ಮಹಾಶೈವಧರ್ಮಪೀಠ ವಾರ್ತೆ : ಮಹಾಶೈವಧರ್ಮಪೀಠದಲ್ಲಿ 48 ನೆಯ ‘ ಶಿವೋಪಶಮನ ಕಾರ್ಯ’

       ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಜೂನ್ 04 ರ ರವಿವಾರದಂದು 48 ನೆಯ ‘ಶಿವೋಪಶಮನ ಕಾರ್ಯ’ ನಡೆಯಿತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವವಿಶ್ವೇಶ್ವರನ ಸನ್ನಿಧಿಯನ್ನರಸಿ ಶ್ರೀಕ್ಷೇತ್ರ ಕೈಲಾಸಕ್ಕೆ ಬಂದಿದ್ದ ಭಕ್ತರುಗಳಿಗೆ ಶಿವಾನುಗ್ರಹವನ್ನು ಕರುಣಿಸಿದರು.
      ಮಹಾಶೈವ ಧರ್ಮಪೀಠವು ಜಾತ್ಯಾತೀತ ಮಠವಾಗಿರುವುದರಿಂದ ಮುಸ್ಲಿಂ ಸಮುದಾಯದ ಬಹಳಷ್ಟು ಜನರು ಮಹಾಶೈವ ಧರ್ಮಪೀಠದ ವಿಶ್ವೇಶ್ವರ ಶಿವನ ಸನ್ನಿಧಿಯಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ.ಈ ಭಾಗದಲ್ಲಿ ಮಹಾಶೈವ ಧರ್ಮಪೀಠವು ಒಂದೇ ಮುಸ್ಲಿಂಸಮುದಾಯದ ಭಕ್ತರುಗಳನ್ನು ಹೊಂದಿದ ಶೈವಪರಂಪರೆಯ ಮಠವಾಗಿದೆ.ಮಹಾಶೈವ ಧರ್ಮಪೀಠದ ವೈಶಿಷ್ಟ್ಯವೆಂದರೆ ಪೀಠಾಧ್ಯಕ್ಷರಾದ ಶ್ರೀಮುಕ್ಕಣ್ಣ ಕರಿಗಾರ ಅವರು ಪ್ರತಿ ರವಿವಾರ ಶಿವನ ಸನ್ನಿಧಿಯಲ್ಲಿ ಕೈಗೊಳ್ಳುವ ಶಿವೋಪಶಮನ ಕಾರ್ಯಕ್ಕೆ ಪ್ರಕೃತಿಯು ಸಂಪೂರ್ಣವಾಗಿ ಸಹಕರಿಸುತ್ತಿರುವುದು.ಇಂದಿನವರೆಗೆ ನಲವತ್ತೆಂಟು ವಾರಗಳು ಪೂರೈಸಿದರೂ ರವಿವಾರದಂದು ಮಳೆ- ಗಾಳಿಗಳು ತೊಂದರೆ ನೀಡಿಲ್ಲ.ನಿನ್ನೆ ರಾತ್ರಿ ಗಬ್ಬೂರಿನಲ್ಲಿ ಮಳೆ ಬಿದ್ದಿತ್ತು.ಇಂದು ಬೆಳಿಗ್ಗೆಯೂ ಸಣ್ಣದಾಗಿ ಮಳೆಹನಿಯುತ್ತಿತ್ತು.ಪೀಠಾಧ್ಯಕ್ಷರು ವಿಶ್ವೇಶ್ವರ ಸನ್ನಿಧಿಗೆ ಆಗಮಿಸಿದ ಕ್ಷಣದಿಂದ ಮಳೆ ನಿಂತಿದ್ದಲ್ಲದೆ ಸಂಜೆ ಏಳು ಘಂಟೆಗೆ ಪೀಠಾಧ್ಯಕ್ಷರ ಶಿವೋಪಶಮನ ಕಾರ್ಯ ಮುಕ್ತಾಯಗೊಂಡ ಮರುಕ್ಷಣವೇ ಜೋರಾಗಿ ಗಾಳಿ ಬೀಸತೊಡಗಿತು.  ಪೀಠಾಧ್ಯಕ್ಷರು ಶಿವ ದುರ್ಗಾದೇವಿಯರಿಗೆ ನಮಿಸಿ ಪೀಠದ ಮೇಲೆ ಕುಳಿತು ಭಕ್ತಜನರೆಲ್ಲರ ಸಮಸ್ಯೆಗಳು ಮುಗಿಯುವವರೆಗೆ ಎದ್ದುಹೋಗುವುದಿಲ್ಲ.ಕೆಲವೊಮ್ಮೆ ರಾತ್ರಿ ಹನ್ನೆರಡವರೆಗೆ ಶಿವೋಪಶಮನ ಕಾರ್ಯ ನಡೆದಿದೆ.ಅಷ್ಟು ಹೊತ್ತಿನ ತನಕವೂ ಪ್ರತಿರವಿವಾರ ಪ್ರಕೃತಿಯ ಶಿವ ವಿಶ್ವೇಶ್ವರನ ಲೋಕಾನುಗ್ರಹ ಕಾರ್ಯಕ್ಕೆ ಶರಣೆಂದು ಸಹಕರಿಸಿರುವ ವಿಸ್ಮಯಕಾರಿ ಸಂಗತಿ ನಡೆದಿದೆ ಇಲ್ಲಿ.ಮಳೆಗಾಲದಲ್ಲಿಯೂ ಕೂಡ ರವಿವಾರದಂದು ಮಳೆ ಬೀಳದೆ  ಶಿವೋಪಶಮನ ಕಾರ್ಯ ನಿರಾಂತಕವಾಗಿ ನಡೆದಿದೆ.ಪ್ರಕೃತಿಪತಿಯಾದ ಶಿವ ವಿಶ್ವೇಶ್ವರನು ತನ್ನ ಸನ್ನಿಧಿಗೆ ಬರುವ ಭಕ್ತರಿಗೆ ತೊಂದರೆಯಾಗಬಾರದೆಂದು ತನ್ನ ಪ್ರಕೃತಿಪತಿ- ವಿಶ್ವಪತಿ ಲೀಲೆ ನಟಿಸುತ್ತಿದ್ದಾನೆ ಶ್ರೀಕ್ಷೇತ್ರ ಕೈಲಾಸದಲ್ಲಿ.
      ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಮಹಾಶೈವ ಧರ್ಮಪ್ರವರ್ಧನಾ ಟ್ರಸ್ಟಿನ ಅಂಗಸಂಸ್ಥೆಯಾಗಿ ಇತ್ತೀಚೆಗೆ ಜನ್ಮ ತಳೆದ ” ಕರ್ನಾಟಕ ರಾಜ್ಯ ಪ್ರಜಾಪ್ರತಿನಿಧಿಗಳ ಸಂಸ್ಥೆ” ಯ ವಿವರಣೆ ಪುಸ್ತಿಕೆ( ಬ್ರೋಶರ್)ಗಳನ್ನು ವಿಶ್ವೇಶ್ವರ ಶಿವನ ಸನ್ನಿಧಿಯಲ್ಲಿ ಲೋಕಾರ್ಪಣೆ ಮಾಡಿದರು.ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ, ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ, ಮುಖ್ಯೋಪಾಧ್ಯಾಯರು ಮತ್ತು ಶಕ್ತಿ ಉಪಾಸಕರಾದ ಉದಯಕುಮಾರ ಪಂಚಾಳ,ದಾಸೋಹಸಮಿತಿಯ ಗುರುಬಸವ ಹುರಕಡ್ಲಿ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಬಾಬುಗೌಡ ಯಾದವ ಸುಲ್ತಾನಪುರ,ಶರಣಗೌಡ ಹೊನ್ನಟಗಿ, ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಮೃತ್ಯುಂಜಯ ಯಾದವ್,ಯಲ್ಲಪ್ಪ ಕರಿಗಾರ, ಮಲ್ಲಿಕಾರ್ಜುನ ವಕೀಲರು ಅತ್ತನೂರು,ಪತ್ರಕರ್ತ ಏಳುಬಾವೆಪ್ಪ ಗೌಡ, ಹನ್ಮಂತಪ್ಪ ಪೋಲೀಸಪಾಟೀಲ ಮಸೀದಪುರ, ಪರಮೇಶ ಬೊಮ್ಮನಾಳ,ಮಹಾಶೈವ ಧರ್ಮಪೀಠದ ಪ್ರಸಾರ ವ್ಯವಸ್ಥಾಪಕ ಉದಯಕುಮಾರ ಮಡಿವಾಳ, ಬಸವರಾಜ ಕರಿಗಾರ,ಹನುಮೇಶ,ತಿಪ್ಪಯ್ಯ ಭೋವಿ ಸೇರಿದಂತೆ ಮಹಾಶೈವ ಧರ್ಮಪೀಠದ ಕಾರ್ಯಕರ್ತರುಗಳು,ಭಕ್ತರುಗಳು ಉಪಸ್ಥಿತರಿದ್ದರು
         ‌

About The Author