10ನೇ ತರಗತಿಯಲ್ಲಿ ಡಿಡಿಯು ಶಾಲೆಗೆ ಉತ್ತಮ ಫಲಿತಾಂಶ

ಶಹಾಪುರ : ದಿ. ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಡಿಡಿಯು ಕಾನ್ವೆಂಟ್ ಆಂಗ್ಲ ಮಾಧ್ಯಮದ ಹತ್ತನೇ ತರಗತಿಯ 2022-23ನೇ ಸಾಲಿನ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ. ಒಟ್ಟು ಹಾಜರಾದ 88 ವಿದ್ಯಾರ್ಥಿಗಳಲ್ಲಿ 15 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 52 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಶಾಲೆಗೆ ಶೇ. 88.63 ರಷ್ಟು ಫಲಿತಾಂಶ ದಾಖಲಾಗಿದೆ.

ಶ್ರೀದೇವಿ ಎಂಬ ವಿದ್ಯಾರ್ಥಿಯು 612 (ಶೇ.97.99) ಹೆಚ್ಚು ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ.ಪರಶುರಾಮ 593 (ಶೇ.94.88), ಶಶಾಂಕ 580 (ಶೇ.92.8) ಪ್ರಜ್ವಲ್ 580 (ಶೇ.92.8), ರಿತ್ವಿಕ್ 578 (ಶೇ 92.48), ವೀರೇಶ್ 574 (ಶೇ.91.84), ಮನೋಜ 568 (ಶೇ.90.88), ಸಿಂಧೂ 564 (ಶೇ.90.24), ಕಾವ್ಯನಾಯಕ 560 (ಶೇ.89.6), ಪಲ್ಲವಿ 557 (ಶೇ.89.12), ಬಸವಂತರಾಯಗೌಡ 553 (ಶೇ.88.48), ಮಹಮದ್ ಫಯಾಜ್ 552 (ಶೇ.88.32), ದಾವಲ್ ಮಲಿಕ್ 545 (ಶೇ.87.20),ವೀರೇಶ್ 538 (ಶೇ.86.8) ಉತ್ತಮ ಫಲಿತಾಂಶ ಸಾಧಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕರಾದ ಡಾ. ಭೀಮಣ್ಣ ಮೇಟಿ, ಕಾರ್ಯದರ್ಶಿಗಳಾದ ದೇವೇಂದ್ರಪ್ಪ ಮೇಟಿ ಮತ್ತು ಸಂಸ್ಥೆಯ ಶಾಲಾ ಮುಖ್ಯಗುರುಗಳು ಶಿಕ್ಷಕರು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

About The Author