ಭಾರತದ ದೇವರು ಅಂಬೇಡ್ಕರ್:ಶಂಕರಗೌಡ ಮಾಲಿ ಪಾಟೀಲ್ 

ಶಹಾಪುರ:ಅವಕಾಶ ವಂಚಿತರಾಗಿ ಜನಿಸಿ, ಅಸ್ಪೃಶ್ಯತೆ ಎಂಬ ಪಿಡುಗಿನಲ್ಲಿ ಹೆಜ್ಜೆಹಾಕಿ, ಕಷ್ಟ, ಅವಮಾನಗಳನ್ನು ಹೋರಾಟದ ಮೂಲಕ ಎದುರಿಸಿ ಪ್ರತಿ ಪ್ರಜೆಗೂ ಸ್ವತಂತ್ರ, ಸಮಾನತೆ ಮತ್ತು ಘನತೆ, ಗೌರವದಿ ಬದುಕಲು ಅವಕಾಶ ಒದಗಿಸಿದ ಭಾರತದ ದೇವರು ಅಂಬೇಡ್ಕರ್ ಎಂದು ಶಂಕರಗೌಡ ಮಾಲಿ ಪಾಟೀಲ್ ಹೇಳಿದರು.ತಾಲೂಕಿನ ದಿಗ್ಗಿ ಗ್ರಾಮದ ಅಂಬೇಡ್ಕರ್ ಭವನದ ಆವರಣದಲ್ಲಿ 131 ನೇ ಡಾ. ಬಿ.ಆರ್. ಅಂಬೇಡ್ಕರವರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ದೇಶದ ಸಂವಿಧಾನ ಬಾಬಾ ಸಾಹೇಬರು ರಚಿಸದಿದ್ದರೆ ಇಷ್ಟು ಪ್ರಮಾಣದಲ್ಲಿ ಎಲ್ಲರಿಗೂ ಸ್ವತಂತ್ರ ಸಿಗುತ್ತಿರಲಿಲ್ಲ. ಮಹಿಳೆಯರು, ಕಾರ್ಮಿಕರು, ವಯಸ್ಕರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಸಮಾನ ಅವಕಾಶ ಕಲ್ಪಿಸಿದರು. ಆದರಿಂದ ವಿಶ್ವದಾದ್ಯಂತ ಅವರ ಜನ್ಮ ದಿನವನ್ನು ವಿಶ್ವ ಜ್ಞಾನದ ದಿನ ಎಂದು  ಆಚರಿಸುವರು ಎಂದರು.
 ಅಧ್ಯಕ್ಷತೆ ವಹಿಸಿ ಮಾತನಾಡಿದ ಗುರುಸಂಗಪ್ಪ ಪೂಜಾರಿ, ನಾವೆಲ್ಲರೂ ಶಿಕ್ಷಣವಂತರಾಗಿ ಬಾಬಾ ಸಾಹೇಬರ ತತ್ವ ಸಿದ್ದಾಂತಗಳನ್ನು ಪಾಲಿಸುತ್ತಾ, ಸಮಾಜದ ಏಳಿಗೆಯಲ್ಲಿ ಪಾತ್ರರಾಗೋಣ ಎಂದು ನುಡಿದರು.ಇದೇ ಸಂದರ್ಭದಲ್ಲಿ ದೇವೇಗೌಡ ಹಾಲಭಾವಿ, ಅಶೋಕ್ ಪ್ಯಾಟಿ,  ಸಂಗನಬಸಪ್ಪ  ಹಾದಿಮನಿ, ಮಹಾಂತೇಶ ದೊಡ್ಡಮನಿ, ಅಂಬ್ಲಪ್ಪ ಮ್ಯಾಗಿನಮನಿ, ರಾಮಚಂದ್ರಪ್ಪ ಮರಕಲ್, ಧರ್ಮಣ್ಣ ನಾಯ್ಕೊಡಿ, ಸಂಗಪ್ಪ ಮ್ಯಾಗಿನಮನಿ, ಅಂಬ್ಲಪ್ಪ ಹಳಿಮನಿ ಗ್ರಾಮದ ಯುವಕರು ಮಹಿಳೆಯರು, ಮಕ್ಕಳು ಸೇರಿದಂತೆ ಇತರರು ಇದ್ದರುಕಾರ್ಯಕ್ರಮವನ್ನು ರಘುಕುಮಾರ್ ದೊಡ್ಡಮನಿ  ನಿರೂಪಿಸಿದರು. ಚನ್ನಬಸಪ್ಪ ಬಿ.ದೊಡ್ಡಮನಿ ಸ್ವಾಗತಿಸಿದರು. ಚನ್ನಬಸಪ್ಪ ಕಾಡಮಗೇರಿ ವಂದಿಸಿದರು.

About The Author