ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ರವರಿಗೆ ಸನ್ಮಾನ

ಯಾದಗಿರಿ: ಕರ್ನಾಟಕ ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿ ನಿರ್ದೇಶಕರಾಗಿ ಯಾದಗಿರಿ ಮತ್ತು ರಾಯಚೂರು ವಲಯದಿಂದ ಆಯ್ಕೆಯಾದ ಶಾಂತಗೌಡ ನಾಗನಟಿಗಿ ಯವರು ಶಹಾಪುರ ಕ್ಷೇತ್ರದ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ರವರಿಗೆ ಇಂದು ಬೆಂಗಳೂರಿನ ಶಾಸಕರ ಭವನದಲ್ಲಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸದ ಶಾಸಕರು ನಿರ್ದೇಶಕರಾಗಿ ಆಯ್ಕೆಯಾಗಿದ್ದು ಸಂತಸದ ವಿಷಯ ಎಂದು ಹೇಳಿದರು. ರಾಯಚೂರು ಮತ್ತು ಯಾದಗಿರಿ ವಲಯದ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘಗಳಿಗೆ ಅಭಿನಂದನೆ ಸಲ್ಲಿಸಿದರು.ಸಹಕಾರಿ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಸಿಗುವ ಸೌಲಭ್ಯಗಳನ್ನು ಕುರಿಗಾರರಿಗೆ ಒದಗಿಸಿಕೊಡಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಂತಗೌಡ ನಾಗನಟಗಿ, ಶ್ರೀನಿವಾಸ್ ಏಗನೂರು, ಶರಣಯ್ಯ ಒಡೆಯರ್, ರಾಮಣ್ಣ ಕಾಡ್ಲೂರು, ನಿಂಗಣ್ಣ ಕಾಡ್ಲೂರು,ಹನುಮಂತ ಪೋಸ್ಟ್, ಮಲ್ಲಿಕಾರ್ಜುನ ಅರಿಕೇರಿ, ಸಾಬಣ್ಣ ಗಟ್ಟು ಬಿಚ್ಚಾಲಿ, ಮಾಳಪ್ಪ ಸುಂಕದ ಕೆಂಭಾವಿ, ನಿಂಗಣ್ಣ ರಾಜಾಪುರ,ಬಲಭೀಮ ಮಡ್ನಾಳ, ಮಲ್ಲಯ್ಯ ಅಲ್ಲಿಪುರ, ಮಾಳಪ್ಪ ರೋಟ್ನಡಗಿ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *