ಅಂಗನವಾಡಿ ಕಾರ್ಯಕರ್ತರಿಗೆ ನೀಡಿದ ಹಳೆ ಫೋನ್ ವಾಪಸ್ ಪಡೆದು ಹೊಸ ಫೋನ್ ನೀಡಲು ಒತ್ತಾಯ.

ಶಹಾಪುರ:ಅಂಗನವಾಡಿ ಕಾರ್ಯಕರ್ತರಿಗೆ ನೀಡಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ ಫೋನ್‌ ಗಳು ಬಹುತೇಕ ಆಳಾಗಿ ಹೋಗಿವೆ ಅಂಗನವಾಡಿ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಿದ್ದು 4 ವರ್ಷದ ಹಿಂದೆ ವಿತರಿಸಿದ ಫೋನ್ ವಾಪಸ್ ಪಡೆದು ಹೆಚ್ಚು ಕಾರ್ಯಕ್ಷಮತೆ ಇರುವ ಸ್ಮಾರ್ಟ್ ಫೋನ್ ವಿತರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರ ಸಂಘ ತಾಲೂಕ ಸಮಿತಿ ಶಹಾಪುರ ವತಿಯಿಂದ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
****
ಮನವಿ ಪತ್ರ ಸಲ್ಲಿಸಿದ ನಂತರ ಮಾತನಾಡಿದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕ ಉಪಾಧ್ಯಕ್ಷೆ ಬಸಲಿಂಗಮ್ಮ ನಾಟೆಕಾರ ಅವರು, ಅಂಗನವಾಡಿ ಕೇಂದ್ರಗಳ ದೈನಂದಿನ ಕಾರ್ಯ ಚಟುವಟಿಕೆಗಳನ್ನು ಗಣಕೀಕೃತಗೊಳಿಸುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ ಫೋನ್‌ ನೀಡಿದ್ದು ಮೊಬೈಲ್ ಪೋನ್‌ಗಳು ಹ್ಯಾಂಗ್ ಆಗಿವೆ. ಈಗಿರುವ ಮೊಬೈಲ್ ಪೋನ್‌ಗಳಿಂದ ಈ ಸರ್ವೆ ಮಾಡಲು ಸಾಧ್ಯವಿಲ್ಲ.ಯಾವುದೇ ಎಲೆಕ್ಟಾçನಿಕ್ಸ್ ವಸ್ತುವಿಗೆ ೬ ರಿಂದ ೨ ವರ್ಷ ಮಾತ್ರ ಗ್ಯಾರಂಟಿಯಿರುತ್ತದೆ.
ಅಂಗನವಾಡಿ ನೌಕರರಿಗೆ ಕೊಟ್ಟಿರುವ ಮೊಬೈಲ್‌ಗಳು ಈಗಾಗಲೇ ೪ ವರ್ಷ ತುಂಬಿದೆ.ರಾಜ್ಯದ ಭೌಗೋಳಿಕ ಹಿನ್ನೆಲೆಯಲ್ಲಿ ತೀವ್ರವಾದ ನೆಟ್‌ವರ್ಕ್ ಸಮಸ್ಯೆ ಎದುರಿಸುವಂಥಾಗಿದ್ದು, ನಾಲ್ಕು ವರ್ಷದ ಕೆಳಗೆ ನೀಡಿರುವ  ಈ ಮೊಬೈಲ್‌ಗಳಲ್ಲಿ  ರ‍್ಯಾಮ್ & ಸ್ಟೋರೇಜ್ ಸ್ಪೇಸ್, ಇಂಟರನೆಟ್ ಸ್ಪೇಸ್ ಕಡಿಮೆಯಿರುವುದರಿಂದ ಹೊಸ ಆಪ್ ಗಳನ್ನು ಡೌನ್‌ಲೋಡ್ ಮಾಡಲು ಆಗುವುದಿಲ್ಲ. ದಿನನಿತ್ಯ ಪೋಷಣ್ ಅಭಿಯಾನ, ಪೋಷಣ್ ಟ್ರಾö್ಯಕರ್ ಅಡಿಯಲ್ಲಿ ದಿನನಿತ್ಯ ಮಕ್ಕಳ ಮತ್ತು ಪೋಷಕರ ಹಾಜರಾತಿ, ಆಹಾರ ವಿತರಣೆ, ಶಾಲಾಪೂರ್ವ ಶಿಕ್ಷಣದ ಚಟುವಟಿಕೆಗಳನ್ನು ಅಪ್‌ಲೋಡ್ ತೊಂದರೆಯಾಗುತ್ತದೆ. ನಾಲ್ಕು ವರ್ಷದ ಹಳೆಯದಾದ ಫೋನ್ ಗಳನ್ನು ವಾಪಸ್ ಪಡೆದು ಹೆಚ್ಚು ಸ್ಥಳಾವಕಾಶ ಮತ್ತು ಸಾಮರ್ಥ್ಯವಿರುವ ಫೋನ್ ವಿತರಿಸಬೇಕು ಎಂದು ಅವರು ಒತ್ತಾಯಿಸಿದರು.
****
ಇದೇ ಸಂದರ್ಭದಲ್ಲಿ ಮಾತನಾಡಿದ ವಡಿಗೇರ ತಾಲೂಕ ಅಂಗನವಾಡಿ ನೌಕರ ಸಂಘದ ಅಧ್ಯಕ್ಷೆ ಇಂದಿರಾ ದೇವಿ ಕೊಂಕಲ್ ಅವರು, ಈ ಸರ್ವೆ ಆರೋಗ್ಯ ಇಲಾಖೆಯ ಸರ್ವೆ, ಹಲವಾರು ಮನವಿಗಳಲ್ಲಿ ಹೆಚ್ಚುವರಿ ಕೆಲಸ ಬೇಡಾ ಎಂದು ಹೇಳಲಾಗಿದೆ. ಆದರೆ, ಪ್ರತಿ ಬಾರಿಯೂ ಹೆಚ್ಚುವರಿ ಕೆಲಸಗಳನ್ನು ಇಲಾಖೆ ಹೇರುತ್ತಲೇ ಬಂದಿದೆ.ರಾಜ್ಯದಲ್ಲಿ ಈಗಾಗಲೇ ಮಕ್ಕಳ ಮತ್ತು ಮಹಿಳೆಯರ ಅನಿಮಿಯಾ ಹೆಚ್ಚುತ್ತಿದೆ ಎಂಬ ವರದಿಗಳಿವೆ. ಅಂಗನವಾಡಿ ನೌಕರರು ಪ್ರತಿನಿತ್ಯ ಈ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಆದರೆ, ಈ ರೀತಿಯ ಹೆಚ್ಚುವರಿ ಕೆಲಸಗಳಿಂದ ಮೂಲ ಕೆಲಸಕ್ಕೆ ಧಕ್ಕೆಯಾಗುತ್ತಿದ್ದರು ಮೇಲಧಿಕಾರಿಗಳು ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಈ ಸಮೀಕ್ಷೆಯಲ್ಲಿ ಕುಟುಂಬದ ವ್ಯಕ್ತಿಗಳ ವೈಯಕ್ತಿಕ ವಿಚಾರಗಳನ್ನು ಕೇಳಬೇಕಾದ್ದರಿಂದ ಇದು ವ್ಯತಿರಿಕ್ತ ಪರಣಾಮ ಬೀರುತ್ತದೆ.
ಮಾತ್ರವಲ್ಲದೇ ಒಂದು ಮನೆಗೆ ಕನಿಷ್ಟ ೧ ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಕನಿಷ್ಟ ಒಂದು ಅಂಗನವಾಡಿ ಕೇಂದ್ರಕ್ಕೆ ೧೦೦ ರಿಂದ ೧೫೦ ಮನೆ. ಆದರೆ, ಕನಿಷ್ಟ ೩ ವಾರ ಬೇಕಾಗುತ್ತದೆ. ಇಲಾಖೆ ಈ ಸಮೀಕ್ಷೆ ಮಾಡಲೇಬೇಕು, ಅಂತಾದರೆ, ೩ ವಾರ ಅಂಗನವಾಡಿ ಕೆಲಸದಿಂದ ವಿನಾಯ್ತಿ ಕೊಡಬೇಕು ಎಂದು ಮೇಲಾಧಿಕಾರಿಗಳನ್ನು ಒತ್ತಾಯಿಸಿದರು.
****
ಇದೆ ವೇಳೆ ಮಾತನಾಡಿದ ಸಿಐಟಿಯು ಸಂಘಟನೆಯ ತಾಲೂಕ ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ ಅವರು,
ತಕ್ಷಣದಲ್ಲಿ ಹೊಸ ಮೊಬೈಲ್ ಕೊಡಲು ಸಾಧ್ಯವಾಗದಿದ್ದರೆ, ಮ್ಯಾನುಲ್‌ನಲ್ಲಿ ಮಾಡಲು ಅವಕಾಶ ನೀಡಬೇಕು. ಜೂನ್ ತಿಂಗಳಾದ್ದರಿAದ ಅಂಗನವಾಡಿಗೆ ಬರುವ ಮಕ್ಕಳ ದಾಖಲಾತಿ ಮತ್ತು ಪೋಷಕರನ್ನು ಮನವೊಲಿಸಿ ಮಕ್ಕಳನ್ನು ಅಂಗನವಾಡಿಗೆ ಬರುವಂತೆ, ಮಾಡುವ ಕೆಲಸವಿರುತ್ತದೆ. ಈಗ ಈ ಕೆಲಸ ಮಾಡದೇ ಇದ್ದರೆ, ತಕ್ಷಣ ಇಲಾಖೆ ನಡೆಸುವ ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಕಾರ್ಮಿಕ ಇಲಾಖೆ ನಡೆಸುವ ಶಿಶುಪಾಲನಾ ಕೇಂದ್ರಗಳು ಮಕ್ಕಳನ್ನು ಸೆಳೆಯುತ್ತವೆ. ಆದ್ದರಿಂದ ಅಂಗನವಾಡಿ ನೌಕರರು  ಇದರ ಬಗ್ಗೆ ಗಮನ ಹರಿಸದಿದ್ದರೆ, ಮಕ್ಕಳ ಸಂಖ್ಯೆ ಸಂಪೂರ್ಣ ಕುಂಠಿತವಾಗುತ್ತದೆ. ಪ್ರಾಯೋಗಿಕ ಸಮಸ್ಯೆಗಳನ್ನು ಕೂಡಲೇ ಬಗೆಹರಿಸದಿದ್ದಲ್ಲಿ, ಅಂಗನವಾಡಿ ನೌಕರರಿಗೆ ಕೊಟ್ಟಿರುವ
ಮೊಬೈಲ್‌ಗಳನ್ನು ಜುಲೈ ತಿಂಗಳಿನಲ್ಲಿ ವಾಪಸ್ಸು ಮಾಡಲು ರಾಜ್ಯದಲ್ಲಿರುವ ಅಂಗನವಾಡಿ ನೌಕರರ ಸಂಘಟನೆಗಳ ಜಂಟೀ ಸಮಿತಿ ತೀರ್ಮಾನಿಸಿದ್ದು, ಹೋರಾಟ ಮಾಡುವ ಮುಂಚೆ ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
****
ಈ ಸಂದರ್ಭದಲ್ಲಿ ಅಂಗನವಾಡಿ ನೌಕರ ಸಂಘದ ಹುಡುಗಿಯರ ತಾಲೂಕ ಕಾರ್ಯದರ್ಶಿ ಚಂದಮ್ಮ ನಾಯ್ಕಲ್ ಸಂಘದ ಶಹಾಪುರ ತಾಲೂಕ ಉಪಾಧ್ಯಕ್ಷೆ ರೇಣುಕಾ ಗೋಗಿ,  ಶಹಾಪುರ ತಾಲೂಕ ಖಜಂಚಿ ಲಕ್ಷ್ಮೀಶಹಾಪುರ, ವಡಗೇರಾ ತಾಲೂಕ ಖಜಂಚಿ ಮಹದೇವಿ, ಲಕ್ಷ್ಮಿ ಗೋಗಿ, ಶಶಿಕಲಾ ಅಂಗನವಾಡಿ ಕಾರ್ಯಕರ್ತರು ಇದ್ದರು.

About The Author