ಜಿಲ್ಲಾಡಳಿತದಿಂದ ಸೈಕಲ್ ಜಾಥದ ಮೂಲಕ ಮತದಾನದ ಕುರಿತು ಜಾಗೃತಿ

ವಡಗೇರಾ :  ಯಾದಗಿರಿ ನಗರದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಕಾರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುಮಾವಣೆ ೨೦೨೩ ಅಂಗವಾಗಿ ಮೇ ೧೦ ರಂದು ನಡೆಯುವ ಚುನಾವಣೆಯ ಕುರಿತು  ಸೈಕ್ಲೋಥಾನ್ ಸೈಕಲ್ ಜಾಥದ ಮೂಲಕ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಜಿಲ್ಲಾದಿಕಾರಿಗಳಾದ ಶ್ರೀಮತಿ ಸ್ನೇಹಲ್ ಆರ್, ಜಿಲ್ಲಾ ಪಂಚಾಯತ್ ಸಿಇಓ ಶ್ರೀಮತಿ ಗರಿಮಾ ಪನ್ವಾರ, ಡಾ|| ವೇದಮೂರ್ತಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಸೈಕಲ್ ಜಾಥ ಮಾಡಿ ಮೇ ೧೦ ರಂದು ತಪ್ಪದೇ ಮತದಾನ ಮಾಡಲು ಜಾಗೃತಿ ಮೂಡಿಸಲಾಯಿತು.
ನಗರದ ಸರಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದಿಂದ, ಸುಭಾಷ ವೃತ್ತ, ಶಾಸ್ತ್ರೀ ವೃತ್ತ, ಹೊಸಬಸ್ ನಿಲ್ದಾಣ, ಹೊಸಳ್ಳಿ ಕ್ರಾಸ್, ಲುಂಬಿನ ಗಾರ್ಡನ ವರೆಗೆ ಸೈಕಲ್ ಜಾಥಾ ಜಾಗೃತಿ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ  ಮತದಾನದ ಪ್ರತಿಜ್ಞಾವಿಧಿ ಭೋದಿಸಲಾಯಿತು.ಈ ಜಾಥ ಕಾರ್ಯದಲ್ಲಿ ಹಿರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಯುವ ಮತದಾರರು,ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು.

About The Author