ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡುವಂತೆ ಮರಿಲಿಂಗಪ್ಪ ಮನವಿ

ವಡಗೇರಾ : ಸಿದ್ದರಾಮಯ್ಯನವರನ್ನು ಕರ್ನಾಟಕ ರಾಜ್ಯದ ಮುಂದಿನ ಮುಖ್ಯಮಂತ್ರಿ ಯನ್ನಾಗಿ ಮಾಡಬೇಕು. ಪಕ್ಷದ ಅಭ್ಯರ್ಥಿಗಳ ಪರವಾಗಿ ಹಗಲು ಇರುಳು ಎನ್ನದೆ ರಾಜ್ಯದ್ಯಂತ ಪ್ರಚಾರ ಮಾಡಿ ಎಲ್ಲಾ ಹಿಂದುಳಿದ ವರ್ಗದವರ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಹಾಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ವಡಗೇರಾ ತಾಲೂಕು ಕುರುಬ ಸಮಾಜದ ಮುಖಂಡರಾದ ಮರಿಲಿಂಗಪ್ಪ ಸಾವುಕಾರ ಕುಮನೂರ ಆಗ್ರಹಿಸಿದ್ದಾರೆ.

ಕಾಂಗ್ರೆಸ್ಗೆ ಹೆಚ್ಚಿನ ಸ್ಥಾನದ ಗೆಲುವಿಗೆ ಸಿದ್ದರಾಮಯ್ಯನವರು ಕಾರಣರಾಗಿದ್ದಾರೆ. ಕಳೆದ ಬಾರಿ ಐದು ವರ್ಷಗಳ ಸಂಪೂರ್ಣ ಆಡಳಿತ ನಡೆಸಿ ಎಲ್ಲಾ ವರ್ಗದ ಜನರ ಹಿತಕ್ಕಾಗಿ ಶ್ರಮಿಸಿದಂತ ಮಹಾನ್ ನಾಯಕರು. ಇವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದೆ ಆದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಹೆಚ್ಚಿನ ಬಲ ಬರುವುದರ ಜೊತೆಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಿಂದ ಹೆಚ್ಚಿನ ಸ್ಥಾನ ಗೆಲ್ಲಲು ಅನುಕೂಲವಾಗುತ್ತೆ. ಇದು ಒಂದು ಜಾತಿಯ ಬೇಡಿಕೆಯಲ್ಲ. ಎಲ್ಲಾ ವರ್ಗದ ಜನರ ಬೇಡಿಕೆಯಾಗಿದೆ. ಈ ಎಲ್ಲ ಅಂಶಗಳನ್ನು ಮನಗಂಡು ಕಾಂಗ್ರೆಸ್ ಹೈಕಮಾಂಡ ಈ ಬಾರಿ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡುವಂತೆ ಮನವಿ ಮಾಡಿದರು.

Leave a Reply

Your email address will not be published. Required fields are marked *