ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಮೇ ೧೪ ರ ರವಿವಾರದಂದು 46ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶ್ರೀಕ್ಷೇತ್ರ ಕೈಲಾಸದ ವಿಶ್ವೇಶ್ವರನ ಸನ್ನಿಧಿಯನ್ನರಸಿ ಬಂದಿದ್ದ ಭಕ್ತರುಗಳಿಗೆ ಶಿವಾನುಗ್ರಹವನ್ನು ಕರುಣಿಸಿದರು.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಹೊರವಲಯದಲ್ಲಿರುವ ಮಹಾಶೈವ ಧರ್ಮಪೀಠವು ಶಿವಶಕ್ತಿಜಾಗೃತಸ್ಥಳವೆಂದು ಪ್ರಸಿದ್ಧಿಗೊಂಡಿದ್ದು ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಪ್ರತಿರವಿವಾರ ‘ ಶಿವೋಪಶಮನ’ಎನ್ನುವ ವಿಶಿಷ್ಟ ರೋಗಬಾಧೆ ನಿವಾರಣೆ ಮತ್ತು ಸಂಕಷ್ಟ ಪರಿಹಾರ ಕಾರ್ಯ ನಡೆಸುತ್ತಿದ್ದಾರೆ.ಶ್ರೀಕ್ಷೇತ್ರ ಕೈಲಾಸವನ್ನರಸಿ ಬರುವ ಭಕ್ತರುಗಳ ಸಮಸ್ಯೆಗಳನ್ನು ವಿಶ್ವೇಶ್ವರ ಶಿವನಲ್ಲಿ ನಿವೇದಿಸಿ,ಶಿವ ಕರುಣಿಸುವ ಸಂದೇಶ ಮತ್ತು ಪರಿಹಾರ ಮಾರ್ಗವನ್ನು ಭಕ್ತರುಗಳಿಗೆ ಅನುಗ್ರಹಿಸುತ್ತಾರೆ.ಕ್ಷೇತ್ರೇಶ್ವರ ವಿಶ್ವೇಶ್ವರ ಶಿವನೇ ತನ್ನ ಲೋಕಕಾರುಣ್ಯಗುಣ ವಿಶೇಷದಿಂದ ಭಕ್ತರುಗಳ ಸಂಕಷ್ಟವನ್ನು ಪರಿಹರಿಸುತ್ತಿರುವುದರಿಂದ ‘ ಶಿವೋಪಶಮನ ಕಾರ್ಯ’ ಎನ್ನಲಾಗುತ್ತದೆ.ಮಹಾಶೈವ ಧರ್ಮಪೀಠವು ಶಿವಸರ್ವೋತ್ತಮ ತತ್ತ್ವವನ್ನು ಎತ್ತಿಹಿಡಿಯುವ ಶೈವಸಂಪ್ರದಾಯದ ಮಠವಾಗಿದ್ದರೂ ಪೀಠಾಧ್ಯಕ್ಷರ ‘ ಶಿವಸರ್ವೋದಯ ತತ್ತ್ವ’ ದಂತೆ ನಡೆಯುತ್ತಿರುವ ಜಾತ್ಯಾತೀತ ಮಠವಾಗಿದೆ.ಹಿಂದೂ ಮುಸ್ಲಿಂ ಕ್ರೈಸ್ತರೆನ್ನದೆ ಎಲ್ಲ ಮತ ಧರ್ಮಗಳ ಜನರು ಮಹಾಶೈವ ಧರ್ಮಪೀಠವನ್ನರಸಿ ಬರುತ್ತಿದ್ದಾರೆ.ಶ್ರೀಕ್ಷೇತ್ರದಲ್ಲಿ ಅನ್ನದಾನ- ಅಭಯದಾನಗಳೆರಡೂ ಇವೆ.ಎಲ್ಲ ಭಕ್ತರು ಪೀಠಾಧ್ಯಕ್ಷರೊಂದಿಗೆ ಸಾಮೂಹಿಕವಾಗಿ,ಸಹಪಂಕ್ತಿಯಲ್ಲಿ ಪ್ರಸಾದಸ್ವೀಕರಿಸುತ್ತಾರೆ.ಅಸಮಾನತೆಗಾಗಲಿ,ಪಂಕ್ತಿಭೇದಕ್ಕಾಗಲಿ ಅವಕಾಶ ಇಲ್ಲ ಮಹಾಶೈವ ಧರ್ಮಪೀಠದಲ್ಲಿ.
ಧರ್ಮಪೀಠದ ದಾಸೋಹ ಸಮಿತಿಯ ಮುಖ್ಯಸ್ಥರಾದ ಗುರುಬಸವ ಹುರಕಡ್ಲಿಯವರು ಪೀಠಾಧ್ಯಕ್ಷರಾದ ಶ್ರೀ ಮುಕ್ಲಣ್ಣ ಕರಿಗಾರ ಅವರ ಗುರುಗಳಾದ ಶಿವೈಕ್ಯರಾದ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ಲೋಕಾನುಗ್ರಹ ದೃಷ್ಟಿಯಿಂದ ಕರುಣಿಸಿರುವ ಸರ್ವಧರ್ಮೀಯರಿಗೂ ಉಪಯುಕ್ತವಾಗವ ‘ ಹೇ ಪ್ರಭೋ ಪ್ರಸೀದ ಓಂ’ ಎನ್ನುವ ಯುಗಮಂತ್ರವನ್ನು ಸಾಮೂಹಿಕವಾಗಿ ಪಠಿಸುವಂತೆ ಸ್ವತಃ ತಾವು ಮುಮ್ಮೇಳದಲ್ಲಿ ಪಠಿಸಿ ಈ ಭಾಗದಲ್ಲಿ ವಿಶ್ವಧರ್ಮದ ಜಾಗೃತಿಯನ್ನುಂಟು ಮಾಡುತ್ತಿದ್ದಾರೆ.’ ಹೇ ಪ್ರಭೋ ಪ್ರಸೀದ ಓಂ’ ಮಹಾಮಂತ್ರವು ಜಾತಿ ಮತ- ಪಂತಗಳನ್ನು ಮೀರಿದ ವಿಶ್ವಮಂತ್ರವಾಗಿದೆ.
ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ,ಮಹಾಶೈವ ಧರ್ಮಪೀಠದ ದಾಸೋಹ ಸಮಿತಿಯ ಮುಖ್ಯಸ್ಥ ಗುರುಬಸವ ಹುರಕಡ್ಲಿ,ಮಹಾಶೈವ ಧರ್ಮಪೀಠದ ವಿವಿಧ ಸಮತಿಗಳ ಪದಾಧಿಕಾರಿಗಳಾದ ಗೋಪಾಲ ಮಸೀದಪುರ, ಚೆನ್ನಪ್ಪಗೌಡ ಮಾಲೀಪಟೀಲ್,ಚಿತ್ರಕಲಾವಿದ ಶರಣಪ್ಪ ,ಬಾಬುಗೌಡ ಯಾದವ್ ಸುಲ್ತಾನಪುರ,ಮೃತ್ಯುಂಜಯ ಯಾದವ್,ಶಿವಯ್ಯ ಸ್ವಾಮಿ ಮಠಪತಿ,ಧರ್ಮಪೀಠದ ಪ್ರಸಾರ ವ್ಯವಸ್ಥಾಪಕ ಉದಯಕುಮಾರ ಸಣ್ಣಹುಲಿಗೆಪ್ಪ ಮಡಿವಾಳ, ರಘುನಂದನ್ ಪೂಜಾರಿ,ಬಸ್ಸಣ್ಣ ಗುತ್ತೆದಾರರು,ರಂಗಪ್ಪ ,ಶಿವಾನಂದ ಹಿಂದುಪುರ,ತಿಪ್ಪಯ್ಯ ಭೋವಿ ಸೇರಿದಂತ ಮಹಾಶೈವ ಧರ್ಮಪೀಠದ ಪದಾಧಿಕಾರಿಗಳು ಮತ್ತು ಭಕ್ತರುಗಳು ಉಪಸ್ಥಿತರಿದ್ದರು.