ಸಚಿವ ಸುರೇಶ್ ಬೈರೆತಿ ರವರಿಗೆ ಸಮಾಜದ ವತಿಯಿಂದ ಸನ್ಮಾನ

yadagiri, ವಡಗೇರಾ : ಕರ್ನಾಟಕ ಸರಕಾರದ ನೂತನ ನಗರಾಭಿವೃದ್ಧಿ ಸಚಿವರಾಗಿ ಆಯ್ಕೆಯಾದ ಸುರೇಶ್ ಬೈರತಿ ರವರನ್ನು ಇಂದು ಬೆಂಗಳೂರಿನ ಅವರ ನಿವಾಸದಲ್ಲಿ ಯಾದಗಿರಿ ಕುರುಬ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ್ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಸಚಿವರು ಮಾತನಾಡಿದರು.ಕುರುಬ ಸಮಾಜದ ಹಾಗೂ ಇನ್ನಿತರರು ಎಲ್ಲಾ ಸಹೋದರ ಸಮಾಜದ ಬಂಧುಗಳ ಸಹಕಾರದಿಂದ ನಾನು ಸಚಿವನಾಗಿದ್ದೇನೆ. ಮುಂದಿನ ದಿನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಸಮಾಜದ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ತಮ್ಮೆಲ್ಲರ ಸಹಕಾರದ ಅವಶ್ಯಕತೆ ಇದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಮಾಜದ ಯುವ ಮುಖಂಡರಾದ ಮರಿಲಿಂಗಪ್ಪ ಸಾಹುಕಾರ ಕುಮನೂರ ಮಲ್ಲಯ್ಯ ಕಸಬಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *