ಕಾಂಗ್ರೆಸ್ಸಿನ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ   – ಗುರುಕಾಮಾ

ಶಹಪುರ : ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲುವ ಭೀತಿಯಿಂದ ಬಿಜೆಪಿಯ ವಿರುದ್ಧ ಅಪಪ್ರಚಾರ ಮಾಡಿ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದೆ ಎಂದು ಇದಕ್ಕೆ ಯಾರು ಕಿವಿಗೊಡಬಾರದು ಎಂದು ವೀರಶೈವ ಲಿಂಗಾಯತ  ಯುವ ಮುಖಂಡ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗುರುಕಾಮಾ ವಿನಂತಿಸಿಕೊಂಡರು.
 ಕೆಲವು ಪತ್ರಿಕೆಗಳಲ್ಲಿ ಲಿಂಗಾಯತರ ವಿರುದ್ಧ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಮಾತನಾಡಿರುವ ನಾವು ಹಿಂದುತ್ವದಲ್ಲಿ ಮುಂದುವರಿಯುತ್ತೇವೆ ಲಿಂಗಾಯತರ ಅಗತ್ಯವಿಲ್ಲ ಎಂಬ ಸುಳ್ಳು ಸುದ್ದಿ ಹಬ್ಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ  ಹಿನ್ನೆಲೆಯಲ್ಲಿ ಗುರು ಕಾಮಾ ಅವರು
ತಾಲೂಕಿನ ಸಗರ ಗ್ರಾಮದಲ್ಲಿ  ಪ್ರತಿಕ್ರಿಯೆ ನೀಡಿದರು.ಅಲ್ಲದೆ ಇದೊಂದು ವೀರಶೈವ ಲಿಂಗಾಯಿತರ ಸಮಾಜ ಹೊಡೆಯುವ ಕುತಂತ್ರ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಷಡ್ಯಂತರ ಮಾಡುತ್ತಾ,ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಖಂಡನೀಯ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಇಂತಹ  ಕುತಂತ್ರ ರಾಜಕೀಯ ಬಿಡಬೇಕು. ಇದನ್ನು ವೀರಶೈವ ಸಮಾಜ ಖಂಡಿಸುತ್ತದೆ.ಇಂಥ ಸುಳ್ಳು ವದಂತಿಗಳ ಹಬ್ಬಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.