ಸಂಭ್ರಮಾಚರಣೆ: ಕಾರ್ಮಿಕ ಚಳುವಳಿಯ ದಂಡ ನಾಯಕ ಸಿಐಟಿಯುಗೆ ೫೩ ವರ್ಷಗಳ ಸಂಭ್ರಮ : ಕಾರ್ಮಿಕರ ರಕ್ಷಣೆಗೆ ಭದ್ರಕೋಟೆಯಾದ ಸಿಐಟಿಯು

yadagiri,

ದೇಶದ ಆರ್ಥಿಕತೆಗೆ ಬಲ ತುಂಬುವ ಕಾರ್ಮಿಕರಿಗೆ  ಶಕ್ತಿಯಾಗಿ ನಿಂತ ಸಿಐಟಿಯು ಅವರ ಹಕ್ಕು ಬಾಧ್ಯತೆಗಳಿಗಾಗಿ ನಿರಂತರವಾಗಿ ಹೋರಾಟ ಮಾಡುವ ಮೂಲಕ ನ್ಯಾಯ ಒದಗಿಸಿ ಕೊಟ್ಟ ಕೀರ್ತಿ ಸಿಐಟಿಯು ಗೆ ಸಲ್ಲುತ್ತದೆ. ಕಾರ್ಮಿಕರ ರಕ್ಷಣೆಗೆ ಭದ್ರಕೋಟೆಯಾಗಿ ಸಿಐಟಿಯು ನಿಂತಿದೆ ಎಂದು ತಾಲೂಕ ಅಂಗನವಾಡಿ  ನೌಕರರ ಸಂಘದ ಅಧ್ಯಕ್ಷೆ ಬಸಲಿಂಗಮ್ಮ ನಾಟೆಕಾರ ಹೇಳಿದರು.ಸಿಐಟಿಯು ವತಿಯಿಂದ ಸಂಸ್ಥಾಪನಾ ದಿನಾಚರಣೆಯ ದಿನವನ್ನು ಸಡಗರ ಸಂಭ್ರಮದೊAದಿಗೆ ಆಚರಿಸಲಾಯಿತು.

ಕಾರ್ಮಿಕರ ಹೇಳಿಕೆಗಾಗಿ ಐಕ್ಯತೆ ಮತ್ತು ಹೋರಾಟದೊಂದಿಗೆ ತ್ಯಾಗ ಬಲಿದಾನದ ಪ್ರತೀಕವಾಗಿ ಕಾರ್ಮಿಕ ಚಳವಳಿಯ ದಂಡನಾಯಕನಾಗಿ ಹೊರಹೊಮ್ಮಿದ ಸಿಐಟಿಯುಗೆ ೫೩ ವರ್ಷಗಳ ಸಂಭ್ರಮ. ಕಾರ್ಮಿಕರ ಬದುಕಿಗೆ ಆಸರೆಯಾದ ಸಿಐಟಿಯು ನ ನೆರಳಲ್ಲಿ ಕಾರ್ಮಿಕ ವರ್ಗ ಬದುಕು ಸಾಗಿಸುತ್ತಿದೆ ಎಂದರು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯುನ ತಾಲೂಕ ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ ಅವರು, ದೇಶದ ಕಾರ್ಮಿಕ ವರ್ಗವನ್ನು ಒಂದಾಗಿ ಸೇರಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿ ಕಾರ್ಮಿಕರ ಹಿತಕ್ಕಾಗಿ ಧೀರೋದತ್ತವಾದ ಹೋರಾಟಗಳನ್ನು ಮಾಡುವ ಮೂಲಕ ಕಾರ್ಮಿಕ ವರ್ಗದ ಹಿತಾಸಕ್ತಿಯನ್ನು ಕಾಪಾಡಲು ಗಟ್ಟಿತನದ ಹೋರಾಟಗಳ ಮೂಲಕ ಅವರಿಗೆ ನ್ಯಾಯ ಒದಗಿಸಿ ಕೊಡುವ ಕೆಲಸ ಸಿಐಟಿಯು ಮಾಡುತ್ತಿದೆ. ಶ್ರಮಿಕ ವರ್ಗ ಈ ದೇಶದ ಆಸ್ತಿ. ದೇಶದಲ್ಲಿ ಒಟ್ಟು ೫೦ ಕೋಟಿಗೂ ಮಿಕ್ಕಿ ಕಾರ್ಮಿಕರಿದ್ದು, ಅಸಂಘಟಿತ ಮತ್ತು ಸಂಘಟಿತ ಈ ಪೈಕಿ ಕೇವಲ ೩ ಕೋಟಿ ಮಾತ್ರ ಸಂಘಟಿತ ಕಾರ್ಮಿಕರು ಇದ್ದಾರೆ. ದೇಶದಲ್ಲಿ ಕಾರ್ಮಿಕ ಚಳವಳಿ ಪ್ರಖರಗೊಂಡ ಬಳಿಕ ಅನೇಕ ಸಂಘಟನೆಗಳು ಹುಟ್ಟಿಕೊಂಡವು. ಅದರಲ್ಲಿ ಪ್ರಮುಖವಾದದ್ದು ಸಿಐಟಿಯು. ಇದು ಕಾರ್ಮಿಕರ ಹಿತ ಕಾಪಾಡುವ ಜವಾಬ್ದಾರಿಯೊಂದಿಗೆ ಹುಟ್ಟಿಕೊಂಡAತಹ ಒಂದು ಧೀರೋದತ್ತವಾದ ಸಂಘಟನೆ. ಕಾರ್ಮಿಕರ ರಕ್ಷಣೆಗೆ ಭದ್ರಕೋಟೆಯಂತೆ ನಿಂತು ಕಾಪಾಡುತ್ತಿದೆ. ಕಾರ್ಮಿಕ ವರ್ಗ ಸಿಐಟಿಯುಗೆ ಅದೆಷ್ಟು ಕೃತಜ್ಞತೆ ಸಲ್ಲಿಸಿದರು ಸಾಲದು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಡಗೇರ ತಾಲೂಕ ಅಂಗನವಾಡಿ ನೌಕರ ಸಂಘದ ಅಧ್ಯಕ್ಷೆ ಇಂದಿರಾ ದೇವಿ ಕೊಂಕಲ್, ಅಂಗನವಾಡಿ ಕಾರ್ಯಕರ್ತೆಯರಾದ ಶಾರದಾ ನಂದಿಹಳ್ಳಿ ಸುಭದ್ರ ಕುರುಕುಂದ ಶಶಿಕಲಾ ಶಾಂತಮ್ಮ ರಿಜ್ವಾನ್ ಬೇಗಂ ದೇವಿಂದ್ರಮ್ಮ ಸೇರಿದಂತೆ ಅನೇಕ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

About The Author