ಗುರುಸಲಂ ಗ್ರಾಮದಲ್ಲಿ ಎತ್ತಿನ ಬಂಡಿಯ ಮೂಲಕ ಮತದಾನ ಜಾಗೃತಿ

ವಡಗೇರಾ : ತಾಲೂಕಿನ ಗುಲಸರಂ ಗ್ರಾಮದಲ್ಲಿ ವಿಧಾನಸಭಾ ಚುನಾವಣೆಯ ಮೇ.10ರಂದು ನಡೆಯುವ ಮತದಾನದ ಅಂಗವಾಗಿ ಎತ್ತಿನ ಬಂಡಿಯ ಮೂಲಕ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಶ್ರೀ ಮತಿ ಗರಿಮಾ ಪನ್ವರ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಚಾಲನೆ ನೀಡಿದರು.ತಪ್ಪದೇ ಮತದಾನ ಮಾಡಲು ಗ್ರಾಮಸ್ಥರಿಗೆ ಸಂದೇಶ ನೀಡಿದರು.ಮತದಾರರಲ್ಲಿ ಮತದಾನ ಮಾಡಲು ಪ್ರೇರೇಪಿಸಲು ಹಾಗೂ ಮತದಾನದ ಮಹತ್ವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.

ಗ್ರಾಮದ ಅಟೋ ಸ್ಟಾಂಡ್ ನಿಂದ ಗ್ರಾಮ ಪಂಚಾಯತ್ ಕಚೇರಿ ಆವರಣದ ರವರೆಗೆ ಎತ್ತಿನ ಬಂಡಿಯಲ್ಲಿ ಕುಂಭ ಕಳಸದೊಂದಿಗೆ ಮೆರವಣಿಗೆ ಹಮ್ಮಿಕೊಳ್ಳಲಾಯಿತು.
ಬಸವರಾಜ ಮಾಮನಿ ಜಿಲ್ಲಾ ಚುನಾವಣೆಯ ರಾಯಬಾರಿ ಹಾಗೂ ಕರ್ನಾಟಕ ಹಾಸ್ಯ ಕಲಾವಿದರಿಂದ ಹಾಸ್ಯದೊಂದಿಗೆ ಮತದಾನ ಮಾಡಲು ಜಾಗೃತಿ ಮೂಡಿಸಲಾಯಿತು.

ಬಸವರಾಜ ಸಜ್ಜನ‌ ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ. ವಡಗೇರಾ.ರಾಘವೇಂದ್ರ ವಿ.ಎಚ್ ಸಹಾಯಕ ನಿರ್ದೇಶಕರು ತಾ.ಪಂ.ವಡಗೇರಾ,ಸ್ವ.ಭಾ.ಮಿ ಸಮಾಲೋಚಕರು, ಪಿ.ಡಿ.ಒ, ಟಿ.ಐ.ಇ.ಸಿ, ಸಿಬ್ಬಂದಿ, ಶಾಲಾ ಶಿಕ್ಷಕರು, ಅಂಗನವಾಡಿ ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಪಾಲ್ಹೊಂಡಿದ್ದರು.

 

About The Author