10ನೇ ತರಗತಿಯಲ್ಲಿ ಡಿಡಿಯು ಕನ್ನಡ ಮಾಧ್ಯಮ ಶಾಲೆಗೆ ಶೇ.100 ರಷ್ಟು ಫಲಿತಾಂಶ

ಶಹಾಪುರ : ದಿ. ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಡಿಡಿಯು ಕನ್ನಡ ಮಾಧ್ಯಮದ ಹತ್ತನೇ ತರಗತಿಯ 2022-23ನೇ ಸಾಲಿನ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ. ಒಟ್ಟು ಹಾಜರಾದ 40 ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 25 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ,03 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಉತ್ತೀರ್ಣರಾಗಿದ್ದು, ಶಾಲೆಗೆ ಶೇ.100 ರಷ್ಟು ಫಲಿತಾಂಶ ದಾಖಲಾಗಿದೆ.

ವಿಜಯಲಕ್ಷ್ಮಿ ಎಂಬ ವಿದ್ಯಾರ್ಥಿಯು 584 (ಶೇ.93.44) ಹೆಚ್ಚು ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ.ಆಶಾ 579 (ಶೇ.92.64), ರಾಹುಲ 579 (ಶೇ.92.64) ಸಂಜನಾ556 (ಶೇ.88.96), ಐಶ್ವರ್ಯ 555 (ಶೇ 88.80), ಪ್ರೀಯಾಂಕ 553 (ಶೇ.88.48), ಗೌರಿಶಂಕರ 551 (ಶೇ.88.16), ನಿರ್ಮಾಲ 546 (ಶೇ.87.36), ಆರತಿ 557 (ಶೇ.85.95), ಕಾಂಚನಾ 526 (ಶೇ.84.16), ಭಾಗ್ಯಶ್ರೀ 514 (ಶೇ.82.24), ಐಶ್ವರ್ಯ  514 (ಶೇ.82.14), ವರ್ಷ 507 (ಶೇ.81.12) ಉತ್ತಮ ಫಲಿತಾಂಶ ಸಾಧಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕರಾದ ಡಾ. ಭೀಮಣ್ಣ ಮೇಟಿ, ಕಾರ್ಯದರ್ಶಿಗಳಾದ ದೇವೇಂದ್ರಪ್ಪ ಮೇಟಿ ಮತ್ತು ಸಂಸ್ಥೆಯ ಶಾಲಾ ಮುಖ್ಯಗುರುಗಳು ಶಿಕ್ಷಕರು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

About The Author