ಮಹಾಶೈವಧರ್ಮಪೀಠ ವಾರ್ತೆ : ಮಹಾಶೈವ ಧರ್ಮಪೀಠದಲ್ಲಿ 47 ನೆಯ ‘ ಶಿವೋಪಶಮನ ಕಾರ್ಯ’

ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಮೇ 21 ರ ರವಿವಾರದಂದು 47 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶ್ರೀಕ್ಷೇತ್ರವನ್ನರಸಿ ಬಂದಿದ್ದ ಭಕ್ತರುಗಳಿಗೆ ಶಿವಕಾರುಣ್ಯವನ್ನು ಕರುಣಿಸಿದರು.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಹೊರವಲಯದ ಈಶಾನ್ಯದಿಕ್ಕಿನಲ್ಲಿರುವ ಮಹಾಶೈವ ಧರ್ಮಪೀಠವು ಜಾಗೃತ ಶಿವಕ್ಷೇತ್ರವಾಗಿದ್ದು ಕ್ಷೇತ್ರೇಶ್ವರ ವಿಶ್ವೇಶ್ವರ ಶಿವನ ನಿತ್ಯ ಲೀಲೆಗಳಿಂದ ಪ್ರಸಿದ್ಧವಾಗಿದೆ.ಪರಶಿವನು ಲೋಕೋದ್ಧಾರ ಸಂಕಲ್ಪ ಬದ್ಧನಾಗಿ ‘ ವಿಶ್ವೇಶ್ವರ ಲಿಂಗ’ ರೂಪದಲ್ಲಿ ಪ್ರಕಟಗೊಂಡಿರುವನು.

ವಿಶ್ವೇಶ್ವರ ಶಿವನು ತನ್ನ ಭವರೋಗವೈದ್ಯನಾದ ವೈದ್ಯನಾಥ ರೂಪದಿಂದ ಶ್ರೀಕ್ಷೇತ್ರವನ್ನರಸಿ ಬರುವ ಭಕ್ತರ ಬಹುರೋಗಗಳನ್ನು,ಅಸಾಧ್ಯರೋಗಗಳನ್ನು ಕಳೆಯುತ್ತಿರುವನು.ಮೃತ್ಯುಂಜಯ ರೂಪದಿಂದ ತನ್ನ ಸನ್ನಿಧಿಗೆ ಬರುವ ವೈದ್ಯರುಗಳು ಅಸಹಾಯಕತೆಯಲ್ಲಿ ಕೈಚೆಲ್ಲಿದ ರೋಗಿಗಳನ್ನು ಗುಣಪಡಿಸಿ,ಆಯುಷ್ಯವನ್ನು ಕರುಣಿಸಿ ಪೊರೆಯುವನು.ಭೂತನಾಥ ರೂಪದಿಂದ ಪಂಚಭೂತಾದಿಗಳಿಂದೊದಗುವ ಗ್ರಹ- ಭೂತ ಚೇಷ್ಟೆಗಳನ್ನು ನಿವಾರಿಸುತ್ತಿರುವನು.

ದಕ್ಷಿಣಾಮೂರ್ತಿ ರೂಪದಿಂದ ಶ್ರೀಕ್ಷೇತ್ರವನ್ನರಸಿ ಬರುವ ಭಕ್ತರಿಗೆ ವಿದ್ಯೆ ಬುದ್ಧಿಗಳನ್ನಿತ್ತು ಪೊರೆಯುತ್ತಿಹನು.ರುದ್ರ ರೂಪದಿಂದ ಅಭಿಚಾರಕರ್ಮ,ಕ್ಷುದ್ರವಿದ್ಯಾದಿ ಪ್ರಯೋಗಗಳನ್ನು ಸುಟ್ಟು ಬೂದಿ ಮಾಡುತ್ತಿರುವನು.ಪಶುಪತಿಯ ರೂಪದಲ್ಲಿ ತನ್ನ ಸನ್ನಿಧಿಯನ್ನರಸಿ ಬರುವವರ ದುಃಖ- ದಾರಿದ್ರ್ಯವನ್ನು ನಿವಾರಿಸಿ ಸಿರಿ ಸಂಪದಭಿವೃದ್ಧಿಗಳನ್ನಿತ್ತು ಪೊರೆಯುತ್ತಿಹನು.ಶ್ರೀಕ್ಷೇತ್ರ ಕೈಲಾಸವನ್ನರಸಿ ಬರುವ ಭಕ್ತರ ಸರ್ವ ಬೇಡಿಕೆಗಳನ್ನು ಈಡೇರಿಸುತ್ತ ‘ ಮಾತನಾಡುವ ಮಹಾದೇವ’ ನೆಂದು ಬಿರುದುಗೊಂಡಿರುವ ಶಿವ ವಿಶ್ವೇಶ್ವರನು ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರ ಮೂಲಕ ತನ್ನ ಲೋಕೋದ್ಧಾರದ ಲೀಲೆಯನ್ನಾಡುತ್ತಿದ್ದಾನೆ.

ಇಂದಿನ ಶಿವೋಪಶಮನ ಕಾರ್ಯದಲ್ಲಿ ಬೀದರ,ವಿಜಯಪುರಗಳಂತಹ ರಾಜ್ಯದ ದೂರದ ಸ್ಥಳಗಳಿಂದ ಬಂದಿದ್ದ ಭಕ್ತರುಗಳಲ್ಲದೆ ಆಂಧ್ರಪದೇಶದ ಆದವಾನಿ,ಕರ್ನೂಲು ಮತ್ತು ಗುಂಟೂರು ಜಿಲ್ಲೆಗಳಿಂದಲೂ ಬಂದಿದ್ದ ಭಕ್ತರುಗಳು ಶಿವ ವಿಶ್ವೇಶ್ವರನಿಂದ ತಮ್ಮ ಸಮಸ್ಯೆಗಳ ಪರಿಹಾರ ಪಡೆದರು.ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠ ವಾರ್ತಾಧಿಕಾರಿ ಬಸವರಾಜ ಕರೆಗಾರ ಅವರುಗಳಲ್ಲದೆ ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಸದಸ್ಯರುಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಶಿವಯ್ಯಸ್ವಾಮಿ ಮಠಪತಿ,ಶರಣಪ್ಪಗೌಡ ಚಿತ್ರಕಲಾವಿದ ಬೂದಿನಾಳ,ಪತ್ರಕರ್ತ ಏಳುಬಾವೆಪ್ಪ ಗೌಡ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ,ಯಲ್ಲಪ್ಪ ಕರಿಗಾರ,ಶ್ರೀಶೈಲ ಕರಿಗಾರ, ಹನುಮೇಶ,ಮಹಾಶೈವ ಧರ್ಮಪೀಠದ ಪ್ರಚಾರ ವ್ಯವಸ್ಥಾಪಕ ಉದಯಕುಮಾರ ಸಣ್ಣ ಹುಲಿಗೆಪ್ಪ ಮಡಿವಾಳ ಸೇರಿದಂತೆ ಮಹಾಶೈವ ಧರ್ಮಪೀಠದ ಕಾರ್ಯಕರ್ತರುಗಳು ಮತ್ತು ಭಕ್ತರುಗಳು ಇದ್ದರು.

About The Author