ಯಾತನಾಳ.  ಕಂದಾಯ ನಿರೀಕ್ಷಕ ಸಂಜು ಕುಮಾರ. ನಿಂಗಣಗೌಡ  ಬೋರಡ್ಡಿ. ರಾಚಣ್ಣ ಗೌಡ  ಕರಡ್ಡಿ. ಅಮರೇಶ್ ಬೂತಿ. ಡಾ. ಸುರಗಿಮಠ.ಅರ್ಚನಾ.ಅಯ್ಯಪ್ಪ ಹಾಲಗೇರಾ . ಶರಣು ಕುರಿ. ರುಕುಮುದ್ದೀನ್  ದೇವದುರ್ಗ. ಶಿವರಾಜ ಬಾಗುರ. ಮರಿಲಿಂಗ ಗೋನಾಲ. ಹಾಗೂ ಇನ್ನಿತರರು ಉಪಸ್ಥಿತರಿದ್ದರು.ಶಿಕ್ಷಕ ನಾಗಪ್ಪ  ನಿರೂಪಿಸಿ ವಂದಿಸಿದರು.

About The Author