ಕಾರ್ಯನಿರತ ಪತ್ರಕರ್ತರ ಸಂಘ ಶಹಾಪುರ ಘಟಕ : ಕಾನಿಪ ಸಂಘದಿoದ ಮತದಾನ ಜಾಗೃತಿ ಜಾಥಾ

ಶಹಾಪುರ : ಅತ್ಯಂತ ಪವಿತ್ರವಾದ ಕಾರ್ಯ,ನಮಗೆ ಸಂವಿಧಾನದತ್ತವಾಗಿ ದೊರೆತಿರುವ ಮತವನ್ನು ಯಾರು ಮಾರಾಟ ಮಾಡಿಕೊಳ್ಳಬಾರದು, ಚುನಾವಣೆಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು. ನಮ್ಮ ನಡೆ ಮತದಾನ ಕಡೆ ಮೇ ೧೦ ರಂದು ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಆಮೀಷಕ್ಕೆ ಒಳಗಾಗದೆ ಮತ ಮಾರಿಕೊಳ್ಳದೆ  ಮತ ಚಲಾಯಿಸಿ ಎಂದು ಪತ್ರಕರ್ತ ಹೋರಾಟಗಾರ ಶರಣು ಬಿ.ಗದ್ದುಗೆ ಕರೆ ನೀಡಿದರು.
ನಗರದಲ್ಲಿ ಗುರುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಹಾಪುರ ಘಟಕದಿಂದ ಆಯೋಜಿಸಿದ ಮತದಾನ ಜಾಗೃತಿ ಜಾಥಾ ಅಭಿಯಾನದಲ್ಲಿ ಜಾಗೃತಿ ಕರ ಪತ್ರಗಳನ್ನು ವಿತರಿಸಿ ಮಾತನಾಡಿದರು.ಮತದಾನ ಮಾಡುವುದು ನಿಜವಾದ ದೇಶ ಪ್ರೇಮವಾಗಿದೆ. ಮತದಾನದ ಮೂಲಕ ಸುಭದ್ರ ಮತ್ತು ಬಲಿಷ್ಠ ರಾಷ್ಟ ನಿರ್ಮಾಣ ಮಾಡಲು ಸಾಧ್ಯ. ಮತ ಹಾಕುವವರು ಜಾತಿ, ಧರ್ಮ, ಭೇದ ಭಾವ, ಪಕ್ಷಗಳನ್ನು ನೋಡದೇ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಮತ ಮಾರಿಕೊಂಡರೆ ಅದು ನಮ್ಮನ್ನು ನಾವು ಮಾರಾಟ ಮಾಡಿಕೊಂಡಂತಾಗಲಿದೆ. ತಾಯಿಯಷ್ಟೇ ಪವಿತ್ರವಾದದ್ದು ಮತದಾನ. ಅದನ್ನು ಅತ್ಯಂತ ಜಾಗೃತೆಯಿಂದ ಚಲಾಯಿಸಬೇಕು ಎಂದರು.
ಕಾನಿಪ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರು ಮಾತನಾಡಿ ಚುನಾವಣೆ ಪ್ರಜಾಪ್ರಭುತ್ವದ ಅಡಿಪಾಯ. ಕಡ್ಡಾಯವಾಗಿ ಎಲ್ಲರೂ ಮತ ಹಾಕೋಣ. ಬಲಿಷ್ಠ ರಾಷ್ಟ ನಿರ್ಮಾಣಕ್ಕೆ ಕೈ ಜೋಡಿಸೋಣ.ಯಾವುದೇ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗದೆ ಎಲ್ಲರೂ ಮತಗಟ್ಟೆಗೆ ಬಂದು ಮೇ, ೧೦ ರಂದು ಸೂಕ್ತ ವ್ಯಕ್ತಿಗೆ ಮತದಾನ ಮಾಡಬೇಕು, ತಪ್ಪದೇ ನೀವು ವೋಟ್ ಮಾಡಿ ನಿಮ್ಮ ಹತ್ತಿರದವರನ್ನು ಪ್ರಾಮಾಣಿಕವಾಗಿ ಓಟು ಮಾಡಲು ಪ್ರೋತ್ಸಾಹಿಸಿ  ಎಂದು ಕರೆ ನೀಡಿದರು. ಹಿರಿಯ ಪತ್ರಕರ್ತರಾದ ನಾರಾಯಣಚಾರ್ಯ ಸಗರ,ಪ್ರಹ್ಲಾದ ತಿಳಗೂಳ,ಅಮರೇಶ ಹಿರೇಮಠ,ಮಲ್ಲಯ್ಯ ಪೊಲಂಪಲ್ಲಿ,ಬಸವರಾಜ ಕರೆಗಾರ,ಭಾಗೇಶ ರಸ್ತಾಪುರ,ರಾಘವೇಂದ್ರ ಹಾರಣಗೇರಾ,ಮಂಜುನಾಥ ಬಿರಾದಾರ ಸೇರಿದಂತೆ ಪ್ರೊ.ಶಿವಲಿಂಗಣ್ಣ ಸಾಹು ಹಾಗೂ ಇನ್ನಿತರರು ಸಾಥ್ ನೀಡಿದರು.

About The Author