ಗೋಗಿ ನಾಗನಟಗಿ ಸಗರ ಗ್ರಾಮಗಳಲ್ಲಿ ಬಿಜೆಪಿ ಭರ್ಜರಿ ಪ್ರಚಾರ

ಶಹಾಪುರ : ಶಹಾಪುರ ಮತಕ್ಷೇತ್ರದ ಗೋಗಿ ಕೆ,ನಾಗನಟಗಿ,ಸಗರ,ಯಕ್ಕಿಗುಡಾ ಗ್ರಾಮಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಅಮೀನರೆಡ್ಡಿ ಯಾಳಗಿ ನೇತೃತ್ವದಲ್ಲಿ ಭರ್ಜರಿ ಪ್ರಚಾರ ಕೈಗೊಳ್ಳಲಾಯಿತು.ಕೇಂದ್ರ ಮತ್ತು ರಾಜ್ಯ ಸರಕಾರಗಳ‌ ಅಭೀವೃದ್ದಿ ಕಾರ್ಯಕ್ರಮಗಳು ಜನಹಿತ ಕಾರ್ಯಕ್ರಮಗಳಾಗಿವೆ ಎಂದು ಹೇಳಿದರು.
  ಬಿ ಜೆ ಪಿ ಹಿರಿಯ ಮುಖಂಡರಾದ ಡಾ.ಚಂದ್ರಶೇಖರ ಸುಬೇದಾರ ಮಾತನಾಡಿ, ಮುಂಬರುವ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆ‌ಪಿ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ  ಮತಗಳನ್ನು ನೀಡಿ ರಾಜ್ಯದಲ್ಲಿ ಮತ್ತೊಮ್ಮೆ ಡಬಲ್‌ಇಂಜಿನ್ ಸರ್ಕಾರ ರೂಪಿಸಬೇಕೆಂದು  ಅಭ್ಯರ್ಥಿಯ ಪರ ಮತಯಾಚಿಸಿದರು. ಹಿರಿಯ ಮುಖಂಡರಾದ ಬಸವರಾಜಪ್ಪಗೌಡ ವಿಭೂತಿಹಳ್ಳಿ,   ಸಮುದಾಯದ ಮುಖಂಡರು, ಹಿರಿಯರು ಹಾಗೂ ಸಾರ್ವಜನಿಕರು ಮತ್ತು ಕಾರ್ಯಕರ್ತರು  ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *