ಕೇಂದ್ರ ಸಚಿವ ಪುರುಷೋತ್ತಮ ರೂಪಾಲರನ್ನು ಭೇಟಿ ಮಾಡಿದ ಕುರಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ

ನವದೆಹಲಿ:ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶರಣು ಬಿ ತಳ್ಳಿಕೇರಿಯವರು ದೆಹಲಿಯಲ್ಲಿಂದು ಕೇಂದ್ರ ಪಶುಸಂಗೋಪನಾ ಸಚಿವರಾದ ಪುರುಷೋತ್ತಮ ರೂಪಾಲರವರನ್ನು ಭೇಟಿ  ಮಾಡಿ, ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು.ನಿಗಮದ ಇತರ  ಚಟುವಟಿಕೆಗಳ ಬಗ್ಗೆ ವಿವರವಾಗಿ ಅಧ್ಯಕ್ಷರು ತಿಳಿಸಿದರು.ನಿಗಮದ  ಕಾರ್ಯಚಟುವಟಿಕೆಗಳ ಬಗ್ಗೆ  ಕೇಳಿ ಖುಷಿ ಪಟ್ಟರು.ನಿಗಮದ ಅಧ್ಯಕ್ಷರು ಸಚಿವರಿಗೆ ನೂತನ ಯೋಜನೆಗಳ ಪ್ರಸ್ತಾವನೆಯನ್ನು ನೀಡಿ ವಿನಂತಿಸಿದರು.ನೂತನ ಯೋಜನೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದರು.ಈ ಸಂದರ್ಭದಲ್ಲಿ ನಿಗಮದ ವವಸ್ಥಾಪಕ ನಿರ್ದೇಶಕರಾದ ಡಾ॥ ಪಿ. ಶ್ರೀನಿವಾಸು, ಮುಖ್ಯ ಪಶು ವೈದ್ಯಾಧಿಕಾರಿಯಾದ ಡಾ॥ ಮುರಳಿ, ಡಾ॥ ಜ್ಞಾನೇಶ್ ಸುಹಾಸ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *