ಮಹಾಶೈವ ಧರ್ಮಪೀಠ ವಾರ್ತೆ : ಮಹಾಶೈವ ಧರ್ಮಪೀಠದಲ್ಲಿ 45 ನೆಯ ‘ ಶಿವೋಪಶಮನ ಕಾರ್ಯ’

ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಮೇ 07 ರ ರವಿವಾರದಂದು 45 ನೆಯ ಶಿವೋಪಶಮನ ಕಾರ್ಯ ನಡೆಯಿತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶ್ರೀ ಕ್ಷೇತ್ರಕೈಲಾಸವನ್ನರಸಿ ಬಂದಿದ್ದ ಭಕ್ತರಿಗೆ ಶಿವ ವಿಶ್ವೇಶ್ವರಾನುಗ್ರಹವನ್ನು ಕರುಣಿಸಿದರು.

ಈ ವಾರದ ಭಕ್ತರಲ್ಲಿ ಬಹಳಷ್ಟು ಜನ ಮದುವೆಯ ಸಮಸ್ಯೆಯನ್ನೇ ಹೊತ್ತುಬಂದವರಿದ್ದರು.ಮದುವೆಯಾಗದ ತರುಣ ತರುಣಿಯರು ತಮ್ಮ ದುಃಖ,ದುಗುಡವನ್ನು ಪೀಠಾಧ್ಯಕ್ಷರೆದುರು ತೋಡಿಕೊಂಡರು.ಎಷ್ಟೇಪ್ರಯತ್ನಿಸಿ ,ಎಲ್ಲೆಲ್ಲಿಗೂ ಹೋಗಿಯೂ ಮದುವೆಯಾಗದ ಬಹಳಷ್ಟು ಜನರಿಗೆ ಶ್ರೀ ವಿಶ್ವೇಶ್ವರಾನುಗ್ರಹದಿಂದ ಕಂಕಣಬಲಕೂಡಿ ಬಂದು ಮದುವೆಗಳು ನೆರವೇರಿದುದರಿಂದ ವರಸಿಗದ ಹೆಣ್ಣುಮಕ್ಕಳು,ವಧು ಸಿಗದ ಗಂಡುಮಕ್ಕಳು ಶ್ರೀಕ್ಷೇತ್ರ ಕೈಲಾಸವನ್ನರಸಿ ಬರುತ್ತಿದ್ದಾರೆ.ಲೋಕಕಲ್ಯಾಣಮೂರ್ತಿ ಶಿವ ವಿಶ್ವೇಶ್ವರನು ತನ್ನ ಸನ್ನಿಧಿಯನ್ನರಸಿ ಬರುವವರ ಎಲ್ಲ ಸಂಕಷ್ಟಗಳನ್ನು ಕಳೆದು ಸರ್ವಸುಖ- ಭೋಗಗಳನ್ನಿತ್ತು ಪೊರೆಯುತ್ತಿದ್ದಾನೆ.

ಇಂದಿನ ಅನ್ನ ದಾಸೋಹಿಗಳಾದ ಮಸೀದಪುರದ ಹನ್ಮಂತಪ್ಪ ಪೋಲೀಸ್ ಪಾಟೀಲ್ ಅವರನ್ನು
ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ವಿಶ್ವೇಶ್ವರಾನುಗ್ರಹಪೂರ್ವಕವಾಗಿ ಸನ್ಮಾನಿಸಿ,ಆಶೀರ್ವದಿಸಿದರು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠದ ದಾಸೋಹ ಸಮಿತಿಯ ಮುಖ್ಯಸ್ಥರಾದ ಗುರುಬಸವ ಹುರಕಡ್ಲಿ,ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಬಾಬುಗೌಡ ಯಾದವ್ ಸುಲ್ತಾನಪುರ,ಮೃತ್ಯುಂಜಯ ಯಾದವ್,ಯಲ್ಲಪ್ಪ ಕರಿಗಾರ,ಈರಪ್ಪ ಹಿಂದುಪುರ,ಶಿವಾನಂದ ಹಿಂದುಪುರ, ಪತ್ರಕರ್ತರಾದ ಏಳುಬಾವೆಪ್ಪ ಗೌಡ,ಹನುಮೇಶ,ತಿಪ್ಪಯ್ಯ ಬೋವಿ ಸೇರಿದಂತೆ ಮಹಾಶೈವ ಧರ್ಮಪೀಠದ ಪದಾಧಿಕಾರಿಗಳು,ಭಕ್ತರುಗಳು ಉಪಸ್ಥಿತರಿದ್ದರು.

About The Author