ಮನಕಲುಕುವ ಘಟನೆ:ಸತ್ತ ಮಾವನ ದೇಹ ಕಂಡು ಸೊಸೆಗೆ ಹೃದಯಾಘಾತ

 

ಶಹಾಪುರ:ಸಂಭಂಧಿಕರ ದೇವರ ಕಾರ್ಯಕ್ರಮಕ್ಕೆಂದು ತನ್ನಿಬ್ಬರ ಗಂಡು ಮಕ್ಕಳೊಂದಿಗೆ ಹೋಗಿ ಎರಡು ದಿನ ನೆಂಟರ ಮನೆಯಲ್ಲಿ ಕಳೆದು ಮರಳಿ ಸ್ವಗ್ರಾಮಕ್ಕೆ ಮರಳುತ್ತಿದ್ದಾಗ ತಾಲೂಕಿನ ಖಾನಾಪುರ ಬಳಿಯ ಮನಗನಾಳ ಗ್ರಾಮದ ಬಳಿ ಜವಾರಾಯನಂತೆ ಬಂದ ಟ್ರ್ಯಾಕ್ಟರ್ ವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಂಗಳವಾರ ದೊಡ್ಡ ಸಗರದ ಸೊಪ್ಪಣ್ಣ ತಂದೆ ಮಲ್ಲಪ್ಪ (೪೫) ಸ್ಥಳದಲ್ಲೆ ಮೃತಪಟ್ಟಿದ್ದರು.ಇನ್ನಿಬ್ಬರು ಮಕ್ಕಳು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.ವಿಧಿಯ ಆಟಕ್ಕೆ ಈಗಾಗಲೆ ಒಂದು ಜೀವ ಹೋಗಿದೆ.ಅಪಘಾತ ಸಂಭವಿಸಿದ್ದಾಗ ಅಲ್ಲಿಯ ಜನರು ಸ್ಪಂದಿಸಿ ನೀರನ್ನು ಕುಡಿಸಿ ಆಂಬ್ಯುಲೆನ್ಸ್ಗೆ108 ಕ್ಕೆ ಕರೆ ಮಾಡಿದ್ದರು. ಅಷ್ಟೊತ್ತಿಗಾಗಲೇ ಸೋಪಣ್ಣ ಎನ್ನುವವರು ಮೃತಪಟ್ಟಿದ್ದರು.

ಟ್ರ್ಯಾಕ್ಟರ್ ಹೊಡೆತಕ್ಕೆ ಕಾಲು,ಕೈಯನ್ನು ಕಳೆದುಕೊಂಡು ಅಪಘಾತದ ಸ್ಥಳದಲ್ಲಿ ಎರಡು ನಿಮಿಷ್ಯಗಳ ಅವರ ಚಿಂತಾಜನಕ ಸ್ಥಿತಿಯನ್ನು ನೋಡಿದರೆ ಎಂತವರಿಗೂ ಸಹ ಕರಳು ಕಿತ್ತು ಬರುತ್ತದೆ. ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಮೃತಪಟ್ಟಿದ್ದಾರೆ. ಮಕ್ಕಳಾದ ಮಹೇಶ (೧೦) ಮತ್ತು ಹಣಮಂತ (೧೨) ಇಬ್ಬರ ಸ್ಥಿತಿಯನ್ನು ನೋಡಿದರೆ ಎಂತಹ ಕಲ್ಲು ಮನಸಿನವರು ಸಹ ಕಣ್ಣಿರು ಹಾಕುತ್ತಾರೆ.ಟ್ರ್ಯಾಕ್ಟರ್ ನ ಕ್ರೂರತೆಗೆ ಅಪಘಾತ ಸಂಭವಿಸಿ ಹೋಗಿದೆ.ಬಳಿಕ ಮೃತನನ್ನು ಸ್ವಗ್ರಾಮಕ್ಕೆ ಸಂಜೆ ಸುಮಾರು ೭ ಗಂಟೆ ಸುಮಾರಿಗೆ ತರಲಾಯಿತು.ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು .ಒಂದೆಡೆ ಪತಿಯ ಶವ ಇನ್ನೊಂದೆಡೆ ಆಸ್ಪತ್ರೆಯಲ್ಲಿ ಮಕ್ಕಳ ಚಿಂತಾಜನಕ ಸ್ಥಿತಿಯಿಂದಾಗಿ ಸೊಪ್ಪಣ್ಣನ ಪತ್ನಿ ಹುಲಗೆಮ್ಮನ ಸ್ಥಿತಿ ಹೇಳತೀರದು. ಇನ್ನು ಮಾವನ ಶವಕ್ಕೆಂದು ಬಂದಿದ್ದ ಮೃತ ಸೊಪಣ್ಣನ ಪತ್ನಿಯ ಸಹೋದರಿ ಅಯ್ಯಮ್ಮ ಅವರು ಮಾವನ ಶವವನ್ನು ಕಂಡು ಹೃದಯಘಾಕ್ಕೊಳಗಾಗಿ ಸಾವನ್ನಪ್ಪಿದ್ದು.ನಿಜಕ್ಕೂ ದೂರದೃಷ್ಟಕರ ಸಂಗತಿಯಾಗಿದೆ. ಇಂತಹ ಮನಕಲುಕುವ ಘಟನೆಯಿಂದ ಇಡೀ ಗ್ರಾಮವೆ ಮೌನವಾಗಿದೆ.

ಸಾವಿನ ಸುತ್ತ ಅನುಮಾನದ ಹುತ್ತ

ದೇವರಿಗೆಂದು ಹೋಗಿದ್ದ ಮನೆಯ ಯಜಮಾನನ್ನು ಕಳೆದುಕೊಂಡ ಕುಟುಂಬಸ್ಥರ ರೋಧನೆಯು ಮುಗಿಲು ಮುಟ್ಟಿದೆ. ಆದರೆ ಇನ್ನೊಂದೆಡೆ ಕುಟುಂಬಸ್ಥರು ಸಾವಿನ ಬಗ್ಗೆ ಅನುಮಾನಿಸುತ್ತಿದ್ದು,ಈ ಕುರಿತು ಎಲ್ಲ ಆಯಾಮಗಳಿಂದಲೂ ಸಹ ತನಿಖೆ ಮಾಡಿ ಕುಟುಂಬಸ್ಥರಿಗೆ ನ್ಯಾಯ ಒದಗಿಸಿ ಕೊಡಬೇಕಾಗಿದೆ ಎನ್ನುವುದು ಕುಟುಂಬಸ್ಥರ ಒತ್ತಾಯವಾಗಿದೆ. ಈ ಕುರಿತು ವಡಗೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾವನ ಸಾವಿಗೆ ಬಂದ ಸೊಸೆಗೆ ಹೃದಯಾಘಾತ:ಅಕ್ಕನ ಗಂಡನ ಸಾವಿನ ಸುದ್ದಿ ತಿಳಿದು ಕೂಡಲೇ ಸಗರ ಗ್ರಾಮಕ್ಕೆ ಧಾವಿಸಿದ್ದ ಮೃತ ಸೊಪ್ಪಣ್ಣನ ಪತ್ನಿ ಹುಲಗಮ್ಮ ಅವರ ಸಹೋದರಿ ಅಯ್ಯಮ್ಮ(೩೫) ಅವರಿಗೆ ಹೃದಯಾಘಾತವಾಗಿದ್ದು ತಕ್ಷಣವೇ ನಗರದ ಸ್ಪಂದನಾ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ವಿಧಿಯ ಕ್ರೂರತೆಗೆ ಇನ್ನೊಂದು ಜೀವ ಕೂಡ ಬಲಿಯಾಗಿದ್ದು,ಅತ್ತ ಕುಟುಂಬಸ್ಥರ ಆಕ್ರಂದನ ಸಹ ಮುಗಿಲು ಮುಟ್ಟಿತ್ತು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಲೆ ಇವೆ. ಆದರೆ ಸಂಭಧಿಸಿದ ಅಧಿಕಾರಿಗಳು ಮಾತ್ರ ಸಂಭಂದವಿಲ್ಲದ ಹಾಗೆ ವರ್ತಿಸುತ್ತಿದ್ದು ಇನ್ನು ಎಷ್ಟು ಜೀವ ಬಲಿ ಪಡೆಯುತ್ತಾರೊ ತಿಳಿಯದು.ಆಸ್ಪತ್ರೆಗಳಲ್ಲಿಯೂ ಸಹ ವೈದ್ಯರು ಸೂಕ್ತವಾಗಿ ಸ್ಪಂದಿಸುವುದಿಲ್ಲ. ಬೀಕರ ಅಪಘಾತಕ್ಕೊಳಗಾದವರ ಸ್ಥೀತಿಯಂತೂ ದೇವರೆ ಬಲ್ಲ. ಆಸ್ಪತ್ರೆಗಳಿಗೆ ಹೋದರೆ ಶವವನ್ನು ವಾಪಸ್ಸು ಕಳಿಸುತ್ತಾರೆ ಹೊರತು ಸರಿಯಾದ ಚಿಕಿತ್ಸೆಯಂತೂ ನೀಡುವುದಿಲ್ಲಾ. ಇಂತಹ ಸಾವುಗಳಿಗೆ ಡಿಎಚ್‌ಓ ಮತ್ತು ಟಿಎಚ್‌ಓ ಅವರೆ ನೇರ ಹೊಣೆಯಾಗಲಿದ್ದು ಸೂಕ್ತ ಚಿಕಿತ್ಸೆ ನೀಡಬೇಕಾಗಿದೆ.

ಚೆನ್ನಪ್ಪ ಆನೆಗುಂದಿ
ರೈತ ಮುಖಂಡರು

About The Author