ಸಾಮಾಜಿಕ ಜಾಲತಾಣದಲ್ಲಿ ಮತದಾನ ಜಾಗೃತಿ  ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಯಾದಗಿರಿ : ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಯಾದಗಿರಿ ವತಿಯಿಂದ ಆಯೋಜಿಸಿರುವ ಪೇಸ್ ಬುಕ್, ಟ್ವಿಟ್ಟರ್ ನಲ್ಲಿ ಮತದಾರರ ಜಾಗೃತಿ ಮೂಡಿಸಲು ಕಿರು ವೀಡಿಯೋಗಳನ್ನು ಅಪಲೋಡ ಮಾಡುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.   ದಿನಾಂಕ ೩೦-೪-೨೦೨೩ ರಿಂದ ೦೪-೦೫-೨೦೨೩ ರ ರವರೆಗೆ ಅವಕಾಶ ಕಲ್ಪಿಸಲಾಗಿತ್ತು.
ವಿಡಿಯೋ ಅಪಲೋಡ ಮಾಡಿರುವ ಸ್ಪರ್ಧಾಳುಗಳಲ್ಲಿ ಅತೀ ಹೆಚ್ಚು ಲೈಕ್ಸ ಪಡೆದಿರುವ ವಿಡಿಯೋ ಅಪಲೋಡದಾರರಿಗೆ ಸ್ನೇಹಲ್ ಆರ್  ಜಿಲ್ಲಾಧಿಕಾರಿಗಳು, ಗರಿಮಾ ಪನ್ವಾರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪೇಸಬುಕ್ ಅಪಲೋಡದಾರರಲ್ಲಿ ಪ್ರಥಮ ಸ್ಥಾನವನ್ನು ಕು. ಅಲಿನಾ ಬೇಗಂ ಸಾ|| ನಾಯ್ಕಲ್, ದ್ವೀತಿಯಾ ಸ್ಥಾನವನ್ನು  ಕು ಲಕ್ಷ್ಮೀ ಪೂಜಾರಿ ಸಾ|| ಚನ್ನೂರು, ತೃತೀಯಾ ಸ್ಥಾನವನ್ನು ಮಂಜುನಾಥ ಸಾ|| ಕೋನಹಳ್ಳಿ ಹಾಗೂ ಟ್ವಟರ್ ನಲ್ಲಿ ಅಪಲೋಡ ಮಾಡಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯದ ವಿಧ್ಯಾರ್ಥಿನಿಯರಾದ ಶಿವಪೂಜಾ ಮತ್ತು  ಮೇಘನಾ ವಿಜೇತರಿಗೆ ಬಹುಮಾನ ನೀಡಿ ಪ್ರಶಂಸಿಸಿದರು.
   ಕಾಜಲ್ ಪಾಟೀಲ್ ಡಿ.ಸಿ.ಎಫ್, ಜಯೀರಾ ಜಿಯಾಉಲ್ಲಾಖಾನ್ ಸಹಾಯಕ ಕಾರ್ಯದರ್ಶಿ.ಜಿ.ಪಂ.ಯಾದಗಿರಿ, ರಾಜು ಬಾವಳ್ಳಿ ಸಹಾಯಕ ನಿರ್ದೇಶಕರು ಯುವಜನ & ಕ್ರೀಡಾ ಇಲಾಖೆ, ಸಿದ್ದರೆಡ್ಡಿ ಎನ್ಅರ್ಡಿಎಮ್ಸಿ, ಮಂಜು  ಮುಕಾನಿ ಆಪ್ತ ಸಹಾಯಕರು, ಶಿವಕುಮಾರ ಜಿಲ್ಲಾ ಐ.ಇ.ಸಿ ಸಮಾಲೋಚಕರು ಸ್ವ.ಭಾ.ಮಿ ಜಿ.ಪಂ.ಯಾದಗಿರಿ, ವಿಜೇತರ ಪಾಲಕರು  ಭಾಗಿಯಾಗಿದ್ದರು.
 

About The Author