ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಜಾತ್ಯತೀತತೆಯ ಗೆಲುವು ಡಾ. ಕೃಷ್ಣಮೂರ್ತಿ ವಿಶ್ಲೇಷಣೆ

ಶಹಾಪುರ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ. ಕಾಂಗ್ರೆಸ್ ಪಕ್ಷದ ಗೆಲುವಿನ ಜೊತೆಗೆ ರಾಜ್ಯದ ಎಲ್ಲಾ ಜಾತಿಗಳ ಧರ್ಮಗಳ ಜಾತ್ಯತೀತ ಗೆಲುವಾಗಿದೆ ಎಂದು ಯಾದಗಿರಿ ಜಿಲ್ಲೆಯ ಕೆಪಿಸಿಸಿ ವೈದ್ಯಕೀಯ ಘಟಕದ ಅಧ್ಯಕ್ಷರಾದ ಡಾ. ಕೃಷ್ಣಮೂರ್ತಿ ತಿಳಿಸಿದರು.

****

ಬಿಜೆಪಿ ಆಡಳಿತದಲ್ಲಿರುವ ಆಡಳಿತಕ್ಕೆ ಜನ ಬೇಸತ್ತು ಹೋಗಿದ್ದರು. ಬರೀ ಸುಳ್ಳು ಧರ್ಮಧಾರಿತ ರಾಜಕೀಯ ಜಾತಿವಾರು ಲೆಕ್ಕಾಚಾರ  ಇದೆಲ್ಲವುಗಳಿಂದ ಬೇಸತ್ತ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಅಭೂತ ಪೂರ್ವ ಜಯ ತಂದುಕೊಟ್ಟಿದ್ದಾರೆ.
****
ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಪ್ರಜೆಗಳು ಕೆಲವು ಕ್ಷೇತ್ರಗಳಲ್ಲಿ ಜಾತಿ ಧರ್ಮ ಕೋಮುವಾದದ ವಿಷಯಗಳನ್ನು ಲೆಕ್ಕಿಸದೆ ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡಿದ್ದಾರೆ.ರಾಜ್ಯದ ಜನರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
****
ಯಾವುದೇ ವಿಷಯಗಳು ಬಾಯಿ ಮಾತಿನಿಂದ ಹೇಳಿದರೆ ಸಾಲದು. ಅಧಿಕಾರ ಬಂದ ಮೇಲೆ ಜಾರಿಗೆ ತರಬೇಕು. 2013ರಲ್ಲಿನ ಕಾಂಗ್ರೆಸ್ ಸರಕಾರ  ಪ್ರಣಾಳಿಕೆಗಳ ಎಲ್ಲಾ ಭರವಸೆಗಳನ್ನು ಜಾರಿಗೆ ತಂದಿತ್ತು. ಅದೇ ರೀತಿಯಾಗಿ 2023ರಲ್ಲಿಯೂ ಪಕ್ಷದ ಮೇಲೆ ರಾಜ್ಯದ ಮತದಾರರ ಋಣಭಾರವಿದೆ. ಐದು ಗ್ಯಾರಂಟಿ ಕಾರ್ಡುಗಳನ್ನು ಜಾರಿಗೆ ತರಬೇಕು. ಹಣಕಾಸಿನ ಮೂಲವನ್ನು ಸಂಗ್ರಹಿಸಬೇಕಿದೆ.ಸಂಪನ್ಮೂಲ ಕ್ರೂಡೀಕರಿಸಬೇಕಿದೆ. ಖಜಾನೆ ಖಾಲಿಯಾಗಿದೆ.ಪ್ರತಿ ತಿಂಗಳು ಗ್ಯಾರಂಟಿಗಳನ್ನು ಮತದಾರಿಗೆ ತಲುಪಿಸಬೇಕು. ಉದ್ಯೋಗ ಸೃಷ್ಟಿಸಬೇಕು. ಹೀಗೆ ಹಲವಾರು ಜನಪರ ಕಾರ್ಯಗಳನ್ನು ಐದು ವರ್ಷಗಳಲ್ಲಿ ಜಾರಿಗೆ ತರಬೇಕಿದೆ. 2028ರ ಚುನಾವಣೆ ಮೂಲಾಧಾರವಾಗಿಟ್ಟುಕೊಂಡು ಅದರ ಗೆಲುವಿಗಾಗಿ ರಾಜ್ಯವನ್ನು ಪ್ರಗತಿಯತ್ತ ಸಾಗಿಸಬೇಕಿದೆ ಎಂದರು.

About The Author