ಸಿದ್ದರಾಮಯ್ಯ ಸಿಎಂ ನೇಮಕ ನಿಖಿಲ್ ಶಂಕರ್ ಸೇರಿದಂತೆ ಹಲವರ ಹರ್ಷ

ವಡಗೇರಾ : ಎಐಸಿಸಿ ಯಿಂದ ರಾಜ್ಯದ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿಕೆ.ಶಿವಕುಮಾರ್ ರವರನ್ನು ನೇಮಕ ಮಾಡಿದ್ದು ಯಾದಗಿರಿ ಜಿಲ್ಲೆಯಾದ್ಯಂತ ಹರ್ಷ ವ್ಯಕ್ತವಾಗುತ್ತಿದ್ದು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಿಖಿಲ ಶಂಕರ್ ಸೇರಿದಂತೆ ಹಲವರು ಹರ್ಷ ವ್ಯಕ್ತಪಡಿಸಿದ್ದಾರೆ.
****
2013ರಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯನವರೂ 5 ವರ್ಷಗಳ ಕಾಲ ಉತ್ತಮ ಆಡಳಿತ ನಡೆಸಿದರು. ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದ್ದಾರೆ. ಮತ್ತೆ ರಾಜ್ಯಕ್ಕೆ ಒಳ್ಳೆಯ ಆಡಳಿತದ ಯೋಗ ಬಂದಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಕೊಟ್ಟ ಐದು ಗ್ಯಾರಂಟಿಗಳನ್ನು ಜಾರಿಗೆ ತರಲಿದ್ದೇವೆ. ಐದು ವರ್ಷಗಳ ಕಾಲ ನಾವು ರಾಜ್ಯದ ಜನತೆಯ ಋಣ ತೀರಿಸಬೇಕಿದೆ.ಉಪ ಮುಖ್ಯಮಂತ್ರಿಗಳಾಗಿ ಡಿಕೆ ಶಿವಕುಮಾರ್ ಅವರನ್ನು ನೇಮಕ ಮಾಡಿದ್ದು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ನಿಖಿಲ್ ಶಂಕರ್ ತಿಳಿಸಿದರು.
ಮುಂದಿನ ದಿನಗಳಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಕೆಲವು ನಿರ್ಣಾಯಕ ಕೆಲಸಗಳು ಮಾಡಬೇಕಿದೆ. ಸ್ವಾತಂತ್ರ ಹೋರಾಟಗಾರ ಕೊಲೂರು ಮಲ್ಲಪ್ಪನವರ ಸ್ಮಾರಕ ಲೋಕಾರ್ಪಣೆ ಮಾಡಬೇಕಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸಲಿದ್ದಾರೆ. ಆದಷ್ಟು ಬೇಗನೆ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ತಿಳಿಸಿದರು.
****
ಸಿದ್ದರಾಮಯ್ಯನವರು ರಾಜ್ಯದ ಎಲ್ಲಾ ಸಮುದಾಯಗಳ ಅಭಿವೃದ್ಧಿ ಬಗ್ಗೆ ಚಿಂತಿಸುವ ನಾಯಕ. ಮುಖ್ಯಮಂತ್ರಿಗಳಾಗಿ ಐದು ವರ್ಷಗಳ ಕಾಲ ಒಳ್ಳೆಯ ಆಡಳಿತ ನೀಡುವರು ಎಂದು ಜಿಲ್ಲಾ ಸಿದ್ದರಾಮಮಯ್ಯ ಬ್ರಿಗೇಡ್ ಜಿಲ್ಲಾಧ್ಯಕ್ಷರಾದ ಬಸವರಾಜ ಅತ್ನೂರು ತಿಳಿಸಿದರು.
****
ಯಾದಗಿರಿ ಕುರುಬರ ಸಂಘದ ಜಿಲ್ಲಾಧ್ಯಕ್ಷರಾದ ಮಲ್ಲಣ್ಣ ಐಕೂರು ಹರ್ಷ ವ್ಯಕ್ತಪಡಿಸಿದ್ದು, ಜಿಲ್ಲೆಯಾದ್ಯಂತ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳು ಆಗಲಿ ಎಂದು ಸಮಾಜದವರೆಲ್ಲರೂ ಅವರ ಬೆನ್ನಿಗೆ ನಿಂತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಾರೆ ಎಂದು ಹೇಳಿದರು.

About The Author