ಯುವನಿಧಿ ಯೋಜನೆಯಡಿ ಪದವಿಧರರಿಗೆ 3000 ರೂ ನೆರವು ಪ್ರಸ್ತುತ ಉತ್ತೀರ್ಣರಾದವರಿಗೆ ಮಾತ್ರ ಅನ್ವಯ ಆಕ್ರೋಶ!

ವಿಶ್ಲೇಷಣೆ

ರಾಜ್ಯ ಸರಕಾರ ಇಂದಿನ ಸಚಿವ ಸಂಪುಟದಲ್ಲಿ 5 ಗ್ಯಾರಂಟಿಗಳನ್ನು ತಾತ್ವಿಕವಾಗಿ ಜಾರಿಗೆ ಬರುವಂತೆ ಅನುಮೋದನೆ ನೀಡಿದೆ. ಮುಂದಿನ ಸಚಿವ ಸಂಪುಟದಲ್ಲಿ ಜಾರಿಗೆ ಬರುತ್ತದೆ ಎಂದು ಸಿಎಂ ಸಿದ್ದರಾಮಯ್ಯನವರು ಘೋಷಿಸಿದ್ದಾರೆ. ಆದರೆ ಸರಕಾರ ಯುವನಿಧಿ ಯೋಜನೆಯಲ್ಲಿ ಪದವಿ ಪಾಸಾದವರಿಗೆ ಉತ್ತೀರ್ಣರಾದವರಿಗೆ 3000 ರೂಂ. ನೀಡಲಾಗುವುದು.ಅದು ಎರಡು ವರ್ಷದವರಿಗೆ ಮಾತ್ರ ಎಂದು ಹೇಳಲಾಗಿದೆ. ಇದು ರಾಜ್ಯಾದ್ಯಂತ ಪದವೀಧರ ಹೊಂದಿದವರ ಆಕ್ರೋಶಕ್ಕೆ ಕಾರಣವಾಗಬಹುದು ಎನ್ನಲಾಗುತ್ತಿದೆ. ಕಾರಣ ಕಾಂಗ್ರೆಸ್ ಪಕ್ಷ ಈ ಮೊದಲು ಇದೇ ರೀತಿಯಾಗಿ ಹೇಳಬೇಕಿತ್ತು.
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ನವರು ಸುಳ್ಳು ಹೇಳಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಈ ರೀತಿಯ ಕಂಡಿಷನ್ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಉತ್ತೀರ್ಣರಾದ ಒಟ್ಟಾರೆ ಪದವಿದರರಿಗೆ 3000 ರೂ ನೀಡಬಹುದಿತ್ತು. ಆದರೆ ಸರಕಾರ ಜಾಣ ನಡೆ ಅನುಸರಿಸಿದೆ. ಎರಡು ವರ್ಷ ಮಾತ್ರ ಎಂದು ಹೇಳಿದೆ. ಎರಡು ವರ್ಷದ ನಂತರ ನೆರವಾಗಲಿದೆ. ಉದ್ಯೋಗ ಎರಡು ವರ್ಷದೊಳಗೆ ಸಿಗದಿದ್ದರೆ ಮೂರು ಸಾವಿರ ರೂಪಾಯಿ ಸರಕಾರದ ನೆರವು ಸಿಗುವುದಿಲ್ಲ ಎನ್ನಲಾಗುತ್ತಿದೆ.
ಪದವೀಧರ ಉದ್ಯೋಗ ಆತನ ವಯಸ್ಸಿನ ಅನುಗುಣವಾಗಿ ಪದವಿಯಲ್ಲಿ ಉತ್ತೀರ್ಣರಾದ ನಂತರ ಆತನಿಗೆ 40 ವರ್ಷ ವಯಸ್ಸಿನವರೆಗಾದರೂ ಸಿಗುತ್ತದೆ ಎಂದು ಪದವೀಧರರು ಎಂದುಕೊಂಡಿದ್ದರು.! ಅದು ಹುಸಿಯಾಗಿದೆ. ಇದರಿಂದ ಯುವ ಪದವಿಧರು ರೊಚ್ಚಿಗೆರಬಹುದು.

About The Author